• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸೋಂಕಿತೆ ಕನಿಕಾ ಜೊತೆ ಪಾರ್ಟಿಯಲ್ಲಿದ್ದ ವಸುಂಧರಾ ರಾಜೇ ಸೇಫ್

|
Google Oneindia Kannada News

ಲಕ್ನೌ, ಮಾರ್ಚ್ 21: ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಗೆ ಕೊರೊನಾ ಫಲಿತಾಂಶ ನೆಗಿಟಿವ್ ಬಂದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಲಂಡನ್‌ನಿಂದ ಭಾರತಕ್ಕೆ ಬಂದಿದ್ದ ಗಾಯಕಿ ಕನಿಕಾ ಕಪೂರ್‌ಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಸೋಂಕು ದೃಢವಾಗುವುದಕ್ಕು ಮೊದಲು ಲಕ್ನೌನಲ್ಲಿ ನಡೆದ ಬರ್ತಡೇ ಪಾರ್ಟಿಯಲ್ಲಿ ಕನಿಕಾ ಕಪೂರ್ ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ವಸುಂಧರಾ ರಾಜೇ ಸೇರಿದಂತೆ ಹಲವು ರಾಜಕಾರಣಗಳಿಗೆ ಭಾಗವಹಿಸಿದ್ದರು. ಹಾಗಾಗಿ, ಕನಿಕಾ ಕಪೂರ್‌ನಿಂದ ತಮಗೂ ಸೋಂಕು ಹರಡಿಬರಹುದು ಎಂಬ ಆತಂಕದಿಂದ ಮನೆಯಲ್ಲೇ ದಿಗ್ಬಂಧನಕ್ಕೆ ಒಳಗಾಗಿದ್ದರು.

ಕನಿಕಾ ಕಪೂರ್ ವಿಚಾರದಲ್ಲಿ ತಪ್ಪು ಆಗಿದ್ದೆಲ್ಲಿ? ಕೊರೊನಾ ಸೋಂಕಿತೆ ಬಚ್ಚಿಟ್ಟ ಸತ್ಯಕನಿಕಾ ಕಪೂರ್ ವಿಚಾರದಲ್ಲಿ ತಪ್ಪು ಆಗಿದ್ದೆಲ್ಲಿ? ಕೊರೊನಾ ಸೋಂಕಿತೆ ಬಚ್ಚಿಟ್ಟ ಸತ್ಯ

ಇದೀಗ, ವಸುಂಧರಾ ರಾಜೇ ಅವರ ಕೊರೊನಾ ಪರೀಕ್ಷೆಯ ವರದಿ ಬಂದಿದ್ದು ನೆಗಿಟಿವ್ ಎಂದು ತಿಳಿದು ಬಂದಿದೆ. ಅಂದ್ಹಾಗೆ, ಇದು ಮೊದಲ ವರದಿ. ಇನ್ನೊಂದು ವರದಿ ಬರಬೇಕಾಗಿದ್ದು, ಮಾರ್ಚ್ 22ಕ್ಕೆ ಆ ವರದಿ ಸಿಗಲಿದೆಯಂತೆ.

ಮತ್ತೊಂದೆಡೆ ಅದೇ ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಉತ್ತರ ಪ್ರದೇಶದ ಆರೋಗ್ಯ ಸಚಿವರ ಕೊರೊನಾ ವರದಿಯೂ ನೆಗಿಟಿವ್ ಬಂದಿದೆ. ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯ ಈ ಬಗ್ಗೆ ಪರೀಕ್ಷೆ ನಡೆಸಿದ್ದು. ಸಚಿವ ಜೈ ಪ್ರತಾಪ್ ಸಿಂಗ್ ಅವರಿಗೆ ಸೋಂಕು ಇಲ್ಲ ಎಂದು ತಿಳಿಸಿದೆ.

ಕನಿಕಾ ಕಪೂರ್ ಜತೆಗಿದ್ದ ವಸುಂಧರಾ ರಾಜೇ, ಮಗ ದುಶ್ಯಂತ್‌ಗೆ ಹೆಚ್ಚಿದ ಆತಂಕಕನಿಕಾ ಕಪೂರ್ ಜತೆಗಿದ್ದ ವಸುಂಧರಾ ರಾಜೇ, ಮಗ ದುಶ್ಯಂತ್‌ಗೆ ಹೆಚ್ಚಿದ ಆತಂಕ

ಜೈ ಪ್ರತಾಪ್ ಸಿಂಗ್ ಅವರ ಜೊತೆ ಸಂಪರ್ಕ ಹೊಂದಿದ್ದ 28 ಜನರ ರಕ್ತದ ಮಾದರಿ ಕೂಡ ಸಂಗ್ರಹಿಸಿ ಪರೀಕ್ಷಿಸಲಾಗಿತ್ತು. ಅವರಿಗೂ ಸೋಂಕು ನೆಗಿಟಿವ್ ಬಂದಿದೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.

ಇನ್ನು ವಸುಂಧರಾ ರಾಜೇ ಅವರ ಮಗ ಸಂಸದ ದುಶ್ಯಂತ್ ಮತ್ತು ಆತನ ಪತ್ನಿ ಕೂಡ ಕನಿಕಾ ಕಪೂರ್ ಭಾಗಿಯಾಗಿದ್ದ ಪಾರ್ಟಿಯಲ್ಲಿದ್ದರು. ಅವರ ಕುರಿತು ವರದಿ ಇನ್ನು ಬಹಿರಂಗವಾಗಿಲ್ಲ.

English summary
Former Rajasthan Chief Minister Vasundhara Raje has tested negative for coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X