• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೌಡಿ ವಿಕಾಸ್ ದುಬೆ ಪೊಲೀಸರನ್ನು ಕೊಲ್ಲಲು ಈ ಕಾಯಿಲೆ ಕಾರಣವಾಯಿತೇ?

|

ಲಕ್ನೋ, ಜುಲೈ 25: ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ಗ್ಯಾಂಗ್‌ಸ್ಟರ್‌ಗೆ ಒಂದು ಕಾಯಿಲೆ ಇತ್ತು ಎಂದು ಪತ್ನಿ ರಿಚಾ ಹೇಳಿದ್ದಾರೆ.

   ಯೋಧನ ಪತ್ನಿಗೆ ಸರ್ಕಾರಿ ಕೆಲಸ, 5 ಕೋಟಿ ದುಡ್ಡು, ಸೈಟು | Oneindia Kannada

   ವಿಕಾಸ್ ಎಲ್ಲಾ ವಿಚಾರಗಳನ್ನೂ ಗಂಭೀರವಾಗಿ ತೆಗೆದುಕೊಂಡು ಆತಂಕಕ್ಕೆ ಒಳಗಾಗುತ್ತಿದ್ದರು. ಹೀಗಾಗಿ ಅವರು ಮೂರ್ನಾಲ್ಕು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅವರೊಬ್ಬ' ಆಂಕ್ಸೈಟಿ ಪೇಷೆಂಟ್' ಎಂದು ರಿಚಾ ಹೇಳಿದ್ದಾರೆ.

   'ತೆಲಂಗಾಣ ಪ್ರಕರಣ ರೀತಿ ಮಾಡೋಣ': ವಿಕಾಸ್ ದುಬೆ ಕೇಸ್‌ ಬಗ್ಗೆ ಸುಪ್ರೀಂ ಚಿಂತನೆ

   ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ದೇವಸ್ಥಾನವೊಂದರಲ್ಲಿ ಪೊಲೀಸರು ಬಂಧಿಸಿದ್ದರು, ಪೊಲೀಸ್ ವಾಹನದಲ್ಲಿ ಕರೆದೊಯ್ಯುವ ವೇಳೆ ಅಪಘಾತವಾಗಿತ್ತು. ಆಗ ಪೊಲೀಸರ ಆಯುಧಗಳನ್ನೇ ಬಳಸಿ ಅವರ ಮೇಲೆ ದಾಳಿ ಮಾಡಿ ಓಡಿ ಹೋಗಲು ಯತ್ನಿಸಿದ್ದ ಕಾರಣ ಪೊಲೀಸರು ಎನ್‌ಕೌಂಟರ್ ಮಾಡಿ ಆತನನ್ನು ಹತ್ಯೆ ಮಾಡಿದ್ದರು.

   ಎಂಟು ಮಂದಿ ಪೊಲೀಸರ ಹತ್ಯೆ ಕುರಿತು ವಿಕಾಸ್ ದುಬೆ ಯಾವುದಾದರೂ ವಿಚಾರವನ್ನು ಪತ್ನಿಯ ಬಳಿ ಹಂಚಿಕೊಂಡಿದ್ದನೇ ಎನ್ನುವ ಕುರಿತು ಮಾಹಿತಿ ಪಡೆಯಲು ರಿಚಾ ಅವರನ್ನು ವಿಚಾರಣೆ ನಡೆಸಲಾಯಿತು.

   ಪೊಲೀಸರ ಎನ್‌ಕೌಂಟರ್‌ ಬಗ್ಗೆ ನನಗೆ ಮಾಹಿತಿ ಇಲ್ಲ

   ಪೊಲೀಸರ ಎನ್‌ಕೌಂಟರ್‌ ಬಗ್ಗೆ ನನಗೆ ಮಾಹಿತಿ ಇಲ್ಲ

   ಪೊಲೀಸರನ್ನು ಎನ್‌ಕೌಂಟರ್ ಮಾಡಿರುವ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ, ಒಂದೊಮ್ಮೆ ನಾನು ಅಲ್ಲಿದ್ದಿದ್ದರೆ ಅದನ್ನು ಖಂಡಿತವಾಗಿಯೂ ತಡೆಯುತ್ತಿದ್ದೆ. ನನಗೊಬ್ಬಳಿಗೆ ಆ ಘಟನೆಯನ್ನು ತಡೆಯುವ ಶಕ್ತಿ ಇತ್ತು ಎಂದು ರಿಚಾ ಹೇಳಿದ್ದಾರೆ.

   ವಿಕಾಸ್ ದುಬೆಗಿತ್ತು ಮಾನಸಿಕ ಕಾಯಿಲೆ

   ವಿಕಾಸ್ ದುಬೆಗಿತ್ತು ಮಾನಸಿಕ ಕಾಯಿಲೆ

   ವಿಕಾಸ್ ದುಬೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಳು. ಮೂನ್ರಾಲ್ಕು ವರ್ಷಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು, ಈ ಕುರಿತು ಆಸ್ಪತ್ರೆಯ ವರದಿ ನನ್ನ ಬಳಿ ಇದೆ. ಅವರ ಮಾನಸಿಕ ಖಿನ್ನತೆಯೇ ಪೊಲೀಸರನ್ನು ಹತ್ಯೆ ಮಾಡುವಂತೆ ಮಾಡಿದೆ ಎಂದಿದ್ದಾರೆ.

   ಮಕ್ಕಳ ಜೊತೆ ಮನೆ ಬಿಟ್ಟು ಹೋಗು ಎಂದು ಹೇಳಿದ್ದರು

   ಮಕ್ಕಳ ಜೊತೆ ಮನೆ ಬಿಟ್ಟು ಹೋಗು ಎಂದು ಹೇಳಿದ್ದರು

   ಅಂದು ಕರೆ ಮಾಡಿ ಇಲ್ಲಿ ಪೊಲೀಸರು ಹಾಗೂ ನಮ್ಮ ನಡುವೆ ಗುಂಡಿನ ಚಕಮಕಿ ನಡಯುತ್ತಿದೆ. ನೀನು ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗು ಎಂದು ಹೇಳಿದ್ದರು. ಬಳಿಕ ನಾನು ಅಲ್ಲಿಂದ ಹೊರಟುಬಿಟ್ಟೆ, ಬಳಿಕ ಫಿಯೋನಿಕ್ಸ್ ಮಾಲ್ ಬಳಿ ಇರುವ ಕಾಂಪ್ಲೆಕ್ಸ್‌ಗೆ ಬಂದೆವು, ಅಲ್ಲಿ ಏಳು ದಿನಗಳ ಕಾಲ ಇದ್ದೆವು ಎಂದು ವಿವರಿಸಿದ್ದಾರೆ.

   ಪೊಲೀಸರನ್ನು ಹತ್ಯೆ ಮಾಡಿರುವ ಬಗ್ಗೆ ಹೇಳಿರಲಿಲ್ಲ

   ಪೊಲೀಸರನ್ನು ಹತ್ಯೆ ಮಾಡಿರುವ ಬಗ್ಗೆ ಹೇಳಿರಲಿಲ್ಲ

   ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿರುವ ಬಗ್ಗೆ ಅವರು ಮಾತನಾಡಿರಲಿಲ್ಲ, ಅಲ್ಲಿಂದ ಮಕ್ಕಳನ್ನು ಕರೆದುಕೊಂಡು ಹೊರಟುಬಿಡು ಎಂದಷ್ಟೇ ಹೇಳಿದ್ದರು. ಮರುದಿನ ಟಿವಿಯನ್ನು ವೀಕ್ಷಿಸಿದಾಗಲೇ ಘಟನೆ ಬಗ್ಗೆ ಅರಿವಾಗಿತ್ತು.ವಿಕಾಸ್ ದುಬೆ ವಿಚಾರ ಕುರಿತು ಎಲ್ಲಿಯೂ ನಾನು ಮಾತನಾಡಿರಲಿಲ್ಲ. ಕಳ್ಳನ ಮಗ ಕಳ್ಳನೇ ಆಗುತ್ತಾರೆ, ವೈದ್ಯನ ಮಗ ವೈದ್ಯನೇ ಆಗುತ್ತನೆ, ನಾನೂ ಕೂಡ ನನ್ನ ಮಕ್ಕಳನ್ನುಉತ್ತಮ ಪ್ರಜೆಯನ್ನಾಗಿ ಮಾಡಬೇಕಿದೆ.

   English summary
   Richa Dubey, the wife of late gangster Vikas Dubey, said that her husband was an anxiety patient and was undergoing treatment for the past three to four years.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X