ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾರ್ಥನೆ ಬಳಿಕ ಪ್ರಯಾಗರಾಜ್‌ನಲ್ಲಿ ಹಿಂಸಾತ್ಮಕ ಘರ್ಷಣೆ: ಕಲ್ಲು ತೂರಾಟ

|
Google Oneindia Kannada News

ಪ್ರಯಾಗರಾಜ್ ಜೂನ್ 10: ಇಂದು ಪ್ರಾರ್ಥನೆಯ ನಂತರ ಕಾನ್ಪುರ ಜಿಲ್ಲೆಯಲ್ಲಿ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದು, ಉತ್ತರ ಪ್ರದೇಶದಾದ್ಯಂತ ಪೊಲೀಸರು ಮತ್ತು ಆಡಳಿತವು ಕಟ್ಟೆಚ್ಚರ ವಹಿಸಿದೆ. ಕಾನ್ಪುರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಕಳೆದ ವಾರ (ಜೂನ್ 3) ಕಾನ್ಪುರದಲ್ಲಿ ಶುಕ್ರವಾರ ಪ್ರಾರ್ಥನೆಯ ನಂತರ ಹಿಂಸಾತ್ಮಕ ಘಟನೆಗಳು ನಡೆದಿದ್ದವು. ಆದರೆ ಇಂದು (ಜೂನ್ 10) ಕೂಡ ಪ್ರಾರ್ಥನೆಯ ನಂತರ ಮತ್ತೊಮ್ಮೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ವರದಿಯಾಗಿವೆ. ಪ್ರಯಾಗರಾಜ್ ಜಿಲ್ಲೆಯ ಅಟಾಲಾ ಪ್ರದೇಶದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಪೊಲೀಸರ ಮೇಲೆ ಕಲ್ಲು ತೂರಾಟದ ವಿಡಿಯೋವನ್ನು ಸುದ್ದಿ ಸಂಸ್ಥೆ ANI ಬಿಡುಗಡೆ ಮಾಡಿದೆ.

ಉತ್ತರ ಪ್ರದೇಶದ ವಿವಿಧ ರಾಜ್ಯಗಳಲ್ಲದೆ, ದೇಶದ ರಾಜಧಾನಿ ದೆಹಲಿಯಿಂದಲೂ ಹಿಂಸಾತ್ಮಕ ಘರ್ಷಣೆಗಳು ಮತ್ತು ಪ್ರತಿಭಟನೆಗಳ ಸುದ್ದಿಗಳು ಹೊರಬರುತ್ತಿವೆ. ವಾಸ್ತವವಾಗಿ, ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಇತ್ತೀಚೆಗೆ ಮುಸ್ಲಿಮರ ಧಾರ್ಮಿಕ ಮುಖಂಡರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಂದಿನಿಂದ ಬಿಜೆಪಿಯ ಈ ಇಬ್ಬರನ್ನು ಬಂಧಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಹಾಗಾಗಿ ಮುಸ್ಲಿಂ ಸಮುದಾಯದಲ್ಲಿ ಈ ಇಬ್ಬರು ನಾಯಕರ ವಿರುದ್ಧ ಆಕ್ರೋಶವೂ ಹೆಚ್ಚಾಗುತ್ತಿದೆ. ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ಬಂಧಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಪ್ರಯಾಗರಾಜ್ ನಲ್ಲಿ ಮದುವೆಗೆ ನಿರ್ಬಂಧ, ಆಕ್ರೋಶ ಹುಟ್ಟಿಸಿದ ಯೋಗಿ ನಡೆಪ್ರಯಾಗರಾಜ್ ನಲ್ಲಿ ಮದುವೆಗೆ ನಿರ್ಬಂಧ, ಆಕ್ರೋಶ ಹುಟ್ಟಿಸಿದ ಯೋಗಿ ನಡೆ

ಅಲ್ಲಾ-ಹು-ಅಕ್ಬರ್ ಎಂಬ ಘೋಷಣೆ

ಶುಕ್ರವಾರದ ಪ್ರಾರ್ಥನೆಯ ನಂತರ, ಉತ್ತರ ಪ್ರದೇಶದ ಸಹರಾನ್‌ಪುರ, ಮೊರಾದಾಬಾದ್ ಮತ್ತು ಪ್ರಯಾಗ್‌ರಾಜ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾವಿರಾರು ಜನರು ಜಮಾಯಿಸಿದರು ಮತ್ತು ಬಿಜೆಪಿಯಿಂದ ಅಮಾನತುಗೊಂಡ ಇಬ್ಬರು ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಅಲ್ಲಾ-ಹು-ಅಕ್ಬರ್ ನಾರಾ-ಎ-ತಕ್ಬೀರ್ ಎಂಬ ಘೋಷಣೆಗಳೂ ಈ ಅವಧಿಯಲ್ಲಿ ಮೊಳಗಿದವು. ಈ ವೇಳೆ ಪೊಲೀಸರು ಜನರ ಮನವೊಲಿಸಲು ಯತ್ನಿಸಿದ್ದು, ಇದು ಕ್ರಮೇಣ ಘರ್ಷಣೆಗೆ ತಿರುಗಿದೆ. ಸುದ್ದಿ ಸಂಸ್ಥೆ ANI ಯ ಸುದ್ದಿ ಪ್ರಕಾರ, ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಮೇಲೆ ಕೋಪಗೊಂಡ ಜನರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ ಎನ್ನಲಾಗುತ್ತಿದೆ.

ಗುಂಪು ಚದುರಿಸಲು ಲಾಠಿ ಚಾರ್ಜ್

ಪ್ರಯಾಗರಾಜ್‌ನ ಅತಾಲಾ ಪ್ರದೇಶದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಈ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ಮೇಲ್ಛಾವಣಿಯ ಮೇಲೂ ಕಲ್ಲು ತೂರಾಟ ನಡೆಸಲಾಗಿದ್ದು, ಬಳಿಕ ಆರ್‌ಎಎಫ್ ಮತ್ತು ಪಿಎಸಿ ಲಾಠಿ ಚಾರ್ಜ್ ಮಾಡಿ ಉದ್ರಿಕ್ತರನ್ನು ಚದುರಿಸಿದ್ದಾರೆ. ಆದರೆ ಕಿಡಿಗೇಡಿಗಳು ಯೋಜನಾಬದ್ಧವಾಗಿ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದು, ಗುಂಪಿನಲ್ಲಿ ದುಷ್ಕರ್ಮಿಗಳು ದಾಳಿ ನಡೆಸುತ್ತಿರುವ ರೀತಿ ಸ್ಥಳೀಯ ಗುಪ್ತಚರ ಘಟಕದ (ಎಲ್‌ಐಯು) ವೈಫಲ್ಯವನ್ನು ತೋರುತ್ತಿದೆ. ಏಕೆಂದರೆ ಕಿಡಿಗೇಡಿಗಳು ಸಂಪೂರ್ಣ ತಯಾರಿಯೊಂದಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

 ಹಾಣಿಗೊಳಗಾದ ಪ್ರಯಾಗ್‌ರಾಜ್‌ನ ಎಡಿಜಿ ವಾಹನ

ಹಾಣಿಗೊಳಗಾದ ಪ್ರಯಾಗ್‌ರಾಜ್‌ನ ಎಡಿಜಿ ವಾಹನ

ಪ್ರಯಾಗ್‌ರಾಜ್‌ನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆಯನ್ನು ಕಳುಹಿಸಲಾಗಿದೆ. ಡಿಜಿಪಿ ಡಿಎಸ್ ಚೌಹಾಣ್, ಎಡಿಜಿ ಕಾನೂನು ಮತ್ತು ಸುವ್ಯವಸ್ಥೆ ಪ್ರಶಾಂತ್ ಕುಮಾರ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಅವಸ್ಥಿ ಅವರು ಲಕ್ನೋ ಪೊಲೀಸ್ ಹೆಡ್ ಕ್ವಾರ್ಟರ್ ಕಂಟ್ರೋಲ್ ರೂಂನಲ್ಲಿದ್ದಾರೆ. ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಎಡಿಜಿ ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರತಿಭಟನಾಕಾರರು ಪ್ರಯಾಗ್‌ರಾಜ್‌ನ ಎಡಿಜಿ ಅವರ ವಾಹನವನ್ನು ಹಾನಿಗೊಳಿಸಿದ್ದಾರೆ. ಈ ನಡುವೆ ಬೆಂಕಿ ಹಚ್ಚಿದ ಸುದ್ದಿಯೂ ಮುನ್ನೆಲೆಗೆ ಬರುತ್ತಿದೆ.

 ನೂಪುರ್‌ ಶರ್ಮಾ ಪ್ರತಿಕೃತಿ ನೇತು ಹಾಕಿ ವಿಕೃತಿ

ನೂಪುರ್‌ ಶರ್ಮಾ ಪ್ರತಿಕೃತಿ ನೇತು ಹಾಕಿ ವಿಕೃತಿ

ಟಿವಿ ಸಂದರ್ಶನವೊಂದರಲ್ಲಿ ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಜೊತೆಗೆ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಂದು ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಮಸೀದಿಗಳ ಮುಂದೆ ಮುಸ್ಲೀಂ ಸಮುದಾಯದವರು ಪ್ರತಿಭಟನೆಯನ್ನು ಇಂದು ಕೈಗೊಂಡಿದ್ದಾರೆ. ಜಮ್ಮು, ದೆಹಲಿ, ಲಕ್ನೋ, ಬೆಳಗಾವಿ, ಸಹರನ್ಪೂರ್, ಮೊರಾದಾಬಾದ್ ಸ್ಥಳಗಳಲ್ಲಿ ಇಂದು ಪ್ರತಿಭಟನೆ ಕಾವು ಹೆಚ್ಚಾಗಿದೆ. ಶರ್ಮಾ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಕೆಲವೆಡೆ ಹಿಂಸಾತ್ಮಾಕ ಘರ್ಷಣೆಗಳು ನಡೆದಿವೆ. ಇನ್ನೂ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಪೋರ್ಟ್‌ ರಸ್ತೆಯಲ್ಲಿ ಗುರುವಾರ ರಾತ್ರಿ ನೂಪುರ್‌ ಶರ್ಮಾ ಪ್ರತಿಕೃತಿಯನ್ನು ನೇತು ಹಾಕಲಾಗಿದೆ ಆಕ್ರೋಶ ಹೊರಹಾಕಲಾಗಿದೆ.

English summary
Violent clashes in Prayagraj today demanded the arrest of former BJP spokesperson Nupur Sharma and Naveen Jindal, who have issued statements against the Prophet. Section 144 has been enacted in Kanpur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X