ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಅರ್ಧ ದಾರಿಯಲ್ಲೇ ಪೊಲೀಸರು ತಡೆದಿದ್ದೇಕೆ..?

|
Google Oneindia Kannada News

ಲಕ್ನೋ, ಡಿಸೆಂಬರ್ 24: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರಾಣ ಕಳೆದುಕೊಂಡ ಕುಟುಂಬಸ್ಥರನ್ನು ಭೇಟಿಯಾಗಲು ಮೀರತ್ ಗೆ ಹೋಗುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಅರ್ಧ ದಾರಿಯಲ್ಲೇ ಉತ್ತರ ಪ್ರದೇಶ ಪೊಲೀಸರು ತಡೆದಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಳೆದ ವಾರ ನಡೆದಿದ್ದ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ ಆರು ಜನರು ಪ್ರಾಣ ಕಳೆದುಕೊಂಡಿದ್ದರು.

ಕೇಂದ್ರಕ್ಕೆ ಸೋನಿಯಾ ಪೆಟ್ಟು, ಕಾಂಗ್ರೆಸ್‌ ರಾಜ್ಯಗಳಲ್ಲಿ ಸಿಎಎ ಇಲ್ಲಕೇಂದ್ರಕ್ಕೆ ಸೋನಿಯಾ ಪೆಟ್ಟು, ಕಾಂಗ್ರೆಸ್‌ ರಾಜ್ಯಗಳಲ್ಲಿ ಸಿಎಎ ಇಲ್ಲ

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಇಂದು ಬೆಳಿಗ್ಗೆ ಕಾರಿನ ಮೂಲಕ ಮೀರತ್ ಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ದೆಹಲಿಯಿಂದ 60 ಕಿ.ಮೀ ದೂರದ ಮೀರತ್ ಗೆ ಹೋಗದಂತೆ ಕಾಂಗ್ರೆಸ್ ನಾಯಕರಿಗೆ ತಿಳಳಿಸಿದ್ದರು.

Why Did The Police Stop Rahul And Priyanka In Half Way?

ಈ ಪ್ರದೇಶದಲ್ಲಿ ಹೆಚ್ಚು ಜನ ಸೇರುವುದನ್ನು ನಿಷೇಧಿಸಿರುವ ಕಾರಣ ಪೊಲೀಸರು ಪ್ರವೇಶ ನಿರಾಕರಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ವಾಪಸ್ ಆಗಿದ್ದಾರೆ.

'ಬೆಚೇಂದ್ರ ಮೋದಿ' ಎಂದು ಪ್ರಧಾನಿ ಮೋದಿಯ ಕಾಲೆಳೆದ ರಾಹುಲ್ ಗಾಂಧಿ'ಬೆಚೇಂದ್ರ ಮೋದಿ' ಎಂದು ಪ್ರಧಾನಿ ಮೋದಿಯ ಕಾಲೆಳೆದ ರಾಹುಲ್ ಗಾಂಧಿ

ಪ್ರವೇಶ ನಿರಾಕರಣೆಯ ಆದೇಶ ಪ್ರತಿ ತೋರಿಸುವಂತೆ ಪೊಲೀಸರನ್ನು ನಾವು ಕೇಳಿದೆವು, ಆದರೆ ಅವರು ಯಾವುದನ್ನು ತೋರಿಸಲಿಲ್ಲ. ದಯವಿಟ್ಟು ಹಿಂತಿರುಗಿ ಎಂದಷ್ಟೇ ಹೇಳಿದರು. ಹಾಗಾಗಿ ನಮ್ಮ ಭೇಟಿಯನ್ನು ಮುಂದೂಡಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

English summary
Uttar Pradesh Police have blocked Congress leader Rahul Gandhi and Priyanka Gandhi, who were on their way to Meerut to meet the families of those who lost their lives in protest of the Citizenship Amendment Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X