ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನಕ್ಕೂ ಮುನ್ನ ಶಾಯಿ ಬಳಿದರೇ ಬಿಜೆಪಿ ಮುಖಂಡರು?

|
Google Oneindia Kannada News

ಲಕ್ನೋ, ಮೇ 19: ಉತ್ತರಪ್ರದೇಶದ ಸ್ಥಳೀಯ ಬಿಜೆಪಿ ಮುಖಂಡರು ಮತದಾರರ ಕೈಗೆ ಶಾಯಿ ಹಾಕಿದ್ದಾರೆ ಎಂಬ ಆರೋಪ ಎದುರಾಗಿದ್ದು, ಪ್ರತಿಪಕ್ಷಗಳಿಗೆ ಮತದಾನ ಮಾಡುತ್ತಾರೆ ಎಂಬ ನಿರೀಕ್ಷೆ ಮೇರೆಗೆ ಈ ಹಳ್ಳಿಯ ಮತದಾರರ ಕೈಗೆ ಮತದಾನಕ್ಕೂ ಮೊದಲೇ ಶಾಯಿ ಹಚ್ಚಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರತಿಪಕ್ಷಗಳಿಗೆ ಮತ ಹೋಗಲಿದೆ ಎಂಬ ಭಯದ ಮೇಲೆ ಬಿಜೆಪಿ ನಾಯಕರು ಮತದಾರರ ಬೆರಳಿಗೆ ಶಾಯಿ ಅಂಟಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಲೋಕಸಭೆ ಚುನಾವಣೆ LIVE: ಬೆಳಗ್ಗೆ 9 ಗಂಟೆಯವರೆಗೆ ಎಲ್ಲೆಲ್ಲಿ ಎಷ್ಟು ಮತದಾನಲೋಕಸಭೆ ಚುನಾವಣೆ LIVE: ಬೆಳಗ್ಗೆ 9 ಗಂಟೆಯವರೆಗೆ ಎಲ್ಲೆಲ್ಲಿ ಎಷ್ಟು ಮತದಾನ

ಈ ಹಿಂದೆ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಹಾಗೂ ಎಸ್‌ಪಿ ಮುಖಂಡರಾದ ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. ಬಿಜೆಪಿಯೇತರ ಮತದಾರರು ಮತಗಟ್ಟೆಗೆ ಬರದಂತೆ ಅಡ್ಡಿ ಪಡಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

villagers allege ink was forcefully applied to their fingers
ಈಗ ಇದಕ್ಕೆ ಪೂರಕವಾಗಿ ಈಗ ಬಿಜೆಪಿಯ ಮೇಲೆ ಈ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶದ ಚಾಂಡೌಲಿಯ ಜೀವನಪುರದಲ್ಲಿ ಮತದಾರರ ಬೆರಳಿಗೆ ಶಾಯಿಯನ್ನು ಅಂಟಿಸಲಾಗಿದೆ.

ಮೊದಲು ದೇಶ ಸುತ್ತಿ ಎಂದು ಭಾರತೀಯರಿಗೆ ಕರೆ ನೀಡಿದ ಪ್ರಧಾನಿ ಮೋದಿ ಮೊದಲು ದೇಶ ಸುತ್ತಿ ಎಂದು ಭಾರತೀಯರಿಗೆ ಕರೆ ನೀಡಿದ ಪ್ರಧಾನಿ ಮೋದಿ

ಮತದಾರರು ಶಾಯಿ ಅಂಟಿಸಿದ್ದನ್ನು ಇಟ್ಟುಕೊಂಡು ಮತ್ತೆ ಮತದಾನ ಮಾಡಲು ಮತಗಟ್ಟೆಗೆ ಬಂದಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಬಿಜೆಪಿ ನಾಯಕರು ಮೊದಲೇ ಬಂದು ಬೆರಳಿಗೆ ಶಾಯಿ ಹಾಕಿ ಹೋಗಿದ್ದಾರೆ. ಹಾಗೆ ಪ್ರತಿಯೊಬ್ಬರಿಗೆ 500ರೂ ನೀಡಿದ್ದಾರೆ ಎನ್ನುವ ಗಂಭೀರ ಆರೋಪವೂ ಕೇಳಿಬಂದಿದೆ.

English summary
Residents of Tara Jivanpur village allege ink was forcefully applied to their fingers and they were given Rs 500 y'day by 3 men of their village. Say, "They were from BJP and asked us if we'll vote for the party. They told us now you can't vote. Don't tell anyone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X