ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ತೀರ್ಪು: ಯೋಗಿ ಆದಿತ್ಯನಾಥ್ ಸರ್ಕಾರದ ತಯಾರಿಗಳೇನು?

|
Google Oneindia Kannada News

ಲಕ್ನೋ, ನವೆಂಬರ್ 8: ಅಯೋಧ್ಯೆಯ ರಾಮಮಂದಿರ ಹಾಗೂ ಬಾಬ್ರಿ ಮಸೀದಿ ತೀರ್ಪು ಕೆಲವೇ ದಿನಗಳಲ್ಲಿ ಪ್ರಕಟವಾಗುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ನವೆಂಬರ್ 17ರಂದು ಸಿಜೆಐ ರಂಜನ್ ಗೊಗೊಯ್ ತೀರ್ಪು ಪ್ರಕಟಿಸಲಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಇಡೀ ಉತ್ತರ ಪ್ರದೇಶದಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಅಯೋಧ್ಯೆ ತೀರ್ಪು: ರಾಜ್ಯಗಳಿಗೆ ಬಿಗಿಭದ್ರತೆಗೆ ಕೇಂದ್ರದ ಸೂಚನೆಅಯೋಧ್ಯೆ ತೀರ್ಪು: ರಾಜ್ಯಗಳಿಗೆ ಬಿಗಿಭದ್ರತೆಗೆ ಕೇಂದ್ರದ ಸೂಚನೆ

ಉತ್ತರ ಪ್ರದೇಶಕ್ಕೆ ಉಗ್ರರ ದಾಳಿ ಎಚ್ಚರಿಕೆ ಇರುವ ಕಾರಣ ಸಾಮಾಜಿಕ ಜಾಲತಾಗಳಲ್ಲಿ ಬರುವ ಎಚ್ಚರಿಕೆ ಸಂದೇಶ ಮುಂತಾದವುಗಳನ್ನು ಗಂಭೀರವಾಗಿ ಪರಿಗಣಿಸಲು ತಿಳಿಸಲಾಗಿದೆ. ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಶಾಲೆಗಳನ್ನು ತಾತ್ಕಾಲಿಕ ಜೈಲುಗಳನ್ನಾಗಿ ಮಾಡಲಾಗಿದೆ.

ಹೆಚ್ಚು ಹೆಲಿಕಾಪ್ಟರ್‌ಗಳ ನಿಯೋಜನೆ

ಹೆಚ್ಚು ಹೆಲಿಕಾಪ್ಟರ್‌ಗಳ ನಿಯೋಜನೆ

ರಾಮಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ಕುರಿತು ತೀರ್ಪು ಹೊರಬೀಳಲಿರುವುದರಿಂದ ಭದ್ರತಾ ಕ್ರಮಗಳ ಭಾಗವಾಗಿ, ಅಯೋಧ್ಯೆಯ ನಂತರದ ತೀರ್ಪಿನ ನಂತರ ಯಾವುದೇ ಅಗತ್ಯವಿದ್ದಲ್ಲಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗುತ್ತಿದೆ.

ಯೋಗಿ ಸರ್ಕಾರದಿಂದ ಏನೇನು ಸಿದ್ಧತೆ

ಯೋಗಿ ಸರ್ಕಾರದಿಂದ ಏನೇನು ಸಿದ್ಧತೆ

ನವೆಂಬರ್ 17ರಂದು ಸುಪ್ರೀಂಕೋರ್ಟ್‌ನಿಂದ ಅಯೋಧ್ಯೆ ತೀರ್ಪು ಬರಲಿರುವ ಕಾರಣ ಹೆಲಿಕಾಪ್ಟರ್ ಸಿದ್ಧತೆ ಹಾಗೂ 24/7 ನಿಯಂತ್ರಣ ಕೊಠಡಿಯನ್ನು ತೆರಯಲಾಗುತ್ತಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯಾವುದೇ ಕಾರಣಕ್ಕೂ ದೇಶದ ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ

ಉತ್ತರ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ

ಅಯೋಧ್ಯೆ ತೀರ್ಪು ಹೊರಬೀಳಲಿರುವ ಕಾರಣ ಉತ್ತರ ಪ್ರದೇಶ, ಅಯೋಧ್ಯೆಯಲ್ಲಿ ಬಿಗಿ ಭದ್ರತೆ ನಿಯೋಜಿಸುವಂತೆ ಕೇಂದ್ರ ಸರ್ಕಾರವು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸೂಚನೆ ನೀಡಿದೆ. ಅಂತೆಯೇ ರೈಲ್ವೆ ನಿಲ್ದಾಣ, ಧಾರ್ಮಿಕ ಸ್ಥಳಗಳ, ಶಾಲಾ-ಕಾಲೇಜುಗಳ ಆಸು ಪಾಸಿನಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ತಿಳಿಸಲಾಗಿದೆ.

4 ಸಾವಿರ ಸೈನಿಕರ ನಿಯೋಜನೆ

4 ಸಾವಿರ ಸೈನಿಕರ ನಿಯೋಜನೆ

4,000 ಕ್ಕೂ ಹೆಚ್ಚು ಸೈನಿಕರನ್ನು ಅಯೋಧ್ಯೆಯಲ್ಲಿ ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಮುನ್ನೆಚ್ಚರಿಕೆ ಕ್ರಮವಾಗಿ ಅಯೋಧ್ಯೆಯಲ್ಲಿ ಸೆಕ್ಷನ್ 144 ಅನ್ನು ಈಗಾಗಲೇ ಜಾರಿಗೆ ತರಲಾಗಿದೆ.

English summary
As the Supreme Court verdict on the Ayodhya land dispute case can be out any day before 17 November, the Uttar Pradesh (UP) and the Union governments have accelerated the preparations to keep the law and order intact.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X