ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮಾರ್ಟ್‌ಸಿಟಿಯಲ್ಲಿ ಸ್ಕೂಟರ್ ಸಮೇತ ಮ್ಯಾನ್‌ಹೋಲ್‌ಗೆ ಬಿದ್ದ ದಂಪತಿ: ವಿಡಿಯೋ ನೋಡಿ

|
Google Oneindia Kannada News

ಅಲಿಘರ್, ಜೂನ್ 19: ದೇಶಾದ್ಯಂತ ಮುಂಗಾರು ಆರಂಭವಾಗಿದೆ. ಈಶಾನ್ಯ ಭಾರತದಲ್ಲಿ ಮಳೆ ಅಬ್ಬರಿಸುತ್ತಿದ್ದು ನದಿಗಳು ಉಕ್ಕಿ ಹರಿಯುತ್ತಿವೆ. ಬಿಸಿಗಾಳಿಯಿಂದ ತತ್ತರಿಸಿದ್ದ ದೆಹಲಿ, ಉತ್ತರ ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿದೆ.

ಉತ್ತರ ಪ್ರದೇಶದ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ಅಲಿಘರ್ ದಲ್ಲೂ ಉತ್ತಮ ಮಳೆಯಾಗಿದ್ದು, ತುಂಬಿ ಹರಿಯುತ್ತಿರುವ ಚರಂಡಿಯೊಂದಕ್ಕೆ ದಂಪತಿಗಳು ಸ್ಕೂಟರ್ ಸಮೇತ ಬಿದ್ದಿರುವ ವಿಡಿಯೋ ಈಗ ವೈರಲ್ ಆಗಿದೆ. ಅದೃಷ್ಟವಶಾತ್ ಸಮೀಪದ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.

ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಇಂಜಿನಿಯರ್ ಶವ ಪತ್ತೆ: ಇನ್ನೆಷ್ಟು ಬಲಿ ಬೇಕು ಬಿಬಿಎಂಪಿಗೆ?ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಇಂಜಿನಿಯರ್ ಶವ ಪತ್ತೆ: ಇನ್ನೆಷ್ಟು ಬಲಿ ಬೇಕು ಬಿಬಿಎಂಪಿಗೆ?

ಜಲಾವೃತಗೊಂಡ ರಸ್ತೆಯ ಮೇಲೆ ದಂಪತಿಗಳು ಬೈಕ್ ಸಮೇತ ತೆರೆದ ಮ್ಯಾನ್‌ಹೋಲ್‌ಗೆ ಬೀಳುತ್ತಿರುವ ವೀಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ, ಈ ವಿಡಿಯೋ ಈಗ ಟ್ವಿಟರ್ ನಲ್ಲಿ ವೈರಲ್ ಆಗಿದೆ.

viral video: Couple on scooter falls in manhole

ವಿಡಿಯೋದಲ್ಲಿ, ವಾಹನ ಮತ್ತು ಅದರ ಮೇಲಿದ್ದವರು ಮ್ಯಾನ್‌ಹೋಲ್‌ಗೆ ಉರುಳುವ ಮೊದಲು, ಪಾದಚಾರಿ ಮಾರ್ಗದ ಪಕ್ಕದಲ್ಲಿ ನಿಲ್ಲಿಸಲು ಜಲಾವೃತವಾದ ರಸ್ತೆಯ ಮೂಲಕ ಸ್ಕೂಟರ್‌ನಲ್ಲಿ ದಂಪತಿಗಳು ಚಾಲನೆ ಮಾಡುತ್ತಿರುವುದನ್ನು ಕಾಣಬಹುದು. ದಾರಿಹೋಕರು ದಂಪತಿಗೆ ಸಹಾಯಕ್ಕೆ ಧಾವಿಸಿದರು. ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.

ಮೂಲಗಳ ಪ್ರಕಾರ, ಸ್ಕೂಟರ್‌ನಲ್ಲಿ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ಮತ್ತು ಅವರ ಪತ್ನಿ ಪ್ರಯಾಣಿಸುತ್ತಿದ್ದರು. ಅವರು ವೈದ್ಯರನ್ನು ನೋಡಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇನ್ನು ಮ್ಯಾನ್‌ಹೋಲ್‌ಗೆ ಬಿದ್ದವರನ್ನು, ಯುಪಿ ಪೊಲೀಸ್ ಅಧಿಕಾರಿ ದಯಾನಂದ್ ಸಿಂಗ್ ಅಟ್ರಿ ಮತ್ತು ಅವರ ಪತ್ನಿ ಅಂಜು ಅತ್ರಿ ಎಂದು ಗುರುತಿಸಲಾಗಿದೆ. ಗಂಡ ಹೆಂಡತಿ ಇಬ್ಬರಿಗೂ ಗಾಯಗಳಾಗಿವೆ.

"ನನ್ನ ಮುಂದಿರುವ ರಸ್ತೆಯು ಜಲಾವೃತಗೊಂಡಿದ್ದರಿಂದ, ನಾನು ಹೊಂಡವನ್ನು ಕಾಣಿಸದ ಕಾರಣ ಅದರಲ್ಲಿ ಬಿದ್ದಿದ್ದೇನೆ" ಎಂದು ದಯಾನಂದ ಸಿಂಗ್ ಅತ್ರಿ ತಿಳಿಸಿದರು.

ಇನ್ನು ಟ್ವಿಟರ್ ನಲ್ಲಿ ವಿಡಿಯೋ ವೈರಲ್ ಆಗಿದ್ದು ಬಿಜೆಪಿ ಸರ್ಕಾರವನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು, "ಸ್ಮಾರ್ಟ್ ಸಿಟಿ ಅಲಿಘರ್‍‌ಗೆ ಸ್ವಾಗತ ಎಂದು" ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಇನ್ನೊಬ್ಬ ಟ್ವಿಟರ್ ಬಳಕೆದಾರರು 2019ರಲ್ಲಿ ಅಲಿಘರ್ ಪ್ರವಾಹ ಪರಿಸ್ಥಿತಿ ವಿಡಿಯೋ ಹಂಚಿಕೊಂಡಿದ್ದು, ಅಲಿಘರ್ ನಲ್ಲಿ ಅಭಿವೃದ್ಧಿ ಸ್ಥಿರವಾಗಿದೆ ಎನಿಸುತ್ತಿದೆ ಎಂದು ಹೇಳಿದ್ದಾರೆ.

ಇನ್ನೊಬ್ಬ ಟ್ವಿಟರ್ ಬಳಕೆದಾರರು "ಉತ್ತಮ ಪ್ರದೇಶದದಲ್ಲಿ ಡಬಲ್ ಇಂಜಿನ್ ಸರ್ಕಾರದ ಪರಿಣಾಮ, ಸಂತ್ರಸ್ತರು ಉತ್ತರ ಪ್ರದೇಶ ಪೊಲೀಸ್ ಅಧಿಕಾರಿ ಎಂದು ಟ್ವೀಟ್ ಮಾಡಿದ್ದಾರೆ.

ಮಳೆಗಾಲದಲ್ಲಿ ಈ ಭಾಗದ ರಸ್ತೆಗಳು ಆಗಾಗ್ಗೆ ಜಲಾವೃತಗೊಳ್ಳುತ್ತವೆ. ಇದರಿಂದ ಈ ಹಿಂದೆ ಹಲವಾರು ಅವಘಡಗಳು ಸಂಭವಿಸಿವೆ.ಈ ಹೊಂಡವು ಈ ಹಿಂದೆ ಹಲವಾರು ಅವಘಡಗಳಿಗೆ ಮೂಲವಾಗಿತ್ತು.ಆದರೂ ನಗರಸಭೆ ಗಮನಹರಿಸಿಲ್ಲ ಎಂದು ಆಂಬ್ಯುಲೆನ್ಸ್ ಚಾಲಕ ವಿನೋದ್ ಕುಮಾರ್ ಆರೋಪಿಸಿದ್ದಾರೆ.

English summary
A couple riding a bike over a flooded roadway and falling into what looks to be an open manhole has gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X