ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದ ಮೊದಲ 'ಲವ್ ಜಿಹಾದ್' ಪ್ರಕರಣಕ್ಕೆ ತಿರುವು

|
Google Oneindia Kannada News

ಲಕ್ನೋ, ಡಿಸೆಂಬರ್ 16: ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಕಾನೂನಿನ ಅಡಿಯಲ್ಲಿ ದಾಖಲಿಸಲಾದ ಪ್ರಕರಣವೊಂದು ಹೊಸ ವಿವಾದ ಸೃಷ್ಟಿಸಿದೆ. ಅನ್ಯಧರ್ಮೀಯನನ್ನು ಮದುವೆಯಾಗಿದ್ದ ಮಹಿಳೆ, ಸುಳ್ಳು ಆರೋಪದ ದಾಖಲಿಸಲಾಗಿದೆ ಎಂದು ತಾಯಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ತಾವು ತಮ್ಮ ಇಷ್ಟದಂತೆ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದು, ಇಚ್ಛೆಯಂತೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿರುವುದಾಗಿ ತಿಳಿಸಿದ್ದಾಳೆ.

ಮುಸ್ಕಾನ್ ಜಹಾನ್ ಅಲಿಯಾಸ್ ಪಿಂಕಿ ಎಂಬ 23 ವರ್ಷದ ಮಹಿಳೆಯನ್ನು ಆಶ್ರಯ ಸಂಸ್ಥೆಯೊಂದಕ್ಕೆ ಒಪ್ಪಿಸಲಾಗಿದ್ದರೆ, ಆಕೆಯ ಗಂಡನನ್ನು ಲವ್ ಜಿಹಾದ್ ವಿರುದ್ಧದ ಕಾನೂನಿನ ಅಡಿ ಬಂಧಿಸಲಾಗಿತ್ತು. ಆದರೆ ಮೂರು ತಿಂಗಳ ಗರ್ಭಿಣಿಯಾಗಿದ್ದ ತನಗೆ ಈಗ ಗರ್ಭಪಾತವಾಗಿದ್ದು, ಇದಕ್ಕೆ ಆಶ್ರಯ ಸಂಸ್ಥೆಯೇ ಹೊಣೆ ಎಂದು ಆಕೆ ಆರೋಪಿಸಿದ್ದಾಳೆ.

ಲವ್ ಜಿಹಾದ್ ವದಂತಿ: ಮುಸ್ಲಿಂ ದಂಪತಿಯನ್ನು ಲಾಕ್‌ಅಪ್‌ನಲ್ಲಿಟ್ಟ ಪೊಲೀಸರುಲವ್ ಜಿಹಾದ್ ವದಂತಿ: ಮುಸ್ಲಿಂ ದಂಪತಿಯನ್ನು ಲಾಕ್‌ಅಪ್‌ನಲ್ಲಿಟ್ಟ ಪೊಲೀಸರು

'ನನ್ನ ಮದುವೆ ವಿಚಾರವಾಗಿ ನನಗೆ ಸಂತಸವಿತ್ತು. ಮೊರಾದಾಬಾದ್‌ನಲ್ಲಿ ನೆಲೆಸಿರುವ ನನ್ನ ಪೋಷಕರೊಂದಿಗಿನ ಎಲ್ಲ ಸಂಬಂಧಗಳನ್ನೂ ಕಡಿದುಕೊಂಡಿದ್ದೆ' ಎಂದು ಮಹಿಳೆ ತಿಳಿಸಿದ್ದಾಳೆ.

 Uttar Pradesh Woman Accuses Love Jihad Charge Was Fake

ಮಹಿಳೆಯನ್ನು ಆಶ್ರಯ ಸಂಸ್ಥೆಯಿಂದ ಬಿಡುಗಡೆ ಮಾಡಿದ ಬಳಿಕ ಮೊರಾದಾಬಾದ್ ಜಿಲ್ಲೆಯ ಕಾಂತ್ ಪಟ್ಟಣದಲ್ಲಿನ ಗಂಡನ ಮನೆಗೆ ಆಕೆ ಮರಳಿದ್ದಳು. ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿದ್ದ ಆಕೆ, ತಾನು ಮೇಜರ್ ಆಗಿದ್ದು, 22 ವರ್ಷವಾಗಿದೆ. ಯಾವುದೇ ಒತ್ತಡಕ್ಕೆ ಒಳಗಾಗದೆ ಮೊಹಮ್ಮದ್ ರಶೀದ್‌ ಅವರನ್ನು ಮದುವೆಯಾಗಿದ್ದೆ ಎಂದು ತಿಳಿಸಿದ್ದಾಳೆ. ಪತಿ ರಶೀದ್ ಮತ್ತು ಅವರ ಅಣ್ಣ ಮೊಹಮ್ಮದ್ ಸಲೀಮ್ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾಳೆ.

ಜಹಾನ್ ಅವರು ಉತ್ತರ ಪ್ರದೇಶದ ಅಕ್ರಮ ಮತಾಂತರ ನಿರ್ಬಂಧ ಸುಗ್ರೀವಾಜ್ಞೆ 2020ರ ಅಡಿ ಮೊದಲ ಬಾರಿಗೆ ಬಂಧನಕ್ಕೆ ಒಳಗಾದ ಮಹಿಳೆಯಾಗಿದ್ದಾರೆ. ರಶೀದ್ ಅವರನ್ನು ಮದುವೆಯಾದ ಬಳಿಕ ಆಕೆ ಇಸ್ಲಾಂಗೆ ಮತಾಂತರವಾಗಿದ್ದಳು.

ವಿವಾಹ ನೋಂದಣಿಗೆ ಬಂದಿದ್ದ ಯುವಕನ ಬಂಧಿಸಿದ ಮೊರಾದಾಬಾದ್ ಪೊಲೀಸರುವಿವಾಹ ನೋಂದಣಿಗೆ ಬಂದಿದ್ದ ಯುವಕನ ಬಂಧಿಸಿದ ಮೊರಾದಾಬಾದ್ ಪೊಲೀಸರು

ಆಶ್ರಯ ಸಂಸ್ಥೆಯಲ್ಲಿ ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡರು. ಆರೋಗ್ಯ ತೀರಾ ಹದಗೆಟ್ಟ ಬಳಿಕವಷ್ಟೇ ಚಿಕಿತ್ಸೆ ನೀಡಿದರು. ಮೂರು ದಿನಗಳಿಂದ ಹೊಟ್ಟೆ ನೋವು ಎನ್ನುತ್ತಿದ್ದರೂ ನಿರ್ಲಕ್ಷಿಸಿದ್ದರು. ಆರೋಗ್ಯ ತೀರಾ ಕೆಟ್ಟ ಬಳಿಕ ಆಸ್ಪತ್ರೆಗೆ ಸೇರಿಸಿದರು. ತನಗೆ ಗರ್ಭಪಾತವಾಗುವಂತೆ ಮಾತ್ರೆಗಳು ಮತ್ತು ಚುಚ್ಚುಮದ್ದುಗಳನ್ನು ನೀಡಿದರು ಎಂದು ಆಕೆ ಆರೋಪಿಸಿದ್ದಾಳೆ. ಇದನ್ನು ಕಾಂತ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನಿರಾಕರಿಸಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಸುಳ್ಳು ಆರೋಪ ಎಂದಿದ್ದಾರೆ.

English summary
Uttar Pradesh woman who was detained under Love Jihad law alleged that the charges against her and her husband are fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X