ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಸಿಟಿವಿ ದೃಶ್ಯ; ಹರ್ಯಾಣದಲ್ಲಿ ಅಡಗಿದ್ದಾನೆ ವಿಕಾಸ್ ದುಬೆ?

|
Google Oneindia Kannada News

ಲಕ್ನೋ, ಜುಲೈ 08 : ಎಂಟು ಪೊಲೀಸ್ ಸಿಬ್ಬಂದಿಗಳನ್ನು ಹತ್ಯೆ ಮಾಡಿ ಪರಾರಿಯಾಗಿರುವ ಉತ್ತರ ಪ್ರದೇಶದ ರೌಡಿ ಶೀಟರ್ ವಿಕಾಸ್ ದುಬೆ ಹರ್ಯಾಣದಲ್ಲಿ ಅಡಗಿರುವ ಸಾಧ್ಯತೆ ಇದೆ. ಪೊಲೀಸರಿಗೆ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಯೊಂದು ಈ ಕುರಿತು ಸುಳಿವು ಕೊಟ್ಟಿದೆ.

ಹರ್ಯಾಣದ ಫರೀದಾಬಾದ್ ಅಂಗಡಿಯೊಂದರ ಸಮೀಪ ವಿಕಾಸ್ ದುಬೆ ಹೋಲುವ ವ್ಯಕ್ತಿ ನಿಂತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಕಾಸ್ ದುಬೆ ಜೊತೆ ಸಂಪರ್ಕ ಹೊಂದಿದ್ದ ಪೊಲೀಸ್ ಅಧಿಕಾರಿ ವಿನಯ್ ತಿವಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ರೌಡಿ ಶೀಟರ್ ವಿಕಾಸ್ ದುಬೆ ತಲೆಗೆ 5 ಲಕ್ಷ ಬಹುಮಾನ ಘೋಷಣೆ! ರೌಡಿ ಶೀಟರ್ ವಿಕಾಸ್ ದುಬೆ ತಲೆಗೆ 5 ಲಕ್ಷ ಬಹುಮಾನ ಘೋಷಣೆ!

ಹರ್ಯಾಣ ಪೊಲೀಸರು ಪ್ರಭಾತ್, ಅಂಕುರ್ ಮತ್ತು ಶ್ರವಣ್ ಎಂಬ ಮೂವರನ್ನು ಬುಧವಾರ ಬಂಧಿಸಿದ್ದಾರೆ. ಬಂಧಿತರಿಂದ 9ಎಂಎಂನ 2 ಪೊಲೀಸ್ ಪಿಸ್ತೂಲ್, 45 ಸಜೀವ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇವರನ್ನು ಉತ್ತರ ಪ್ರದೇಶದ ಪೊಲೀಸರು ವಶಕ್ಕೆ ಪಡೆದುಕೊಳ್ಳಲಿದ್ದಾರೆ.

ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು? ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು?

Vikas Dubey In Haryana Police Gets CCTV Footage

ಬಿಕ್ರಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದ ಗುಂಡಿನ ದಾಳಿ ಬಳಿಕ ಪೊಲೀಸರು ಪಿಸ್ತೂಲ್‌ ಅನ್ನು ವಿಕಾಸ್ ದುಬೆ ಮತ್ತು ಆತನ ಸಹಚರರು ಹೊತ್ತುಕೊಂಡು ಹೋಗಿದ್ದರು. ಇದೇ ಪಿಸ್ತೂಲ್ ಬಂಧಿತರ ಬಳಿ ಇದೆ ಇತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸರು ಬಂದಾಗ ವಿಕಾಸ್ ದುಬೆ ಹೇಳಿದ್ದು ಒಂದೇ ಮಾತು! ಪೊಲೀಸರು ಬಂದಾಗ ವಿಕಾಸ್ ದುಬೆ ಹೇಳಿದ್ದು ಒಂದೇ ಮಾತು!

ಈ ಶಂಕೆಗೆ ಮತ್ತಷ್ಟು ಬಲ ನೀಡುವಂತೆ ವಿಕಾಸ್ ದುಬೆ ಹೋಲುವ ವ್ಯಕ್ತಿ ಫರೀದಾಬಾದ್ ಬಳಿಯ ಅಂಗಡಿ ಬಳಿ ನಿಂತಿರುವ ಸಿಸಿಟಿವಿ ದೃಶ್ಯ ಪೊಲೀಸರಿಗೆ ಸಿಕ್ಕಿದೆ. ಆದ್ದರಿಂದ ರೌಡಿ ಶೀಟರ್ ಹರ್ಯಾಣದಲ್ಲಿ ಅಡಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಗುರುವಾರ ಮಧ್ಯರಾತ್ರಿ ಪೊಲೀಸರು ವಿಕಾಸ್ ದುಬೆ ಬಂಧಿಸಲು ಆಗಮಿಸುವ ಕುರಿತು ರೌಡಿ ಶೀಟರ್‌ಗೆ ಪೊಲೀಸ್ ಅಧಿಕಾರಿ ವಿನಯ್ ತಿವಾರಿ ಮಾಹಿತಿ ನೀಡಿದ್ದಾನೆ ಎಂಬ ಆರೋಪವಿದೆ. ಸೇವೆಯಿಂದ ಅಮಾನತುಗೊಳಿಸಿದ್ದ ಆತನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

English summary
Police got the CCTV footage that a man suspected to be Vikas Dubey outside a shop in Faridabad, Haryana. He is the main accused in Kanpur encounter case where 8 police killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X