BKUನಲ್ಲಿ ಒಡಕು: 'ವಿಭಜನೆ ಮಾಡುವುದು ಸರ್ಕಾರದ ಕೆಲಸ' ಟಿಕಾಯತ್
ಮುಜಾಫರ್‌ನಗರ ಮೇ 17: ಭಾರತೀಯ ಕಿಸಾನ್ ಯೂನಿಯನ್‌ನಿಂದ ಹೊರಬಂದ ಬಳಿಕ ರೈತ ಮುಖಂಡ ರಾಕೇಶ್ ಟಿಕಾಯತ್ ಬಿಜೆಪಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರೈತ ಚಳಿವಳಿಯನ್ನು ಒಡೆಯುವುದು ಸರ್ಕಾರದ ಕೆಲ ಆದರೆ ನಾವು ಉಸಿರುರುವವರೆಗೂ ರೈತರ ಪರ ಹೋರಾಟ ಮಾಡುತ್ತೇವೆ' ಎಂದಿದ್ದಾರೆ.
ಜೊತೆಗೆ ಭಾರತೀಯ ಕಿಸಾನ್ ಯೂನಿಯನ್‌ನಲ್ಲಿ ಒಡಕು ಮೂಡಿಸುವ ಬಿಜೆಪಿ ಸರ್ಕಾರವನ್ನು ಗುರಿಯಾಗಿದೆ. ರೈತರ ದನಿಯನ್ನು ಮತ್ತಷ್ಟು ಹೆಚ್ಚಿಸುವುದು ನಮ್ಮ ಧರ್ಮ. ಅವರ ಹಕ್ಕುಗಳನ್ನು ರಕ್ಷಿಸಿ. ನಮ್ಮ ಕೊನೆಯ ಉಸಿರು ಇರುವವರೆಗೂ ರೈತರ ಹೋರಾಟ ಮುಂದುವರಿಯಲಿದೆ ಎಂದರು.
ರಾಜಕೀಯದತ್ತ ರಾಕೇಶ್ ಟಿಕಾಯತ್: ಬಿಕೆಯುನಿಂದ ಉಚ್ಚಾಟನೆ

ರಾಕೇಶ್ ಟಿಕಾಯತ್ ಹೇಳಿದ್ದೇನು?
ಭಾರತೀಯ ಕಿಸಾನ್ ಯೂನಿಯನ್ (ರಾಜಕೀಯೇತರ) ರಚನೆಯ ಕುರಿತು ಮಾತನಾಡಿದ ರಾಕೇಶ್ ಟಿಕಾಯತ್ ಅವರು ಈ ಎಲ್ಲದರ ಹಿಂದೆ ಸರ್ಕಾರದ ಕೈವಾಡವಿದೆ ಎಂದು ಹೇಳಿದ್ದಾರೆ. ಈ ಎಲ್ಲದರ ಹಿಂದೆ ಸರ್ಕಾರವಿದೆ ಮತ್ತು ಅದು ಎಲ್ಲವನ್ನೂ ಮಾಡಿದೆ ಎಂದು ಟಿಕಾಯತ್ ಹೇಳಿದರು. 26, 27 ಮತ್ತು 28 ಜನವರಿ 2021 ರಂದು ಜನರು ಶರಣಾಗಿದ್ದರು. ಅದೇ ರೀತಿ ಮೇ 15ರಂದು ಕೂಡ ಕೆಲವರು ಸರ್ಕಾರದ ಮುಂದೆ ಶರಣಾಗಿದ್ದಾರೆ. ಈ ಹಿಂದೆಯೂ ಹಲವಾರು ಮಂದಿ ನಮ್ಮ ಸಂಸ್ಥೆಯನ್ನು ತೊರೆದಿದ್ದಾರೆ. ಉತ್ತರ ಪ್ರದೇಶದಲ್ಲಿಯೇ ಭಾರತೀಯ ಕಿಸಾನ್ ಒಕ್ಕೂಟದಿಂದ ಬೇರ್ಪಟ್ಟು 8 ರಿಂದ 10 ಸಂಘಟನೆಗಳನ್ನು ರಚಿಸಲಾಗಿದೆ ಎಂದು ಟಿಕಾಯತ್ ಹೇಳಿದರು.

ಟಿಕಾಯತ್ ಸಹೋದರರು ಬಿಕೆಯುನಿಂದ ವಜಾ
ರೈತರ ನಾಯಕ ದಿವಂಗತ ಮಹೇಂದ್ರ ಸಿಂಗ್ ಟಿಕಾಯತ್ ಅವರ 11 ನೇ ಪುಣ್ಯತಿಥಿಯಂದು ಅವರು ರಚಿಸಿದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಎರಡು ಬಣಗಳಾಗಿ ಒಡೆದಿದೆ. ಭಾನುವಾರ ಲಕ್ನೋದ ಶುಗರ್‌ಕೇನ್ ಇನ್‌ಸ್ಟಿಟ್ಯೂಟ್ ಸಭಾಂಗಣದಲ್ಲಿ ನಡೆದ ಬಿಕೆಯು ಕಾರ್ಯಕಾರಿ ಸಭೆಯಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಅವರ ಇಬ್ಬರು ಮಕ್ಕಳಾದ ನರೇಶ್ ಟಿಕಾಯತ್ ಮತ್ತು ರಾಕೇಶ್ ಟಿಕಾಯತ್ ಅವರನ್ನು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಿಂದ ವಜಾಗೊಳಿಸಲಾಗಿದೆ. ನರೇಶ್ ಟಿಕಾಯತ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದಲೂ ತೆಗೆದುಹಾಕಲಾಗಿದೆ.

ಟಿಕಾಯತ್ ಮೇಲೆ ರಾಜೇಶ್ ಸಿಂಗ್ ಆರೋಪ
ರಾಜೇಶ್ ಸಿಂಗ್ ಚೌಹಾಣ್ ಅವರನ್ನು ಬಿಕೆಯು(ರಾಜಕೀಯೇತರ)ನ ನೂತನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರು ಅಧ್ಯಕ್ಷರಾದ ತಕ್ಷಣ, ರಾಜೇಶ್ ಸಿಂಗ್ ಅವರು ನರೇಶ್ ಟಿಕಾಯಿತ್ ಮತ್ತು ರಾಕೇಶ್ ಟಿಕಾಯಿತ್ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡುವಂತೆ ಹೇಳಿದ್ದರು.
ರಾಜೇಶ್ ಸಿಂಗ್ ಚೌಹಾಣ್ ಅವರು ಬಿಕೆಯು (ರಾಜಕೀಯೇತರ)ರಾಷ್ಟ್ರೀಯ ಅಧ್ಯಕ್ಷರಾದ ನಂತರ ಲಕ್ನೋದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು 'ನನ್ನ 33 ವರ್ಷಗಳ ಸಂಘಟನೆಯ ಇತಿಹಾಸದಲ್ಲಿ ಈಗ ಭಾರತೀಯ ಕಿಸಾನ್ ಯೂನಿಯನ್ (ರಾಜಕೀಯೇತರ) ರಚನೆಯಾಗಿದೆ' ಎಂದಿದ್ದಾರೆ. 'ನಮ್ಮ ನಾಯಕ ರಾಕೇಶ್ ಟಿಕಾಯಿತ್ ರಾಜಕೀಯ ಪ್ರೇರಿತರಾಗಿ ಕಾಣಿಸಿಕೊಂಡರು. ನಮ್ಮ ನಾಯಕರು ಯಾವುದೋ ರಾಜಕೀಯ ಪಕ್ಷದ ಪ್ರಭಾವಕ್ಕೆ ಒಳಗಾಗಿ ಒಂದು ಪಕ್ಷದ ಪರ ಪ್ರಚಾರ ಮಾಡುವಂತೆ ಆದೇಶ ನೀಡಿರುವುದನ್ನು ನೋಡಿದ್ದೇವೆ. ನನ್ನ ಕೆಲಸ ರಾಜಕೀಯ ಮಾಡುವುದು ಅಥವಾ ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದು ಅಲ್ಲ. ರೈತ ಪರ ಹೋರಾಟವೇ ನನ್ನ ಕೆಲಸ. ನಾನು ಯಾವುದೇ ವಿವಾದ ಸೃಷ್ಟಿಸಲು ಬಯಸುವುದಿಲ್ಲ. ಇದೊಂದು ಹೊಸ ಸಂಸ್ಥೆಯಾಗಿದೆ ಇದನ್ನು ಗೌರವಿಸಿ' ಎಂದಿದ್ದಾರೆ.

ಯಶಸ್ವಿ ಕಾಣದ BKU
ರಾಕೇಶ್ ಟಿಕಾಯತ್ ಶುಕ್ರವಾರದಿಂದ ಲಕ್ನೋದಲ್ಲಿ ತಂಗುವ ಮೂಲಕ ಬಿಕೆಯು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ತೊಡಗಿದ್ದರು. ಆದಾಗ್ಯೂ, ಅವರು ಯಶಸ್ವಿಯಾಗಲಿಲ್ಲ. ರಾಕೇಶ್ ಟಿಕಾಯತ್ ಅವರ ರಾಜಕೀಯ ದೃಷ್ಟಿಕೋನದಿಂದ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಹೇಳಲಾಗುತ್ತಿದೆ. ರಾಕೇಶ್ ಟಿಕಾಯತ್ ಈಗ ರೈತರ ಸಮಸ್ಯೆಗಳನ್ನು ಬಿಟ್ಟು ರಾಜಕೀಯದತ್ತ ಮುಖ ಮಾಡುತ್ತಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಯುಪಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ನಿರ್ದಿಷ್ಟ ಪಕ್ಷವನ್ನು ವಿರೋಧಿಸುವ ಟಿಕಾಯತ್ ಬಗ್ಗೆ BKU ನಾಯಕರು ಆಕ್ಷೇಪಣೆಗಳನ್ನು ಎತ್ತಿದ್ದರು. ಬಿಕೆಯು ಉದ್ದೇಶ ಯಾವುದೇ ಪಕ್ಷವನ್ನು ದೂರುವುದಲ್ಲ ಅಥವಾ ಕಡೆಗಣಿಸುವುದಿಲ್ಲ. ಹೀಗಾಗಿ ಅವರು ರಾಜಕೀಯದತ್ತ ಮುಳ ಮಾಡಿದ್ದಾರೆ ಎಂದು ಆರೋಪಿಲಾಗಿದೆ. ಸಂಘಟನೆಯೊಳಗೆ ಗೊಂದಲವನ್ನು ಅನುಭವಿಸಿದ ರಾಕೇಶ್ ಟಿಕಾಯತ್ ಅವರು ಶುಕ್ರವಾರ ಲಕ್ನೋಗೆ ಭೇಟಿ ನೀಡಿದ್ದರು ಮತ್ತು ಬಂಡಾಯಗಾರರೊಂದಿಗೆ ಚರ್ಚೆ ನಡೆಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.