ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಪತ್ತೆಯಾಗಿದ್ದ ಕೋವಿಡ್ ರೋಗಿಯ ಮೃತದೇಹ ಪತ್ತೆ: ಕಿಡ್ನಿ ಕದಿಯಲು ಆಸ್ಪತ್ರೆ ಸಿಬ್ಬಂದಿಯಿಂದಲೇ ಕೊಲೆ?

|
Google Oneindia Kannada News

ವಾರಣಾಸಿ, ಆಗಸ್ಟ್ 25: ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಬಲಿಯಾದವರ ದೇಹಗಳ ಹಸ್ತಾಂತರ ಮಾಡುವ ಪ್ರಕರಣಗಳು ಸಾಕಷ್ಟು ವಿವಾದ ಸೃಷ್ಟಿಸುತ್ತಿವೆ. ಕುಟುಂಬದವರಿಗೆ ಮಾಹಿತಿ ನೀಡದೆಯೇ ಅಂತ್ಯಸಂಸ್ಕಾರ ನಡೆಸಿದ ಹಲವು ಪ್ರಕರಣಗಳಿವೆ. ಇನ್ನು ಕೆಲವು ಪ್ರಕರಣಗಳಲ್ಲಿ ಮೃತರ ದೇಹವನ್ನು ಕೊನೆಯ ಬಾರಿಗೆ ನೋಡಲು ಕೂಡ ದುಡ್ಡು ಕೇಳಿದ ಆಸ್ಪತ್ರೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Recommended Video

Annamalai IPS : ಕಮಲ ಹಿಡಿದು ಕಮಾಲ್ ಮಾಡ್ತಾರ ಸಿಂಗಂ | Oneindia Kannada

ಕೊರೊನಾದಿಂದ ಮೃತಪಟ್ಟಿದ್ದಾರೆ ಎನ್ನಲಾದ ವ್ಯಕ್ತಿಗಳ ಮೃತದೇಹವನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಸುತ್ತಿರಲಾಗುತ್ತದೆ. ಅವರ ಅಂಗಾಂಗಗಳನ್ನು ಕಳವು ಮಾಡಿದ್ದರೂ ಇದರಿಂದ ಗೊತ್ತಾಗುವುದಿಲ್ಲ ಎಂಬ ಅನುಮಾನಗಳು ಹೆಚ್ಚಾಗುತ್ತಿವೆ. ಅದಕ್ಕೆ ಪೂರಕವೆಂಬಂತಹ ಘಟನೆಯೊಂದು ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರದಲ್ಲಿಯೇ ನಡೆದಿದೆ.

ಒಂದೇ ದಿನ ಸಾವಿನ ಮನೆಯ ಕದ ತಟ್ಟಿದ ತಂದೆ ಮಗ; ಮಾಗಡಿಯಲ್ಲಿ ದಾರುಣ ಘಟನೆಒಂದೇ ದಿನ ಸಾವಿನ ಮನೆಯ ಕದ ತಟ್ಟಿದ ತಂದೆ ಮಗ; ಮಾಗಡಿಯಲ್ಲಿ ದಾರುಣ ಘಟನೆ

ಉತ್ತರ ಪ್ರದೇಶದ ವಾರಣಾಸಿಯ ಆಸ್ಪತ್ರೆಯೊಂದರಿಂದ ಕಣ್ಮರೆಯಾಗಿದ್ದ ಕೋವಿಡ್ ರೋಗಿಯ ದೇಹ ಒಂದು ದಿನದ ಬಳಿಕ ಸಮೀಪದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಚರಂಡಿಯೊಂದರಲ್ಲಿ ಪತ್ತೆಯಾಗಿದೆ. ಮುಂದೆ ಓದಿ...

ನಾಪತ್ತೆಯಾಗಿದ್ದ ರೋಗಿ

ನಾಪತ್ತೆಯಾಗಿದ್ದ ರೋಗಿ

ವಾರಣಾಸಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದರು. ಆಘಾತಕಾರಿ ಬೆಳವಣಿಗೆಯಲ್ಲಿ ಅವರು ಕಣ್ಮರೆಯಾಗಿ ಮರುದಿನ ವಾರಣಾಸಿಯ ಚರಂಡಿಯೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಚರಂಡಿಯಲ್ಲಿ ಮೃತದೇಹ ಪತ್ತೆ

ಚರಂಡಿಯಲ್ಲಿ ಮೃತದೇಹ ಪತ್ತೆ

ನಗರದ ಬಿಎಚ್‌ಯು ಕೋವಿಡ್ ಆಸ್ಪತ್ರೆಯ ಸಮೀಪದ ಚರಂಡಿ ಸಾಲಿನಲ್ಲಿ ಸೋಮವಾರ ರೋಗಿಯ ಮೃತದೇಹ ದೊರಕಿದೆ. ಈ ಘಟನೆ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ರೋಗಿಯ ಅಂಗಾಂಗಗಳನ್ನು ಕದಿಯುವ ಸಲುವಾಗಿ ಅವರನ್ನು ಆಸ್ಪತ್ರೆ ಅಧಿಕಾರಿಗಳು ಕೊಂದು ಹಾಕಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ವಿಶ್ವದ ನಾಲ್ವರು ಕೊವಿಡ್-19 ಸೋಂಕಿತರಲ್ಲಿ ಒಬ್ಬರು ಭಾರತೀಯರು!ವಿಶ್ವದ ನಾಲ್ವರು ಕೊವಿಡ್-19 ಸೋಂಕಿತರಲ್ಲಿ ಒಬ್ಬರು ಭಾರತೀಯರು!

ಕಿಡ್ನಿ ಕದಿಯಲು ಕೊಲೆ

ಕಿಡ್ನಿ ಕದಿಯಲು ಕೊಲೆ

ರೋಗಿಯ ಕಿಡ್ನಿಗಳನ್ನು ಕದಿಯಲು ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ ಕುಟುಂಬದವರು, ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಾಂಧಲೆ ನಡೆಸಿದ್ದಾರೆ. ಸುತ್ತಲಿನ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಸ್ಥಳಕ್ಕೆ ಧಾವಿಸಿ ಕುಟುಂಬದವರನ್ನು ಸಮಾಧಾನಪಡಿಸಿದರು.

ಆಸ್ಪತ್ರೆಯಿಂದ ನಾಪತ್ತೆ

ಆಸ್ಪತ್ರೆಯಿಂದ ನಾಪತ್ತೆ

ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಬಿಎಚ್‌ಯು ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿದ್ದ ವ್ಯಕ್ತಿ ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದರು. ದಾಫಿಯ ಲಂಕಾ ಪೊಲೀಸ್ ಠಾಣೆಯಲ್ಲಿ ಕುಟುಂಬದವರು ಕಾಣೆಯಾದ ಬಗ್ಗೆ ದೂರು ನೀಡಿದ್ದರು.

ಹಾಂಗ್‌ ಕಾಂಗ್‌:ಕೊರೊನಾದಿಂದ ಗುಣಮುಖರಾದವರಿಗೆ 4 ತಿಂಗಳ ಬಳಿಕ ಮತ್ತೆ ಸೋಂಕುಹಾಂಗ್‌ ಕಾಂಗ್‌:ಕೊರೊನಾದಿಂದ ಗುಣಮುಖರಾದವರಿಗೆ 4 ತಿಂಗಳ ಬಳಿಕ ಮತ್ತೆ ಸೋಂಕು

ಅಪಘಾತದಲ್ಲಿ ಗಾಯಗೊಂಡಿದ್ದರು

ಅಪಘಾತದಲ್ಲಿ ಗಾಯಗೊಂಡಿದ್ದರು

ಅಪಘಾತವೊಂದರಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಕಳೆದ ವಾರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವುದು ಬಳಿಕ ಕಂಡುಬಂದಿತ್ತು. ಇದರಿಂದ ಅವರನ್ನು ಆಸ್ಪತ್ರೆಯ ಕೋವಿಡ್ ಐಸೋಲೇಷನ್ ವಾರ್ಡ್‌ಗೆ ವರ್ಗಾಯಿಸಲಾಗಿತ್ತು. ಭಾನುವಾರ ಅವರು ನಾಪತ್ತೆಯಾಗಿರುವುದು ಗೊತ್ತಾದ ಬಳಿಕ ತೀವ್ರ ಹುಡುಕಾಟ ನಡೆಸಲಾಗಿತ್ತು. ಆಸ್ಪತ್ರೆಯ ಚರಂಡಿ ಸಾಲಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

English summary
Varanasi: A missing Covid patient's body was found a day after near BHU's sewer, family allges he was killed by hospital for kidney.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X