• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶದಲ್ಲಿ 'ನಿರ್ಭಯಾ' ಮಾದರಿಯಲ್ಲಿ ಭೀಕರ ಸಾಮೂಹಿಕ ಅತ್ಯಾಚಾರ, ಕೊಲೆ

|

ಲಕ್ನೋ, ಜನವರಿ 6: ಹತ್ರಾಸ್ ಅತ್ಯಾಚಾರ ಪ್ರಕರಣದ ಕ್ರೌರ್ಯದ ಘಟನೆ ಇನ್ನೂ ಹಸಿಯಾಗಿರುವಾಗಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಿದೆ. ಅದೂ ದೆಹಲಿಯ 'ನಿರ್ಭಯಾ' ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸ್ವರೂಪದಲ್ಲಿ. ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮಧ್ಯವಯಸ್ಕ ಮಹಿಳೆಯ ಮೇಲೆ 'ನಿರ್ಭಯಾ' ಘಟನೆಯನ್ನು ಹೋಲುವಂತಹ ಭಯಾನಕ ಅತ್ಯಾಚಾರ ಹಾಗೂ ಬರ್ಬರ ಹತ್ಯೆ ನಡೆದಿದೆ.

ಬದೌನ್ ಜಿಲ್ಲೆಯ ಉಘೈಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಭಾನುವಾರ ಸಂಜೆ ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಮನೆಗೆ ಮರಳಿ ಬಂದಿರಲಿಲ್ಲ. ರಾತ್ರಿ ಸುಮಾರು 12 ಗಂಟೆಯ ಸುಮಾರಿಗೆ ಒಬ್ಬರು ಕಾರು ಚಾಲಕ ಮತ್ತು ಇಬ್ಬರು ವ್ಯಕ್ತಿಗಳು ರಕ್ತದ ಮಡುವಿನಲ್ಲಿ ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮಹಿಳೆ ರಾತ್ರಿಯೇ ಅಸುನೀಗಿದ್ದಾರೆ.

ಹತ್ರಾಸ್ ಅತ್ಯಾಚಾರ: ಎಲ್ಲ 4 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್

ಅತ್ಯಾಚಾರ ಎಸಗಿ ಕ್ರೂರವಾಗಿ ಹಿಂಸಿಸಿದ್ದ ದುಷ್ಕರ್ಮಿಗಳು ಸಂತ್ರಸ್ತೆಗೆ ಚಿಕಿತ್ಸೆ ಒದಗಿಸುವ ಸಲುವಾಗಿ ಕಾರ್‌ನಲ್ಲಿ ಚಾಂಡೌಸಿಗೆ ಕರೆದೊಯ್ದಿದ್ದರು ಎನ್ನುವುದು ತನಿಖೆಯಿಂದ ಗೊತ್ತಾಗಿದೆ. ಮಹಿಳೆಯನ್ನು ಅತ್ಯಾಚಾರದ ವೇಳೆ ಅತ್ಯಂತ ಕ್ರೂರವಾಗಿ ಹಿಂಸಿಸಲಾಗಿದೆ ಎನ್ನುವುದು ಶವಪರೀಕ್ಷೆಯಿಂದ ಬಹಿರಂಗವಾಗಿದೆ. ಮುಂದೆ ಓದಿ.

18 ಗಂಟೆಗಳ ಬಳಿಕ ಮರಣೋತ್ತರ ಪರೀಕ್ಷೆ

18 ಗಂಟೆಗಳ ಬಳಿಕ ಮರಣೋತ್ತರ ಪರೀಕ್ಷೆ

ದೂರು ನೀಡಿದ ಬಳಿಕವೂ ಉಘೈಟಿ ಪೊಲೀಸ್ ಠಾಣೆಯ ಅಧಿಕಾರಿ ರವೇಂದ್ರ ಪ್ರತಾಪ್ ಸಿಂಗ್ ಸ್ಥಳಕ್ಕೆ ಬಂದಿರಲಿಲ್ಲ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ. ಘಟನೆ ನಡೆದು 18 ಗಂಟೆಗಳ ಬಳಿಕ ಸೋಮವಾರ ಮಧ್ಯಾಹ್ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಿಳಾ ವೈದ್ಯರೊಬ್ಬರು ಸೇರಿದಂತೆ ಮೂವರು ವೈದ್ಯರ ತಂಡ ಶವಪರೀಕ್ಷೆ ನಡೆಸಿದೆ.

ಕಾಲು, ಮೂಳೆ ಮುರಿತ

ಕಾಲು, ಮೂಳೆ ಮುರಿತ

ಮಂಗಳವಾರ ನಡೆದ ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ಮಹಿಳೆಯ ಗುಪ್ತಾಂಗಗಳಲ್ಲಿ ಮಾರಣಾಂತಿಕ ಗಾಯಗಳಾಗಿದ್ದವು. ಮಹಿಳೆಯ ಪಕ್ಕೆಲಬು ಮತ್ತು ಕಾಲುಗಳನ್ನು ಮುರಿಯಲಾಗಿದ್ದು, ಭಾರವಾದ ವಸ್ತುವಿನಿಂದ ಶ್ವಾಸಕೋಶಗಳ ಮೇಲೆ ಹೊಡೆಯಲಾಗಿದೆ. ಇದರಿಂದ ಆಕೆ ವಿಪರೀತ ರಕ್ತಸ್ರಾವಕ್ಕೆ ಒಳಗಾಗಿದ್ದಾಳೆ.

ಜಾರ್ಖಂಡ್: ಪತಿ ಎದುರೇ ಪತ್ನಿ ಮೇಲೆ 17 ಮಂದಿಯಿಂದ ಅತ್ಯಾಚಾರ

ಮೂವರು ಆರೋಪಿಗಳ ವಿರುದ್ಧ ಪ್ರಕರಣ

ಮೂವರು ಆರೋಪಿಗಳ ವಿರುದ್ಧ ಪ್ರಕರಣ

ಪೊಲೀಸರು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳಾದ ಮಹಾಂತ್ ಬಾಬಾ ಸತ್ಯನಾರಾಯಣ, ಆತನ ಸಹವರ್ತಿ ವೆದ್ರಮ್, ಚಾಲಕ ಜಸ್ಪಾಲ್ ಅವರನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ.

ಗುಪ್ತಾಂಗಕ್ಕೆ ರಾಡ್ ತುರುಕಿದ ಕ್ರೂರಿಗಳು

ಗುಪ್ತಾಂಗಕ್ಕೆ ರಾಡ್ ತುರುಕಿದ ಕ್ರೂರಿಗಳು

ಅಂಗನವಾಡಿಯಲ್ಲಿ ಸಹಾಯಕಿಯಾಗಿದ್ದ ಮಹಿಳೆ ಸುಮಾರು 50 ವರ್ಷ ವಯಸ್ಸಿನವರಾಗಿದ್ದು, ಆರಾಧನಾ ಸ್ಥಳದ ಒಳಗೇ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಆಕೆಯ ಗುಪ್ತಾಂಗಗಳಿಗೆ ರಾಡ್‌ನಂತಹ ವಸ್ತುವನ್ನು ತುರುಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಿಯಕರನನ್ನು ಭೇಟಿಯಾಗಲು ನಿರಾಕರಿಸಿದ್ದಕ್ಕೆ ಅತ್ಯಾಚಾರ, ಕೊಲೆ

English summary
A woman who went to a temple in Uttar Pradesh's Badaun district village was gang-raped and killed brutally similar to Nirbhaya case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X