ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿ ಕೈಯಲ್ಲಿ ಮಸಾಜ್, ಕುರ್ಚಿ ಮೇಲೆ ನಡೆದ ಟೀಚರ್- ಪ್ರತ್ಯೇಕ ಘಟನೆಗಳ ವಿಡಿಯೋ ವೈರಲ್

|
Google Oneindia Kannada News

ಲಕ್ನೋ ಜುಲೈ 28: ವಿದ್ಯಾರ್ಥಿಗಳು ಹಿಡಿದಿದ್ದ ಪ್ಲಾಸ್ಟಿಕ್ ಕುರ್ಚಿಗಳ ಮೇಲೆ ಹತ್ತಿ ನೀರು ತುಂಬಿದ ಸ್ಥಳದಿಂದ ಶಾಲೆಗೆ ಶಿಕ್ಷಕಿಯೊಬ್ಬರು ಪ್ರವೇಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಗಟನೆಯ ಬಳಿಕ ಶಾಲಾ ಶಿಕ್ಷಕಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ವೈರಲ್ ವಿಡಿಯೊದಲ್ಲಿ, ಮಕ್ಕಳು ತಮ್ಮ ಶಿಕ್ಷಕರಿಗೆ ನಡೆಯಲು ಸಾಲಾಗಿ ಪ್ಲಾಸ್ಟಿಕ್ ಕುರ್ಚಿಗಳನ್ನು ಇರಿಸಲು ನೀರಿನಲ್ಲಿ ಓಡಾಡುತ್ತಿರುವುದನ್ನು ಕಾಣಬಹುದು.

ಈ ಮಹಿಳಾ ಶಿಕ್ಷಕಿ ತಾನು ಇಳಿಯುವ ಒಣ ಸ್ಥಳವನ್ನು ತಲುಪಲು ನಿಂತ ಮಳೆ ನೀರಿನಲ್ಲಿ ಕಾಲಿಡದೇ ಒಂದೊಂದೇ ಹೆಜ್ಜೆಯನ್ನು ವಿದ್ಯಾರ್ಥಿಗಳು ಸಾಲಾಗಿ ಇಡುತ್ತಿದ್ದ ಕುರ್ಚಿಯ ಮೇಲೆ ಇಟ್ಟು ನಡೆಯುವುದನ್ನು ಕಾಣಬಹುದು. ಈ ಶಿಕ್ಷಕಿ ನಡೆಯಲೆಂದು ಮಕ್ಕಳು ತಾವು ನೀರಿನಲ್ಲಿ ನಿಂತು ಕುರ್ಚಿಗಳನ್ನು ಸಾಲಾಗಿ ಜೋಡಿಸುತ್ತಾ ಬರುತ್ತಾರೆ. ಮಥುರಾ ಜಿಲ್ಲೆಯಲ್ಲಿ ಬುಧವಾರ ಎಡೆಬಿಡದೆ ಸುರಿದ ಮಳೆಯಿಂದಾಗಿ ಶಾಲಾ ಆವರಣ ಜಲಾವೃತಗೊಂಡಿದೆ.

ಶಿಕ್ಷಕಿ ಹೆಸರಲ್ಲಿ 10 ಮನೆ; ಇಡಿ ಕಣ್ಣು ಬಿದ್ದ ಮೋನಾಲೀಸಾ ಯಾರು? ಶಿಕ್ಷಕಿ ಹೆಸರಲ್ಲಿ 10 ಮನೆ; ಇಡಿ ಕಣ್ಣು ಬಿದ್ದ ಮೋನಾಲೀಸಾ ಯಾರು?

ಹುಡುಗನಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ

ನಾಲ್ಕು ದಿನಗಳ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಉತ್ತರ ಪ್ರದೇಶದ ಹಾರ್ಡೋಯ್‌ನಲ್ಲಿ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ವಿಡಿಯೊದಲ್ಲಿ, ಶಿಕ್ಷಕಿ ತನ್ನ ವಿದ್ಯಾರ್ಥಿಯಿಂದ ಮಸಾಜ್ ಪಡೆಯುತ್ತಿರುವುದನ್ನು ಕಾಣಬಹುದು. ಹರ್ದೋಯಿಯಲ್ಲಿರುವ ಪೋಖಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಊರ್ಮಿಳಾ ಸಿಂಗ್ ಎಂದು ಗುರುತಿಸಲಾಗಿದ್ದು ಮಹಿಳೆ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ವೈರಲ್ ವಿಡಿಯೊದಲ್ಲಿ ವಿದ್ಯಾರ್ಥಿಯು ತರಗತಿಯಲ್ಲಿ ಮಸಾಜ್ ಮಾಡುವಾಗ ಅವಳು ಕುರ್ಚಿಯ ಮೇಲೆ ಕುಳಿತಿರುವುದನ್ನು ಕಾಣಬಹುದು. ತರಗತಿಯಲ್ಲಿ ಇತರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಈ ಘಟನೆ ನಡೆದಿದೆ. ಬಳಿಕ ಬಿಎಸ್ಎ ಅಧಿಕಾರಿ ಅಮಾನತು ಆದೇಶಗಳನ್ನು ಹೊರಡಿಸಿದ್ದಾರೆ.

ಶಿಕ್ಷಕಿ ಅಮಾನತು

ಟ್ವಿಟರ್ ಹ್ಯಾಂಡಲ್ ಗ್ರೇಡಿಂಗ್ ಆದ ವಿಡಿಯೋ ಶೀರ್ಷಿಕೆ ಹೀಗಿದೆ, "ಹರ್ದೋಯ್ ಯುಪಿ ಸರ್ಕಾರಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿಕೊಂಡಿದ್ದಾರೆ" ಎಂದು ಹರ್ದೋಯ್ ಮೂಲ ಶಿಕ್ಷಣ ಅಧಿಕಾರಿ ಬಿಪಿ ಸಿಂಗ್ ಇಂಡಿಯಾ ಟುಡೆಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ. ಅವರು ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದ ಮೂಲಕ ಸ್ವೀಕರಿಸಿದ್ದಾರೆ ಎಂದು ಹೇಳಿದರು. ಮೇಲ್ನೋಟಕ್ಕೆ, ಶಿಕ್ಷಕಿ ತಪ್ಪಿತಸ್ಥರೆಂದು ಕಂಡುಬಂದಿದೆ. ಅವರ ಅಮಾನತು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ'' ಎಂದು ಅವರು ಹೇಳಿದರು. ವೀಡಿಯೊವನ್ನು ನೋಡಿ:

ಅಪ್‌ಲೋಡ್ ಮಾಡಿದ ನಂತರ, ವೀಡಿಯೊ ನೂರಾರು ವೀಕ್ಷಣೆಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. "ಇಂತವರಿಂದಾಗಿನೇ ಸರ್ಕಾರಿ ಶಾಲೆಗಳ ಹೆಸರು ಹಾಳಾಗುತ್ತಿದೆ. ಶಾಲಾ ಮಕ್ಕಳಿಂದ ವೈಯಕ್ತಿ ಕೆಲಸಗಳನ್ನು ಮಾಡಿಸಿಕೊಳ್ಳುವ ಇಂತವರನ್ನು ಕೆಲಸದಿಂದ ತೆಗೆದು ಹಾಕಬೇಕಾಗಿದೆ." ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಎಂತಾ ನಾಚಿಕೆಗೇಡು" ಎಂದು ಬರೆದಿದ್ದಾರೆ.

ಪುಸ್ತಕ ಓದಲು ತಡವರಿಸಿದ ಇಂಗ್ಲಿಷ್ ಶಿಕ್ಷಕ

ಪುಸ್ತಕ ಓದಲು ತಡವರಿಸಿದ ಇಂಗ್ಲಿಷ್ ಶಿಕ್ಷಕ

ಯುಪಿ ಶಾಲೆಯೊಂದರಿಂದ ವೈರಲ್ ಆಗಿರುವ ಮತ್ತೊಂದು ಘಟನೆಯು ಉನ್ನಾವೋ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಹಠಾತ್ ತಪಾಸಣೆಯ ಸಂದರ್ಭದಲ್ಲಿ ಇಂಗ್ಲಿಷ್ ಶಿಕ್ಷಕರೊಬ್ಬರು ಪಠ್ಯಪುಸ್ತಕದಲ್ಲಿನ ಕೆಲವು ಸಾಲುಗಳನ್ನು ಓದಲು ಹೇಗೆ ವಿಫಲರಾಗಿದ್ದಾರೆ ಎಂಬುದನ್ನು ಎತ್ತಿ ತೋರಿಸಿದೆ. ವೈರಲ್ ಆಗಿರುವ ವಿಡಿಯೋ ಶಿಕ್ಷಣದ ಕಳಪೆ ಸ್ಥಿತಿಯ ಮೇಲೆ ಬೆಳಕು ಚೆಲ್ಲಿದೆ.

 'ಶಿಕ್ಷಕರನ್ನು ಕೂಡಲೇ ಅಮಾನತುಗೊಳಿಸಬೇಕು'

'ಶಿಕ್ಷಕರನ್ನು ಕೂಡಲೇ ಅಮಾನತುಗೊಳಿಸಬೇಕು'

'ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಅವರು ಇಂಗ್ಲಿಷ್ ಶಿಕ್ಷಕಿ. ಆದರೆ ಅವರಿಗೆ ಇಂಗ್ಲಿಷ್ ಅನ್ನು ಸರಿಯಾಗಿ ಓದಲು ಬರುವುದಿಲ್ಲ" ಎಂದು ಗೋಚರವಾಗಿ ಕೋಪಗೊಂಡ ಜಿಲ್ಲಾಧಿಕಾರಿ ದೇವೇಂದ್ರ ಕುಮಾರ್ ಪಾಂಡೆ ಹೇಳಿದರು. ಶಿಕ್ಷಕರು ಪಠ್ಯಪುಸ್ತಕದಿಂದ ಓದಲು ಹೆಣಗಾಡುತ್ತಾರೆ. ಶಿಕ್ಷಕರು ತಮ್ಮ ರಕ್ಷಣೆಗಾಗಿ ಏನನ್ನಾದರೂ ಗೊಣಗಿದಾಗ ಪಾಂಡೆ ಅವರನ್ನು ಹಾಗಂದರೆ ಏನು? ನೀವು ಬಿಎ ಪಾಸ್ ಆಗಿದ್ದೀರಿ, ಅಲ್ಲವೇ? ನಾನು ನಿಮ್ಮನ್ನು ಭಾಷಾಂತರಿಸಲು ಸಹ ಕೇಳಲಿಲ್ಲ, ನಾನು ಕೇಳಿದ್ದು ಇಷ್ಟೇ ನೀವು ಪಠ್ಯ ಪುಸ್ತಕದಿಂದ ಇಂಗ್ಲಿಷ್‌ನಲ್ಲಿ ಕೆಲವು ಸಾಲುಗಳನ್ನು ಓದಿದ್ದೀರಿ ... ಮತ್ತು ನೀವು ಅದನ್ನು ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಕೋಪಗೊಂಡಿದ್ದಾರೆ.

Recommended Video

ಜಿಮ್ ನಲ್ಲಿ ಸರ್ಕಸ್ ಮಾಡೋಕೆ ಹೋಗಿ ಗಾಯ ಮಾಡ್ಕೊಂಡ ಜಾನಿ | Oneindia Kannada

English summary
In two separate incidents in Uttar Pradesh, A school teacher was suspended from her job after a video of her entering a flooded school by climbing over plastic chairs held by students went viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X