ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳನ್ನು ಹೆರುವುದು ನೀವು, ಖರ್ಚನ್ನೇಕೆ ಸರ್ಕಾರ ಭರಿಸಬೇಕು?; ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

|
Google Oneindia Kannada News

ಲಕ್ನೊ, ಮಾರ್ಚ್ 01: "ಮಕ್ಕಳನ್ನು ಹೆರುವುದು ನೀವು. ಆದರೆ ಸರ್ಕಾರ ಏಕೆ ಅವರ ಖರ್ಚನ್ನು ಭರಿಸಬೇಕು?" ಎಂಬ ಹೇಳಿಕೆ ನೀಡಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ರಮೇಶ್ ದಿವಾಕರ್ ವಿವಾದ ಹುಟ್ಟುಹಾಕಿದ್ದಾರೆ.

ಭಾನುವಾರ ಇಲ್ಲಿನ ಔರಿಯಾದಲ್ಲಿ "ಜನಸುನ್ವಾಯ್" ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಮೇಶ್ ದಿವಾಕರ್, ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ಅವರ ಶಿಕ್ಷಣ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಮಹಿಳಾ ಗುಂಪೊಂದು ಕಾರ್ಯಕ್ರಮದಲ್ಲಿ ಮನವಿ ಮಾಡಿದ್ದು, ಆ ಸಂದರ್ಭ ಶಾಸಕರು ಮಹಿಳೆಯರಿಗೆ ಹೀಗೆ ಉತ್ತರಿಸಿದ್ದಾರೆ.

 ಮುಸ್ಲಿಮರಲ್ಲಿ ಸಂತಾನಶಕ್ತಿ ಹೆಚ್ಚು; ವಿವಾದ ಹುಟ್ಟುಹಾಕಿದ ಬಿಜೆಪಿ ನಾಯಕನ ಹೇಳಿಕೆ ಮುಸ್ಲಿಮರಲ್ಲಿ ಸಂತಾನಶಕ್ತಿ ಹೆಚ್ಚು; ವಿವಾದ ಹುಟ್ಟುಹಾಕಿದ ಬಿಜೆಪಿ ನಾಯಕನ ಹೇಳಿಕೆ

"ಮಕ್ಕಳನ್ನು ಹೆರುವುದು ನೀವು. ಆದರೆ ಸರ್ಕಾರ ಅವರ ಖರ್ಚನ್ನು ಭರಿಸಬೇಕೆ?" ಎಂದು ಪ್ರಶ್ನಿಸಿರುವ ಅವರು, "ಸರ್ಕಾರಿ ಶಾಲೆಗಳಲ್ಲಿ ಶುಲ್ಕವಿಲ್ಲವಲ್ಲ. ಅಲ್ಲಿಗೇ ಮಕ್ಕಳನ್ನು ಸೇರಿಸಿ" ಎಂದು ಸಲಹೆ ನೀಡಿದ್ದಾರೆ.

Why Should Government Bear Expense Of Your Children BJP Mla Controversial Statement

ಈ ಹೇಳಿಕೆ ನೀಡಿದ ಸಂದರ್ಭವನ್ನು ವಿಡಿಯೋ ಮಾಡಿಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಸಕರ ಈ ಹೇಳಿಕೆಗೆ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ವಿರೋಧ ವ್ಯಕ್ತಪಡಿಸಿದ್ದು, "ಈ ಹೇಳಿಕೆ ಬಿಜೆಪಿಯ ಮಹಿಳಾ ವಿರೋಧಿ ಮನಸ್ಥಿತಿಯನ್ನು ತೋರುತ್ತಿದೆ. ಮಹಿಳೆಯರ ಮೇಲೆ ಬಿಜೆಪಿಗೆ ಗೌರವವಿಲ್ಲ" ಎಂದಿದ್ದಾರೆ.

English summary
You give birth, why should government bear expense? Uttar Pradesh BJP leader Ramesh Diwakar statement triggers controversy,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X