ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಜೌಗು ಪ್ರದೇಶದಲ್ಲಿ ಸಿಕ್ಕಿಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಬ್ರೇವ್ ಯುಪಿ ಪೊಲೀಸ್ ಅಧಿಕಾರಿ

|
Google Oneindia Kannada News

ಲಕ್ನೋ, ಜುಲೈ 4: ಉತ್ತರ ಪ್ರದೇಶದ ಆಗ್ರಾದಲ್ಲಿ ಜೌಗು ಪ್ರದೇಶದಲ್ಲಿ ಸಿಕ್ಕಿಬಿದ್ದ 54 ವರ್ಷದ ವ್ಯಕ್ತಿಯನ್ನು ರಕ್ಷಿಸಲು ಪೊಲೀಸ್ ಪೇದೆಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೋ ವೈರಲ್ ಆಗಿದೆ. ಈ ಸಾಹಸಮಯ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ಪೊಲೀಸರನ್ನು ಶ್ಲಾಘಿಸಿದ್ದಾರೆ.

ಆಗ್ರಾದ ಬರ್ಹಾನ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶೇರ್ ಸಿಂಗ್ ಅವರು ಶುಕ್ರವಾರ ಮಧ್ಯಾಹ್ನ ಎತ್ಮಾದ್‌ಪುರದ ರೈಲ್ವೆ ನಿಲ್ದಾಣದ ಬಳಿ ಜೌಗು ಪ್ರದೇಶದಲ್ಲಿ ಸಿಲುಕಿರುವ ವ್ಯಕ್ತಿಯ ಬಗ್ಗೆ ಕರ್ತವ್ಯದಲ್ಲಿರುವ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂತ್ರಸ್ತ ವ್ಯಕ್ತಿಯನ್ನು ಬ್ರಜೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಕೊಚ್ಚೆಯಲ್ಲಿ ಸಿಕ್ಕ ವ್ಯಕ್ತಿಗೆ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರನ್ನು ಸುರಕ್ಷತವಾಗಿ ರಕ್ಷಣೆ ಮಾಡಲಾಗಿದೆ.

ಲಕ್ನೋ: ವಿಗ್ರಹ ಕದ್ದ ಕಳ್ಳರನ್ನು ಕಾಡಿದ ಕೆಟ್ಟ ಕನಸು, ಬದಲಾಯ್ತು ಕಳ್ಳರ ಮನಸುಲಕ್ನೋ: ವಿಗ್ರಹ ಕದ್ದ ಕಳ್ಳರನ್ನು ಕಾಡಿದ ಕೆಟ್ಟ ಕನಸು, ಬದಲಾಯ್ತು ಕಳ್ಳರ ಮನಸು

"ಪೊಲೀಸರ ತಂಡ ಸ್ಥಳವನ್ನು ತಲುಪಿ ಕಾನ್‌ಸ್ಟೆಬಲ್ ಸಂದೇಶ್ ಕುಮಾರ್ ಸೊಂಟಕ್ಕೆ ಹಗ್ಗವನ್ನು ಕಟ್ಟಿಕೊಂಡು ಜೌಗು ಪ್ರದೇಶಕ್ಕೆ ಪ್ರವೇಶಿಸಿದರು. ಕುಮಾರ್ ಆ ವ್ಯಕ್ತಿಯನ್ನು ತಪುಪಲು ಹರಸಾಹಸ ಪಡಬೇಕಾಯಿತು. ಇತರ ಪೊಲೀಸರು ಹಗ್ಗವನ್ನು ಬಳಸಿ ಅವರನ್ನು ಎಳೆಯಲು ಸಹಾಯ ಮಾಡಿದರು. ಆತನನ್ನು ರಕ್ಷಿಸಿದ ನಂತರ, ವ್ಯಕ್ತಿಯನ್ನು ಚಿಕಿತ್ಸೆಗಾಗಿ ಎತ್ಮಾದಪುರದ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ" ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

Video: Brave UP Police Officer Rescues Man Trapped In Swamp

"ಜೌಗು ಪ್ರದೇಶದಲ್ಲಿ ಅಸಹಾಯಕವಾಗಿ ಸಿಕ್ಕಿಬಿದ್ದ ವೃದ್ಧನನ್ನು ಹೊರತೆಗೆಯಲು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಕಾನ್‌ಸ್ಟೆಬಲ್ ಸಂದೇಶ್ ಕುಮಾರ್ ಮತ್ತು ತಂಡ PS ಬರ್ಹಾನ್ ಅವರ ಧೈರ್ಯಶಾಲಿ ಪ್ರಯತ್ನಗಳಿಗೆ ವಂದನೆಗಳು" ಎಂದು ಯುಪಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಆಗ್ರಾ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣ ಅವರು ಕಾನ್‌ಸ್ಟೆಬಲ್ ಸಂದೇಶ್ ಕುಮಾರ್ ಅವರ ಧೈರ್ಯಶಾಲಿ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ವ್ಯಕ್ತಿಯ ಜೀವವನ್ನು ಉಳಿಸಿದ್ದಕ್ಕಾಗಿ ಅವರಿಗೆ ಬಹುಮಾನವನ್ನು ಘೋಷಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೊಬ್ಬನ ಜೀವ ಉಳಿಸಿದ ಪೊಲೀಸರ ಪ್ರಯತ್ನವನ್ನು ಜನರು ಶ್ಲಾಘಿಸಿದ್ದಾರೆ.

Video: Brave UP Police Officer Rescues Man Trapped In Swamp

ವೈರಲ್ ವಿಡಿಯೋಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, "ನಾಗರಿಕರ ಸುರಕ್ಷತೆ ಮತ್ತು ಸಮವಸ್ತ್ರದ ಕರ್ತವ್ಯವನ್ನು ಪರಿಚಯಿಸಿದ ಸಂದೇಶ್ ಕುಮಾರ್ ಜಿ. ನಿಮ್ಮಲ್ಲಿ ಮಾನವೀಯತೆ ತುಂಬಿದೆ. ನೀವು ಉತ್ತಮ ಕೆಲಸ ಮುಂದುವರಿಸಿ. ಆ ದೇವರು ನಿಮ್ಮನ್ನು ನಿರೀಕ್ಷಿಸುತ್ತಾನೆ" ಎಂದು ಬರೆದಿದ್ದಾರೆ. ಮತ್ತೊಬ್ಬರು "ಅವರ ಅಸಾಧಾರಣ ಧೈರ್ಯಕ್ಕೆ ಸೆಲ್ಯೂಟ್" ಎಂದು ಬರೆದಿದ್ದಾರೆ.

English summary
A video of a police constable risking his life to save a 54-year-old man trapped in a swamp in Uttar Pradesh's Agra has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X