ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪಲ್ ಉದ್ಯೋಗಿ ಹತ್ಯೆ : ಕೋಟಿ ರುಪಾಯಿ ಪರಿಹಾರ ಕೇಳಿದ ಪತ್ನಿ

|
Google Oneindia Kannada News

ಲಖನೌ, ಸೆಪ್ಟೆಂಬರ್ 29 : ಪೊಲೀಸರ ಬಂದೂಕಿನಿಂದ ಸಿಡಿದ ಗುಂಡಿನಿಂದ ಹತ್ಯೆಗೀಡಾದ ಆಪಲ್ ಕಂಪನಿ ಉದ್ಯೋಗಿ ವಿವೇಕ್ ತಿವಾರಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಅವರ ಪತ್ನಿ ಕಲ್ಪನಾ ತಿವಾರಿ ಅವರು ಆಗ್ರಹಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.

Apple ಸೇಲ್ಸ್ ಮ್ಯಾನೇಜರ್ ನನ್ನು ಕೊಂದ ಪೊಲೀಸ್ ಪೇದೆ Apple ಸೇಲ್ಸ್ ಮ್ಯಾನೇಜರ್ ನನ್ನು ಕೊಂದ ಪೊಲೀಸ್ ಪೇದೆ

ನಮ್ಮ ಕುಟುಂಬಕ್ಕೆ ನ್ಯಾಯ ಸಿಗಬೇಕಿದ್ದರೆ ಪೊಲೀಸರಿಂದ ತನಿಖೆ ಮಾಡುವುದು ಬೇಡ, ಸಿಬಿಐನಿಂದಲೇ ತನಿಖೆಯಾಗಬೇಕು ಎಂದಿರುವ ಅವರು, ಪೊಲೀಸ್ ಇಲಾಖೆಯಲ್ಲಿ ತಮ್ಮ ಯೋಗ್ಯತೆಗೆ ಅನುಸಾರ ಉದ್ಯೋಗ ನೀಡಬೇಕು ಮತ್ತು ಹೆಂಡತಿ ಮಕ್ಕಳ ಭವಿಷ್ಯಕ್ಕಾಗಿ ಕನಿಷ್ಠ ಒಂದು ಕೋಟಿ ರುಪಾಯಿ ಪರಿಹಾರ ದೊರಕಿಸಿಕೊಡಬೇಕು ಎಂದು ಕೋರಿದ್ದಾರೆ.

ಸೋಶಿಯಲ್ ಮಿಡಿಯಾ ಐಕಾನ್, ರೂಪದರ್ಶಿ ತರಾ ಬರ್ಬರ ಹತ್ಯೆ ಸೋಶಿಯಲ್ ಮಿಡಿಯಾ ಐಕಾನ್, ರೂಪದರ್ಶಿ ತರಾ ಬರ್ಬರ ಹತ್ಯೆ

ಶನಿವಾರ ಬೆಳಗಿನ ಜಾವ ಆಪಲ್ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ವಿವೇಕ್ ಅವರ ಕಾರನ್ನು ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಅವರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ, ಪೊಲೀಸರು ಸಿಡಿಸಿದ ಗುಂಡಿಗೆ ವಿವೇಕ್ ತಿವಾರಿ ಬಲಿಯಾಗಿದ್ದಾರೆ. ಗುಂಡು ವಿವೇಕ್ ಅವರ ಕತ್ತಿಗೆ ತಗುಲಿ ಅವರು ಸಾವನ್ನಪ್ಪಿದ್ದಾರೆ. ಅವರ ಸ್ನೇಹಿತೆಗೂ ಗಾಯಗಳಾಗಿವೆ.

ಇದರಲ್ಲಿ ಭಾಗಿಯಾಗಿರುವ ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದ್ದು, ತನಿಖೆಗಾಗಿ ವಿಶೇಷ ತನಿಖಾ ದಳವನ್ನು ರಚಿಸಲಾಗಿದೆ. ಕ್ರೈಂ ಬ್ರಾಂಚಿನ ಎಸ್ಪಿ ಮತ್ತು ಲಖನೌ ಗ್ರಾಮೀಣ ವಿಭಾಗದ ಎಸ್ಪಿ ಕೂಡ ಈ ದಳದಲ್ಲಿದ್ದು, ಸದ್ಯದಲ್ಲಿಯೇ ವರದಿ ನೀಡಲಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆನಂದ್ ಕುಮಾರ್ ಅವರು ಹೇಳಿದ್ದಾರೆ. ಅಮಾನತಾಗಿರುವ ಪೊಲೀಸರು ತಾವು ಸ್ವಯಂರಕ್ಷಣೆಗಾಗಿ ಗುಂಡು ಹಾರಿಸಿದ್ದಾಗಿ ಹೇಳಿದ್ದಾರೆ.

ಪೊಲೀಸ್ ಠಾಣೆಗೆ ಪ್ರಿಯತಮೆಯ ರುಂಡ ಹಿಡಿದು ತಂದ ಯುವಕ! ಪೊಲೀಸ್ ಠಾಣೆಗೆ ಪ್ರಿಯತಮೆಯ ರುಂಡ ಹಿಡಿದು ತಂದ ಯುವಕ!

Wife of Vivek Tiwari demands CBI inquiry and job police dept

ಶನಿವಾರ ವಿವೇಕ್ ತಿವಾರಿ ಮೇಲೆ ಗುಂಡು ಹಾರಿಸಿರುವುದು ಎನ್ಕೌಂಟರ್ ಅಲ್ಲ. ಈ ಪ್ರಕರಣದ ತನಿಖೆ ನಡೆಸಲಾಗುವುದು. ಆಗತ್ಯ ಬಿದ್ದರೆ ಸಿಬಿಐ ತನಿಖೆಗೂ ಆದೇಶ ನೀಡಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣ ವಿರಾಟ್ ಸ್ವರೂಪ ಪಡೆಯುತ್ತಿದ್ದು, ವಿರೋಧ ಪಕ್ಷದವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸುತ್ತಿದ್ದಾರೆ.

English summary
Kalpana Tiwari, wife of Vivek Tiwari (who died after he was shot at by police last night) writes to CM Yogi Adityanath demanding a CBI inquiry into the incident. She has also demanded a compensation of Rs 1 crore and a job in the police department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X