ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಸುರೇಂದ್ರ ಸಿಂಗ್ ಚಟ್ಟಕ್ಕೆ ಹೆಗಲು ಕೊಟ್ಟ ಸ್ಮೃತಿ ಇರಾನಿ

|
Google Oneindia Kannada News

Recommended Video

ಬೆಂಬಲಿಗನಿಗೋಸ್ಕರ ಸ್ಮೃತಿ ಇರಾನಿ ಏನೆಲ್ಲಾ ಮಾಡಿದ್ರು ಗೊತ್ತಾ..? | Oneindia Kannada

ಲಕ್ನೋ, ಮೇ 26: ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಸಂಸದೆ ಸ್ಮೃತಿ ಇರಾನಿ ಅವರು ತಮ್ಮ ಆಪ್ತ ಬೆಂಬಲಿಗರ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಶನಿವಾರ ರಾತ್ರಿ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನರೇಂದ್ರ ಮೋದಿ ಅವರನ್ನು ನೂತನ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡುವ ಸಮಾರಂಭ, ಸಂಭ್ರಮದಲ್ಲಿದ್ದ ಸ್ಮೃತಿ ಅವರು ಇಂದು ಸುರೇಂದ್ರ ಸೂತಕದಲ್ಲಿದ್ದಾರೆ.

ಅಮೇಥಿಯ ಬರುಲಿಯಾ ಗ್ರಾಮದ ತಮ್ಮ ಮನೆಯಲ್ಲಿ ಶನಿವಾರ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದ ಸುರೇಂದ್ರ ಸಿಂಗ್ ಮೇಲೆ ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಬರುಲಿಯಾ ಗ್ರಾಮದ ಮಾಜಿ ಮುಖ್ಯಸ್ಥರಾಗಿದ್ದ ಸುರೇಂದ್ರ ಅವರ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಜಮೋ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Watch: Smriti Irani lends shoulder to mortal remains of close aide Surendra Singh, who was shot dead

ಸುರೇಂದ್ರ ಸಿಂಗ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸ್ಮೃತಿ, ಭಾನುವಾರ ಮಧ್ಯಾಹ್ನ ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ಸ್ಮೃತಿ ತಮ್ಮ ಬೆಂಬಲಿಗನ ಮೃತದೇಹವನ್ನು ಹೊರುವ ವೇಳೆ ಚಟ್ಟಕ್ಕೆ ಹೆಗಲು ನೀಡಿದರು.

ಪೊಲೀಸರು ಕೊಲೆಯ ಹಿಂದೆ ವೈಯಕ್ತಿಕ ದ್ವೇಷ ಇರಬಹುದು ಎಂದು ಶಂಕಿಸಿದ್ದು, ರಾಜಕೀಯ ವೈಷಮ್ಯದ ಹಿನ್ನೆಲೆಯೂ ಕೊಲೆ ನಡೆದಿರಬಹುದು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಘಟನೆ ಸಂಬಂಧ ಏಳು ಜನರನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ.ಮುಂದಿನ 12 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ನಿರ್ದೇಶಕ ಒ.ಪಿ ಸಿಂಗ್ ಹೇಳಿದ್ದಾರೆ.


ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಿ, ಇಲ್ಲದಿದ್ದರೆ ಶಿಸ್ತುಕ್ರಮಕ್ಕೆ ಸಿದ್ಧರಾಗಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಅಮೇಥಿ: ಸ್ಮೃತಿ ಇರಾನಿ ಬೆಂಬಲಿಗ ಸುರೇಂದ್ರ ಸಿಂಗ್ ಹತ್ಯೆಅಮೇಥಿ: ಸ್ಮೃತಿ ಇರಾನಿ ಬೆಂಬಲಿಗ ಸುರೇಂದ್ರ ಸಿಂಗ್ ಹತ್ಯೆ

ಈ ನಡುವೆ ಸ್ಮೃತಿ ಇರಾನಿ ಅವರು ಸುರೇಂದ್ರ ಸಿಂಗ್ ಪಾರ್ಥೀವ ಶರೀರವನ್ನು ಹೊತ್ತು ಸಾಗುವ ವಿಡಿಯೋ ನೋಡಿದ ಪತ್ರಕರ್ತೆ ಪಲ್ಲವಿ ಘೋಷ್, ಎಷ್ಟೋ ಮಹಿಳೆಯರಿಗೆ ಅಂತ್ಯ ಸಂಸ್ಕಾರ ಸ್ಥಳಕ್ಕೆ ಭೇಟಿ ನೀಡಲು ಅವಕಾಶ ಇರುವುದಿಲ್ಲ. ಸ್ಮೃತಿ ಇರಾನಿ ಅವರ ನಡೆ ಮಹಿಳಾ ಸಬಲೀಕರಣದ ಸಂಕೇತ ಎಂದಿದ್ದಾರೆ.

English summary
Union minister Smriti Irani on Sunday helped carry the body of her close aide in Amethi, Surendra Singh, who was shot dead late on Saturday, for his final rites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X