ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ: ಶಂಕಿತ ಉಗ್ರ ಹುಮೈದೂರ್ ರೆಹಮಾನ್ ಶರಣಾಗತಿ

|
Google Oneindia Kannada News

ಲಕ್ನೋ, ಸೆಪ್ಟೆಂಬರ್ 18: ಶಂಕಿತ ಉಗ್ರ ಹುಮೈದುರ್ ರೆಹಮಾನ್ ಪ್ರಯಾಗ್‌ರಾಜ್ ಪೊಲೀಸರಿಗೆ ಶರಣಾಗಿದ್ದಾನೆ. ಶಂಕಿತ ಉಗ್ರ ರೆಹಮಾನ್ ಇತ್ತೀಚೆಗೆ ಉಗ್ರ ದಾಳಿಗೆ ಸಂಚು ರೂಪಿಸಿದ್ದ, ಉತ್ತರ ಪ್ರದೇಶ, ದೆಹಲಿ ಪೊಲೀಸರು ಆತನನ್ನು ಹುಡುಕುತ್ತಿದ್ದರು.

ಪೊಲೀಸ್ ಮೂಲಗಳ ಪ್ರಕಾರ ರೆಹಮಾನ್ ಒಸಾಮಾನ ಚಿಕ್ಕಪ್ಪ ಆಗಿದ್ದಾನೆ,ಆತನ್ನು ದೆಹಲಿಯ ಜಾಮಿಯಾ ಪ್ರದೇಶದಲ್ಲಿ ಬಂಧಿಸಲಾಗಿತ್ತು.

ದೆಹಲಿ: ದಾಳಿಗೆ ಸಂಚು ಹೂಡಿದ್ದ 6 ಮಂದಿ ಶಂಕಿತ ಉಗ್ರರ ಬಂಧನದೆಹಲಿ: ದಾಳಿಗೆ ಸಂಚು ಹೂಡಿದ್ದ 6 ಮಂದಿ ಶಂಕಿತ ಉಗ್ರರ ಬಂಧನ

ತನಿಖೆ ಸಮಯದಲ್ಲಿ ಒಸಾಮಾ ಹಾಗೂ ಜೀಶಾನ್ ತನಿಖಾಧಿಕಾರಿಗಳಿಗೆ ರಾಸಾಯನಿಕ ಸ್ಫೋಟಕಗಳನ್ನು ತೆಗೆದುಕೊಂಡು ಹೋಗುವುದು ಹೇಗೆ?, ಅಲ್ಪಾವಧಿಯಲ್ಲಿ ಐಇಡಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ಹೇಳಿದ್ದಾರೆ.

Uttar Pradesh: Terror Suspect Humaidur Rehman Surrenders Police Station In Prayagraj

ಪಾಕಿಸ್ತಾನದಲ್ಲಿ ತರಬೇತಿ ಪಡೆದ ಇಬ್ಬರು ವ್ಯಕ್ತಿಗಳು ಸೇರಿದಂತೆ ಆರು ಶಂಕಿತ ಉಗ್ರರನ್ನು ದೆಹಲಿ ಪೊಲೀಸರು ಇತ್ತೀಚೆಗಷ್ಟೇ ಬಂಧಿಸಿದ್ದರು.

ದೆಹಲಿ ಪೊಲೀಸರ ವಿಶೇಷ ಘಟಕವು ಸ್ಫೋಟಕಗಳು ಮತ್ತು ಬಂದೂಕುಗಳನ್ನು ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡಿದೆ ಎಂದು ಡಿಸಿಪಿ ವಿಶೇಷ ಘಟಕ ಪ್ರಮೋದ್ ಕುಶ್ವಾಹ ಹೇಳಿದರು. ಉತ್ತರ ಪ್ರದೇಶ, ಮಹಾರಾಷ್ಟ್ರ, ಪ್ರಯಾಗರಾಜ್ ಮತ್ತು ದೆಹಲಿಯಲ್ಲಿ ನಡೆದ ದಾಳಿಗಳ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರು ಮಂದಿಯ ಪೈಕಿ ಒಸಾಮಾ ಮತ್ತು ಜೀಶನ್ ಪಾಕಿಸ್ತಾನದಲ್ಲಿ ತರಬೇತಿ ಪಡೆದವರಾಗಿದ್ದಾರೆ. ಈ ವ್ಯಕ್ತಿಗಳಿಗೆ ಭೂಗತ ಜಗತ್ತಿನ ಸಂಪರ್ಕವಿದೆ ಎಂದು ಪೊಲೀಸರು ಹೇಳಿರುವುದಾಗಿ ವರದಿ ಮಾಡಿದೆ.

ಬಂಧಿತರು ತಮ್ಮ ಗುಂಪಿನಲ್ಲಿ 14-15 ಬಾಂಗ್ಲಾ ಮಾತನಾಡುವ ವ್ಯಕ್ತಿಗಳನ್ನು ಇದೇ ತರಹದ ತರಬೇತಿಗಾಗಿ ತೆಗೆದುಕೊಳ್ಳಬಹುದೆಂದು ಹೇಳಿದ್ದಾರೆ. ಈ ಕಾರ್ಯಾಚರಣೆಯು ಗಡಿಯುದ್ದಕ್ಕೂ ನಿಕಟವಾಗಿ ಸಂಯೋಜಿಸಲ್ಪಟ್ಟಂತೆ ತೋರುತ್ತಿದೆ ಎಂದು ದೆಹಲಿ ಪೊಲೀಸ್ ವಿಶೇಷ ಘಟಕದ ವಿಶೇಷ ಸಿಪಿ ನೀರಜ್ ಠಾಕೂರ್ ಹೇಳಿದ್ದಾರೆ.

ಅವರು 2 ತಂಡಗಳನ್ನು ರಚಿಸಿದರು. ಒಂದನ್ನು ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಅವರು ಸಂಘಟಿಸಿದರು. ಗಡಿಯಾಚೆಗಿನ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪಡೆಯಲು ಮತ್ತು ಅವುಗಳನ್ನು ಇಲ್ಲಿ ಅಡಗಿಸಲು ಇರಿಸಲಾಗಿತ್ತು. ಇತರ ತಂಡವು ಹವಾಲಾ ಮೂಲಕ ಧನಸಹಾಯ ವ್ಯವಸ್ಥೆ ಮಾಡುವುದಕ್ಕೆ ನಿಯೋಜಿಸಲಾಗಿತ್ತು ಎಂದು ಠಾಕೂರ್ ಹೇಳಿದ್ದಾರೆ.

ಪೊಲೀಸರ ಪ್ರಕಾರ ಉಗ್ರರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಏನಾದರೂ ದೊಡ್ಡ ಯೋಜನೆ ರೂಪಿಸಿ ದೇಶದಾದ್ಯಂತ ಉದ್ದೇಶಿತ ಕೊಲೆಗಳು ಮತ್ತು ಸ್ಫೋಟಗಳನ್ನು ನಡೆಸಲು ಸಂಚು ಹೂಡಿದ್ದರು.

ಕೋಟಾದಿಂದ ಸಮೀರ್, ದೆಹಲಿಯಿಂದ ಇಬ್ಬರು ವ್ಯಕ್ತಿಗಳು ಮತ್ತು ಉತ್ತರ ಪ್ರದೇಶದಿಂದ ಮೂವರನ್ನು ಬಂಧಿಸಲಾಗಿದೆ. 6 ಜನರಲ್ಲಿ ಇಬ್ಬರನ್ನು ಮಸ್ಕತ್ ಮೂಲಕ ಪಾಕಿಸ್ತಾನಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಸ್ಫೋಟಕಗಳು ಮತ್ತು ಬಂದೂಕುಗಳಲ್ಲಿ 15 ದಿನಗಳ ಕಾಲ ತರಬೇತಿ ನೀಡಲಾಯಿತು ಎಂದು ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಹೇಳಿದ್ದಾರೆ.

English summary
Terror suspect Humaidur Rehman, wanted by the Uttar Pradesh UP Anti-Terrorism Squad (ATS), has surrendered at the Kareli police station in Prayagraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X