ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಾಫಿಕ್ ಪೊಲೀಸರ ಕಣ್ಣು ಲುಂಗಿ ಮೇಲೆ: ಜಡಾಯಿಸಿದ್ರು ನೋಡಿ ಅದಕ್ಕೂ ಫೈನು!

|
Google Oneindia Kannada News

Recommended Video

ಸಮವಸ್ತ್ರ ಧರಿಸದೇ ಗಾಡಿ ಚಲಾಯಿಸಿದರೆ ದಂಡ | Oneindia Kannada

ಲಕ್ನೋ, ಸೆ 10: ಗಾಳಿಯಾಡುತ್ತಿರಲು ಅಲುಕೂಲವಾಗಲಿ ಎಂದು ನ್ಯಾಷನಲ್ ಪರ್ಮಿಟ್ ಲಾರಿ/ಟ್ರಕ್, ಡ್ರೈವರುಗಳು ಲುಂಗಿ ಉಟ್ಕೊಂಡೇ ಗಾಡಿ ಚಲಾಯಿಸುವುದು ಮಾಮೂಲಿ. ಆದರೆ, ಟ್ರಾಫಿಕ್ ಪೊಲೀಸರ ಕಣ್ಣು ಲುಂಗಿ ಮೇಲೂ ಬಿದ್ದಿದೆ.

ಮೋಟರ್ ವಾಹನ ಕಾಯ್ದೆಯ ಅನ್ವಯ, ಲುಂಗಿ ಮತ್ತು ಧೋತಿ ಧರಿಸಿ, ವಾಹನ ಚಲಾಯಿಸುವಂತಿಲ್ಲ. ಆ ಕಾರಣಕ್ಕಾಗಿ, ಉತ್ತರ ಪ್ರದೇಶದ ಟ್ರಾಫಿಕ್ ಪೊಲೀಸರು, ಟ್ರಕ್ ಡ್ರೈವರೊಬ್ಬರಿಗೆ ಎರಡು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

6 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು?6 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು?

ಬಡಪಾಯಿ ಈ ಡ್ರೈವರ್ ಬಳಿ, ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಜೊತೆಗೆ, ತನ್ನ ಡಿಎಲ್ ಕೂಡಾ ಇದ್ದವು. ಆದರೂ, ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ. ವಾಣಿಜ್ಯಕ್ಕೆ ಬಳಸುವ (ಪ್ರಮುಖವಾಗಿ ಯೆಲ್ಲೋ ಬೋರ್ಡ್) ವಾಹನಗಳ ಡ್ರೈವರುಗಳಿಗೆ 'ಡ್ರೆಸ್ ಕೋಡ್' ಎನ್ನುವುದಿರುತ್ತದೆ. ಅದನ್ನು ಪಾಲಿಸದೇ ಇದ್ದಿದ್ದಕ್ಕೆ, ಈ ದಂಡ, ಎಂದು ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದಾರೆ.

Uttar Pradesh Truck Driver Was In Lungi, Traffic Police Fined Him Rupees 2000

ಅಸಲಿಗೆ, ಲುಂಗಿ ಧರಿಸಿ ವಾಹನ ಚಲಾಯಿಸುವಂತಿಲ್ಲ ಎನ್ನುವ ಕಾನೂನು ಈಗ ಬಂದಿರುವುದಲ್ಲ. ಬಹಳ ಹಿಂದೆನೇ ಇದನ್ನು ಸಾರಿಗೆ ಇಲಾಖೆ ಜಾರಿಗೆ ತಂದಿತ್ತು. ಹೇಗೂ, ಹೊಸ ಟ್ರಾಫಿಕ್ ಫೈನ್ ಪದ್ದತಿಯ ಬಗ್ಗೆ, ಊರೆಲ್ಲಾ ಮಾತನಾಡುತ್ತಿರುವಾಗ, ಇದೂ ಇರಲಿ ಎಂದು ಪೊಲೀಸರು, ಹಳೆದನ್ನು ತಳ್ಳಿ ಬಿಟ್ಟಿದ್ದಾರೆ.

ಲಕ್ನೋ ಟ್ರಾಫಿಕ್ ಎಸ್ಪಿಪಿ ಪ್ರಕಾರ, " ಮೋಟರ್ ವೆಹಿಕಲ್ ಆಕ್ಟ್ 1939, ತಿದ್ದುಪಡಿ 1989 ಪ್ರಕಾರ, ಯುನಿಫಾರ್ಮ್ ಇಲ್ಲದೇ ಗಾಡಿ ಚಲಾಯಿಸಿದರೆ, ಐನೂರು ರೂಪಾಯಿ ದಂಡ ವಿಧಿಸಬಹುದು ಎನ್ನುವ ನಿಯಮವಿತ್ತು. ಸೆಕ್ಷನ್ 179, 2019ರ ಅನ್ವಯ ಇದು ಎರಡು ಸಾವಿರ ರೂಪಾಯಿಗೆ ಏರಿಕೆಯಾಗಿದೆ" ಎಂದು ಹೇಳಿದ್ದಾರೆ.

ಟ್ರಾಫಿಕ್ ಇಲಾಖೆಯ ಸ್ಪಷ್ಟ ಆದೇಶ: ಈ ದಾಖಲೆ ಒರಿಜಿನಲ್ ಇಲ್ಲಾಂದ್ರೆ ಭಾರೀ ಫೈನ್ಟ್ರಾಫಿಕ್ ಇಲಾಖೆಯ ಸ್ಪಷ್ಟ ಆದೇಶ: ಈ ದಾಖಲೆ ಒರಿಜಿನಲ್ ಇಲ್ಲಾಂದ್ರೆ ಭಾರೀ ಫೈನ್

"ಟ್ರಕ್, ಲಾರಿ, ಶಾಲಾ ಬಸ್, ಎಲ್ಲಾ ಕಮರ್ಷಿಯಲ್ ವಾಹನ, ಸಾರಿಗೆ ಸಂಸ್ಥೆಯ ಬಸ್ ಗಳ ಚಾಲಕರು ಮತ್ತು ನಿರ್ವಾಹಕರು, ಫುಲ್ ಪ್ಯಾಂಟ್, ಶರ್ಟ್ ಮತ್ತು ಶೂ ಧರಿಸುವುದು ಕಡ್ಡಾಯ" ಎಂದು ಲಕ್ನೋ ಟ್ರಾಫಿಕ್ ಎಸ್ಪಿಪಿ ಸ್ಪಷ್ಟನೆಯನ್ನು ನೀಡಿದ್ದಾರೆ.

English summary
Uttar Pradesh: A Truck Driver Was In Lungi, Traffic Police Fined Him Rupees 2000. As Per Traffic Police, This Is Against MV Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X