ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶಿಯ ವಿಶ್ವನಾಥನಿಗೂ ಕೊರೊನಾ ಭಯ: ದೇವರಿಗೂ ಬಂತು ಮಾಸ್ಕ್

|
Google Oneindia Kannada News

ವಾರಾಣಸಿ, ಮಾರ್ಚ್ 10: ಇಡೀ ವಿಶ್ವವೇ ಕೊರೊನಾಕ್ಕೆ ಬೆದರಿರುವಾಗ ದೇವರಿಗೂ ಹೆದರಿಕೆಯಾಗುವುದರಲ್ಲಿ ಆಶ್ಚರ್ಯವೇನಿಲ್ಲ ಬಿಡಿ.

ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೊರೊನಾ ಭೀತಿಯಿಂದ ಮುಖಕ್ಕೆ ಮಾಸ್ಕ್ ಕೈಗೆ ಗ್ಲೌಸ್‌ ಹಾಕಿಕೊಂಡು ತಿರುಗಾಡುತ್ತಿರುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ.

ಇಟಲಿ ಟು ಪಂಜಾಬ್: ಕೊರೊನಾ ಹೊತ್ತು ತಂದವನ ಕಥೆಇಟಲಿ ಟು ಪಂಜಾಬ್: ಕೊರೊನಾ ಹೊತ್ತು ತಂದವನ ಕಥೆ

ಆದರೆ ವಾರಾಣಸಿ ದೇವಾಲಯದಲ್ಲಿ ವಿಶ್ವನಾಥ ದೇವರ ಮೂರ್ತಿಗೂ ಮಾಸ್ಕ್‌ ಹಾಕಿರುವುದು ವಿಶೇಷವಾಗಿತ್ತು.

ದೇವರ ಮುಖಕ್ಕೆ ಮಾಸ್ಕ್ ಹಾಕಲು ಕಾರಣವೇನು?

ದೇವರ ಮುಖಕ್ಕೆ ಮಾಸ್ಕ್ ಹಾಕಲು ಕಾರಣವೇನು?

ಕೊರೊನಾ ವೈರಸ್ ವಿಶ್ವದಾದ್ಯಂತ ಹರಡುತ್ತಿದೆ. ಸಾವಿರಾರು ಮಂದಿ ಈ ರೋಗಕ್ಕೆ ಬಲಿಯಾಗಿದ್ದಾರೆ. ಸಾಮಾನ್ಯವಾಗಿ ಜನರು ಒಟ್ಟಾಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದೆಂದರೆ ಅದು ದೇವಸ್ಥಾನಕ್ಕೆ ಹೀಗಾಗಿ ದೇವರ ಮೂರ್ತಿಯನ್ನು ಯಾರೂ ಕೈಯಲ್ಲಿ ಮುಟ್ಟಬಾರದು ಎನ್ನುವ ಕಾರಣಕ್ಕೆ ಪೂಜಾರಿಯೊಬ್ಬರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಕೊರೊನಾ ವೈರಸ್ ಬಗ್ಗೆ ವಿಶ್ವನಾಥನ ಜಾಗೃತಿ

ಕೊರೊನಾ ವೈರಸ್ ಬಗ್ಗೆ ವಿಶ್ವನಾಥನ ಜಾಗೃತಿ

ವಾರಾಣಸಿಯ ವಿಶ್ವನಾಥ ದೇವಾಲಯದಲ್ಲಿ ದೇವರೇ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ್ದಾನೆ. ಚಳಿಗಾಲದ ಸಮಯದಲ್ಲಿ ದೇವರ ಮೂರ್ತಿಗೆ ಬಟ್ಟೆ ಹೊದಿಸುತ್ತೇವೆ. ಬೇಸಿಗೆಯಿದ್ದಲ್ಲಿ ಎಸಿ, ಕೂಲರ್, ಫ್ಯಾನ್ ಬಳಕೆ ಮಾಡುವ ರೀತಿಯಲ್ಲೇ, ಕೊರೊನಾ ಭೀತಿ ಇರುವ ಕಾರಣ ಮಾಸ್ಕ್ ಹೊದಿಸಲಾಗಿದೆ.

ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!

ದೇವಸ್ಥಾನದಲ್ಲಿ ದೇವರ ಮೂರ್ತಿ ಮುಟ್ಟಬೇಡಿ

ದೇವಸ್ಥಾನದಲ್ಲಿ ದೇವರ ಮೂರ್ತಿ ಮುಟ್ಟಬೇಡಿ

ಯಾವುದೇ ದೇವಸ್ಥಾನವಿರಲಿ ಸಧ್ಯಕ್ಕೆ ದೇವರ ಮೂರ್ತಿಯನ್ನು ಮುಟ್ಟಿ ನಮಸ್ಕರಿಸುವುದು ಬೇಡ. ಕೊರೊನಾವೈರಸ್ ವಿಶ್ವದಾದ್ಯಂತ ಹರಡುತ್ತಿರುವುದರಿಂದ ಎಷ್ಟು ಜಾಗೃತಿವಹಿಸಿದರೂ ಸಾಲದು ಎಂದು ಪೂಜಾರಿಯೊಬ್ಬರು ಹೇಳಿದ್ದಾರೆ.

ದೇವಸ್ಥಾನದಲ್ಲಿ ಪೂಜಾರಿ, ಭಕ್ತಾದಿಗಳಿಗೆ ಮಾಸ್ಕ್

ದೇವಸ್ಥಾನದಲ್ಲಿ ಪೂಜಾರಿ, ಭಕ್ತಾದಿಗಳಿಗೆ ಮಾಸ್ಕ್

ವಾರಾಣಸಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜಾರಿ, ಭಕ್ತಾದಿಗಳೂ ಮಾಸ್ಕ್ ಧರಿಸಿದ್ದಾರೆ.ಹೀಗಾಗಿ ಕೊಂಚ ಮಟ್ಟಿಗೆ ಕೊರೊನಾದಿಂದ ದೂರವಿರುವ ಪ್ರಯತ್ನ ಮಾಡುತ್ತಿದ್ದಾರೆ.

English summary
Coronavirus Effect: a priest at a Varanasi temple has put face masks on deities and appealed to devotees to not touch the idols.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X