ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕಾಸ್ ದುಬೆ ಬಳಿಕ ಯುಪಿಯಲ್ಲಿ ಮತ್ತೊಬ್ಬ ರೌಡಿ ಶೀಟರ್ ಎನ್‌ಕೌಂಟರ್

|
Google Oneindia Kannada News

ಲಕ್ನೌ, ಜುಲೈ 25: ವಿಕಾಸ್ ದುಬೆ ಎನ್‌ಕೌಂಟರ್ ಸುದ್ದಿಯೇ ಇನ್ನು ಮರೆತಿಲ್ಲ. ಅಷ್ಟರಲ್ಲೆ ಉತ್ತರ ಪ್ರದೇಶ ಪೊಲೀಸರು ಮತ್ತೊಬ್ಬರ ರೌಡಿ ಶೀಟರ್‌ನನ್ನು ಎನ್‌ಕೌಂಟರ್ ಮಾಡಿದ್ದಾರೆ.

Recommended Video

ಭಾರತದಲ್ಲಿ ಚೀನಾ ವ್ಯವಹಾರ ಇನ್ನು ಮುಂದೆ ಸುಲಭವಲ್ಲ | Oneindia Kannada

ಲಕ್ನೌನ ಮೋಸ್ಟ್ ವಾಂಟೆಡ್ ಅಪರಾಧಿ ಟಿಂಕು ಕಪಾಲನನ್ನು ಶುಕ್ರವಾರ ರಾತ್ರಿ ಬರಾಬಂಕಿ ಪ್ರದೇಶದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ತಂಡ ಹಾಗೂ ಸಿಸಿಬಿ ತಂಡ ದಾಳಿ ನಡೆಸಿ ಎನ್‌ಕೌಂಟರ್‌ ಮಾಡಿದ್ದಾರೆ.

ಟಿಂಕು ಕಪಾಲನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ನಗದು ಬಹುಮಾನವನ್ನು ಸರ್ಕಾರ ಘೋಷಿಸಿತ್ತು. 2019ರಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಟಿಂಕು ಕಪಾಲ ಇಬ್ಬರು ವ್ಯಕ್ತಿಗಳನ್ನು ಕೊಂದು ಪರಾರಿಯಾಗಿದ್ದ. ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.

Wanted criminal Tinku Kapala killed in encounter by Special Task Force Up

ಕಪಾಲಾನ ವಿರುದ್ಧ ದರೋಡೆ, ಕೊಲೆ, ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಸೇರಿದಂತೆ ಎರಡು ಡಜನ್ ಪ್ರಕರಣಗಳಿವೆ. ಪೊಲೀಸರು ಮತ್ತು ಎಸ್‌ಟಿಎಫ್ ತಂಡ ಆತನನ್ನು ಬಹಳ ಸಮಯದಿಂದ ಹುಡುಕುತ್ತಿತ್ತು. ಅಂತಿಮವಾಗಿ ಬರಾಬಂಕಿಯಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಶೂಟ್ ಮಾಡಬೇಕಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಟಿಂಕು ಕಪಾಲ ಅಲಿಯಾಸ್ ಕಮಲ್ ಕಿಶೋರ್ ಅಲಿಯಾಸ್ ಹೇಮಂತ್ ಕುಮಾರ್ ಅಲಿಯಾಸ್ ಸಂಜಯ್ ಅಲಿಯಾಸ್ ಮಾಮಾ ಹಲವರು ಅಪರಾಧ ಮಾಡಿ ಭೂಗತವಾಗಿದ್ದ. ಯುಪಿ ಹೊರತಾಗಿ, ಗುಜರಾತ್ ಮತ್ತು ಮಹಾರಾಷ್ಟ್ರದ ಕೆಲವು ದೊಡ್ಡ ದರೋಡೆಗಳಲ್ಲಿ ಈತನ ಕೈವಾಡ ಇದೆ. ಮಹಾರಾಷ್ಟ್ರದ ವಡೋದರಾ, ಗುಜರಾತ್ ಮತ್ತು ಪುಣೆಯಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

English summary
Most Wanted criminal Tinku Kapala killed in encounter by a team of Special Task Force. He was carrying an Rs 1 lakh bounty on his head..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X