ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಬೀದಿನಾಯಿಗಳಿಗೆ ಹೊಡೆದ ಆರೋಪ: ಕಾವಲುಗಾರನಿಗೆ ಥಳಿಸಿದ ಮಹಿಳೆ

|
Google Oneindia Kannada News

ಲಕ್ನೋ ಆಗಸ್ಟ್ 16: ಬೀದಿನಾಯಿಗಳನ್ನು ಕೆಟ್ಟದಾಗಿ ನಡೆಸಿಕೊಂಡ ಆರೋಪದ ಮೇಲೆ ಮಹಿಳೆಯೊಬ್ಬರು ರೆಸಿಡೆನ್ಶಿಯಲ್ ಸೊಸೈಟಿಯ ಸೆಕ್ಯುರಿಟಿ ಗಾರ್ಡ್‌ಗೆ ಥಳಿಸಿ ನಿಂದಸಿರುವುದು ಬೆಳಕಿಗೆ ಬಂದಿದೆ. ಘಟನೆಯ ವಿಡಿಯೊ ಭಾನುವಾರ ವೈರಲ್ ಆಗಿದೆ. ಆಗ್ರಾ ಪೊಲೀಸರು ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಎಂದು ಹೇಳಿಕೊಳ್ಳುವ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸುಮಾರು 2.10 ನಿಮಿಷಗಳ ಕ್ಲಿಪ್‌ನಲ್ಲಿ ಇಪ್ಪತ್ತರ ಹರೆಯದವಳಂತೆ ಕಾಣುವ ಮಹಿಳೆ, ಪುರುಷನ ವಿರುದ್ಧ ದೂರು ನೀಡುವುದಾಗಿ ಬೆದರಿಕೆ ಹಾಕಿರುವು ಕಂಡು ಬಂದಿದೆ.

Uttar Pradesh: Woman thrashes guard, hurls abuses over alleged ill-treatment of stray dogs

ಈ ವ್ಯಕ್ತಿ ನ್ಯೂ ಆಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಐಸಿ ಆಫೀಸರ್ ಕಾಲೋನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ. ತಾನು ಮಾಜಿ ಸೈನಿಕ ಎಂದು ವಿಡಿಯೋದಲ್ಲಿ ಹೇಳಿರುವುದು ಕೇಳಿಬರುತ್ತಿದೆ. ಅವರು ಕಾಲೋನಿಯಿಂದ ಬೀದಿ ನಾಯಿಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಆಗ್ರಾ ಪೊಲೀಸರು ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಎಲ್‌ಐಸಿ ಅಧಿಕಾರಿಗಳ ಕಾಲೋನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಅಖಿಲೇಶ್ ಸಿಂಗ್ ಅವರು ದೂರು ದಾಖಲಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ಕಾವಲುಗಾರನನ್ನು ಥಳಿಸಿದ ಮಹಿಳೆಯ ವಿವರಗಳನ್ನು ಪೊಲೀಸರು ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಮಹಿಳೆ ಹೇಳಿದ್ದೇನು?

ಮಹಿಳೆ ತನ್ನನ್ನು ಪ್ರಾಣಿ ಹಕ್ಕುಗಳ ಕಾರ್ಯಕರ್ತ ಡಿಂಪಿ ಮಹೇಂದ್ರು ಎಂದು ಪರಿಚಯಿಸಿಕೊಳ್ಳುವುದನ್ನು ವಿಡಿಯೋದಲ್ಲಿ ಕೇಳಿಬರುತ್ತದೆ. ತಾನು ಕಳೆದ 15-18 ವರ್ಷಗಳಿಂದ ಪ್ರಾಣಿಗಳ ಮೇಲಿನ ಕ್ರೌರ್ಯದ ವಿರುದ್ಧ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಎರಡು-ಮೂರು ದಿನಗಳ ಹಿಂದೆ ತನಗೆ ಕಾಲೋನಿಯಿಂದ ನಾಯಿಗಳ ಮೇಲಿನ ಕ್ರೌರ್ಯದ ಬಗ್ಗೆ ಕರೆ ಬಂದಿತ್ತು. ಆದರೆ ತಾನು ಊರಿನಲ್ಲಿಲ್ಲದ ಕಾರಣ ಬರಲು ಸಾಧ್ಯವಾಗಲಿಲ್ಲ. ಕಟ್ಟಡದ ಮುಂದೆ ಕಸ ಹಾಕಿದ್ದಕ್ಕಾಗಿ ಸಿಬ್ಬಂದಿ ನಾಯಿಯನ್ನು ಕೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Uttar Pradesh: Woman thrashes guard, hurls abuses over alleged ill-treatment of stray dogs

"ಶನಿವಾರವೂ, ನಾಯಿಗಳ ಮೇಲಿನ ಕ್ರೌರ್ಯದ ಬಗ್ಗೆ ನನಗೆ ಕರೆ ಬಂದಿತು ಮತ್ತು ನಾನು ಕಾಲೋನಿಗೆ ಬಂದೆ. ಕಾವಲುಗಾರನು ನಾಯಿಗಳನ್ನು ಕೋಲಿನಿಂದ ಹೊಡೆಯುತ್ತಿರುವುದನ್ನು ನೋಡಿದನು. ನಾನು ಅವನನ್ನು ತಡೆಯಲು ಪ್ರಯತ್ನಿಸಿದೆ. ಆದರೆ ಅವನು ನನಗೆ ಹೊಡೆಯಲು ಪ್ರಾರಂಭಿಸಿದನು. ಬಳಿಕ ನಾನು ಅವನ ಕೋಲು ಕಸಿದುಕೊಂಡೆನು. ಈ ಘಟನೆಯ ವಿಡಿಯೊವನ್ನು ಚಿತ್ರೀಕರಿಸಲು ತನ್ನ ಸ್ನೇಹಿತನನ್ನು ಕೇಳಿದೆ. ಸಿಬ್ಬಂದಿ ಕೂಡ ಮಾನಸಿಕ ಅಸ್ವಸ್ಥರಾಗಿದ್ದರು" ಎಂದು ಅವರು ವಿಡಿಯೊದಲ್ಲಿ ಹೇಳುತ್ತಾರೆ.

English summary
Uttar Pradesh: A video of a woman beating and abusing a watchman for allegedly mistreating stray dogs has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X