ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರ್ಥಡೇ ಪಾರ್ಟಿ ಮುಗಿಸಿ ಬರುತ್ತಿದ್ದವನ ಮೇಲೆ 'ಲವ್ ಜಿಹಾದ್' ಕೇಸ್

|
Google Oneindia Kannada News

ಬಿಜನೂರ್, ಡಿಸೆಂಬರ್ 25: ಉತ್ತರ ಪ್ರದೇಶದ ಬಿಜ್ನೂರ್ ಎಂಬಲ್ಲಿ ಸ್ನೇಹಿತ ಹುಟ್ಟುಹಬ್ಬದ ಪಾರ್ಟಿ ಆಚರಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ತರುಣನನ್ನು ಎಳೆದುಕೊಂಡು ಹೋಗಿ ಕಿರುಕುಳ ನೀಡಿದ ಪೊಲೀಸರು, ವಿವಾದಾತ್ಮಕ ಮತಾಂತರ ತಡೆ ಕಾಯ್ದೆಯಡಿ 'ಲವ್ ಜಿಹಾದ್' ಪ್ರಕರಣ ದಾಖಲಿಸಿದ್ದಾರೆ.

16 ವರ್ಷದ ಹಿಂದೂ ಬಾಲಕಿಯನ್ನು ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನಿಸಿದ ಆರೋಪದಲ್ಲಿ ಮುಸ್ಲಿಂ ತರುಣನನ್ನು ಒಂದು ವಾರದಿಂದ ಜೈಲಿನಲ್ಲಿ ಇರಿಸಲಾಗಿದೆ. ಆದರೆ ಮತಾಂತರ ಪ್ರಯತ್ನ ಆರೋಪವನ್ನು ಬಾಲಕಿ ಮತ್ತು ಆಕೆಯ ತಾಯಿ ಇಬ್ಬರೂ ತಳ್ಳಿಹಾಕಿದ್ದಾರೆ.

ಉತ್ತರ ಪ್ರದೇಶದ ಮೊದಲ 'ಲವ್ ಜಿಹಾದ್' ಪ್ರಕರಣಕ್ಕೆ ತಿರುವುಉತ್ತರ ಪ್ರದೇಶದ ಮೊದಲ 'ಲವ್ ಜಿಹಾದ್' ಪ್ರಕರಣಕ್ಕೆ ತಿರುವು

ತಾನು ಹಿಂದೂ ಎಂಬ ಸುಳ್ಳು ಪರಿಚಯ ಮಾಡಿಕೊಂಡು ಬಾಲಕಿಯನ್ನು ಒಲಿಸಿಕೊಂಡು ಆಕೆಯನ್ನು ಬಲವಂತವಾಗಿ ಮತಾಂತರಕ್ಕೆ ಪ್ರಯತ್ನ ಮಾಡುತ್ತಿದ್ದಾನೆ ಎಂದು ಬಾಲಕಿಯ ತಂದೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಡಿ. 15ರಂದು ತರುಣನನ್ನು ಬಂಧಿಸಲಾಗಿದೆ.

Uttar Pradesh Teen Returning From Birthday Party Jailed Under Love Jihad Law

ಆಕೆ ಹುಟ್ಟುಹಬ್ಬದ ಕಾರ್ಯಕ್ರಮ ಆಚರಿಸಿ ರಾತ್ರಿ 11.30ರ ಸುಮಾರಿಗೆ ಮನೆಗೆ ಮರಳುತ್ತಿದ್ದಳು. ಆಕೆಯನ್ನು ಮನೆಗೆ ಬಿಡಲು ಹುಡುಗ ಕೂಡ ಬರುತ್ತಿದ್ದ. ಆದರೆ ಗ್ರಾಮಸ್ಥರು ಕಳ್ಳರು ಎಂದು ಅವರನ್ನು ಹಿಡಿದು ಚೆನ್ನಾಗಿ ಹೊಡೆದರು. ಬರ್ಥಡೇ ಪಾರ್ಟಿ ಮುಗಿಸಿ ಬರುತ್ತಿದ್ದೇವೆ ಎಂದು ಆಕೆ ಹೇಳಿದರೂ ಅವರು ಅದನ್ನು ಕೇಳಿಸಿಕೊಳ್ಳಲಿಲ್ಲ ಎಂದು ಬಾಲಕಿಯ ತಾಯಿ ಹೇಳಿದ್ದಾರೆ.

ಆ ಬಾಲಕ ಯಾರೆಂದು ನನಗೆ ಗೊತ್ತಿಲ್ಲ. ಆದರೆ ಅಂದು ಸುರಕ್ಷಿತವಾಗಿ ಮನೆಗೆ ತಲುಪಿಸಲು ಜತೆಗೆ ಬಂದಿದ್ದ. ನನ್ನನ್ನು ಮತಾಂತರ ಮಾಡಲು ಆತ ಪ್ರಯತ್ನಿಸಿಯೇ ಇಲ್ಲ ಎಂದು ಬಾಲಕಿ ಹೇಳಿದ್ದಾಳೆ. ಮಗಳನ್ನು ಅಪಹರಿಸಿ ಮತಾಂತರಕ್ಕೆ ಪ್ರಯತ್ನಿಸಲಾಗಿದೆ ಎಂದು ಆಕೆಯ ತಂದೆ ದೂರು ನೀಡಿದ್ದಾರೆ.

ಲವ್ ಜಿಹಾದ್ ವದಂತಿ: ಮುಸ್ಲಿಂ ದಂಪತಿಯನ್ನು ಲಾಕ್‌ಅಪ್‌ನಲ್ಲಿಟ್ಟ ಪೊಲೀಸರುಲವ್ ಜಿಹಾದ್ ವದಂತಿ: ಮುಸ್ಲಿಂ ದಂಪತಿಯನ್ನು ಲಾಕ್‌ಅಪ್‌ನಲ್ಲಿಟ್ಟ ಪೊಲೀಸರು

ಆದರೆ ಬಾಲಕಿ ಕೆಲವು ದಿನಗಳಿಂದ ನಾಪತ್ತೆಯಾಗಿದ್ದು, ತರುಣ ಆಕೆಯನ್ನು ಅಪಹರಿಸಿದ್ದ. ಆಕೆ ಆತನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಆಕೆ ಸಿಕ್ಕಿರುವುದಿಂದ ಪ್ರಕರಣ ದಾಖಲಾಗಿದೆ. ಆತ ತನ್ನ ಹೆಸರು ಸೋನು ಎಂದು ಹೇಳಿಕೊಂಡಿದ್ದ. ಮತಾಂತರ ಮಾಡುವ ಉದ್ದೇಶದಿಂದ ಆಕೆಯ ಜತೆಗೆ ಓಡಿ ಹೋಗಿದ್ದ. ಆಕೆ ಹೇಗೋ ತಪ್ಪಿಸಿಕೊಂಡಿದ್ದಾಳೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

English summary
A teen from Uttar Pradesh who was returning from birthday party with a Hindu girl has been jailed under Love Jihad for conversion allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X