ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಣಾಸಿ : ಪ್ರಧಾನಿ ಮೋದಿ ವಿರುದ್ಧ ಒಬ್ಬ ರೈತನಿಂದ ಮಾತ್ರ ಸ್ಪರ್ಧೆ

|
Google Oneindia Kannada News

Recommended Video

Varanasi: ವಾರಾಣಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಒಬ್ಬ ರೈತನಿಂದ ಮಾತ್ರ ಸ್ಪರ್ಧೆ

ವಾರಣಾಸಿ, ಮೇ 02: ತೆಲಂಗಾಣ ರಾಜ್ಯದ ನಿಜಾಮಬಾದ್ ಲೋಕಸಭಾ ಕ್ಷೇತ್ರದಂತೆ ವಾರಣಾಸಿಯಲ್ಲೂ ರೈತರು ಚುನಾವಣೆ ಕಣಕ್ಕಿಳಿದಿದ್ದಾರೆ. ಆದರೆ, ಅಧಿಕ ಸಂಖ್ಯೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಿಲ್ಲ.

ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ 100ಕ್ಕೂ ಅಧಿಕ ರೈತರು, ವಾರಣಾಸಿಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಬಂದಿತ್ತು. ನಿಜಾಮಾಬಾದಿನ 55 ರೈತರು ಹಾಗೂ ತಮಿಳುನಾಡಿನ 40 ಮಂದಿ ರೈತರು ಕಣಕ್ಕಿಳಿಯುವ ಸಾಧ್ಯತೆಯಿತ್ತು. ಆದರೆ, ಕೊನೆಗೆ 25 ಮಂದಿ ರೈತರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಒಬ್ಬ ರೈತನ ನಾಮಪತ್ರ ಮಾತ್ರ ಸ್ವೀಕೃತವಾಗಿದೆ.ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತೆಲಂಗಾಣದ ಅರಿಸಿನ ಬೆಳೆಗಾರರ ಸಂಘದ ಅಧ್ಯಕ್ಷ ಕೊಟಪಟಿ ನರಸಿಂಹ ನಾಯ್ಡು ಹೇಳಿದ್ದಾರೆ.

ಅತಿ ಹೆಚ್ಚು ಇವಿಎಂ ಬಳಕೆ, ಇತಿಹಾಸ ಸೃಷ್ಟಿಸಿದ ನಿಜಾಮಾಬಾದ್ ಅತಿ ಹೆಚ್ಚು ಇವಿಎಂ ಬಳಕೆ, ಇತಿಹಾಸ ಸೃಷ್ಟಿಸಿದ ನಿಜಾಮಾಬಾದ್

ಅರಿಸಿನ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗದ ಕಾರಣ, ಪ್ರತಿಭಟನಾ ರೂಪವಾಗಿ ರೈತರು ಅಧಿಕ ಸಂಖ್ಯೆಯಲ್ಲಿ ಲೋಕಸಭೆ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದರು. ನಿಜಾಮಾಬಾದಿನಲ್ಲಿ 178 ರೈತರು ಕಣಕ್ಕಿಳಿದಿದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿದ ಕ್ಷೇತ್ರವೆನಿಸಿತ್ತು. 189ಕ್ಕೂ ಅಧಿಕ ಅಭ್ಯರ್ಥಿಗಳಿದ್ದರಿಂದ ವಿಶೇಷ ಇವಿಎಂ ಬಳಸಬೇಕಾಯಿತು.

Varanasi : Only One Telangana farmer to contest against PM Modi

ಆದರೆ, ವಾರಣಾಸಿಯಲ್ಲಿ ಇಸ್ತೈ ಸುನ್ನಾಂ ನರಸಯ್ಯ ಅವರ ನಾಮಪತ್ರ ಮಾತ್ರ ಅಂಗೀಕೃತವಾಗಿದೆ. ಒಟ್ಟಾರೆ, 119 ನಾಮಪತ್ರಗಳ ಪೈಕಿ 89 ನಾಮಪತ್ರಗಳು ತಿರಸ್ಕೃತವಾಗಿವೆ.

English summary
Varanasi: Only One Telangana farmer to contest against PM Modi. Only 1 out of 25 turmeric farmers from Telangana could finally make it to the battlefield since all other nominations from farmers rejected in Varanasi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X