ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ ನಡೆಯಬೇಕಾಗಿದ್ದೇ ಎಂದ ಸಮಾಜವಾದಿ ಪಕ್ಷ ನಾಯಕ!

|
Google Oneindia Kannada News

ಲಕ್ನೋ, ಫೆಬ್ರವರಿ 16: ಪುಲ್ವಾಮಾದಲ್ಲಿ ಭಯೋತ್ಪಾದನಾ ದಾಳಿಯಿಂದ ಸೈನಿಕರು ಬಲಿಯಾಗಿದ್ದರೆ, ದೇಶದ ಅನೇಕ ರಾಜಕಾರಣಿಗಳು ಈ ದುಃಖದ ಸನ್ನಿವೇಶದಲ್ಲಿಯೂ ರಾಜಕೀಯ ಹುಡುಕುತ್ತಿದ್ದಾರೆ.

ಪುಲ್ವಾಮಾ ದಾಳಿಗೆ ಪಾಕಿಸ್ತಾನವನ್ನು ದೂಷಿಸುವುದು ತಪ್ಪು ಎಂದು ಹೇಳುವ ಮೂಲಕ ನವಜೋತ್ ಸಿಂಗ್ ಸಿಧು ಜನರ ಭಾವನೆಗಳನ್ನು ಕೆರಳಿಸಿದ್ದರು.

ಪಠಾಣ್ ಕೋಟ್ - ಪಲ್ವಾಮಾ ದಾಳಿ ತನಕ JeM, ಮಸೂದ್ ದುಷ್ಟರ ಸುತ್ತಾ ಪಠಾಣ್ ಕೋಟ್ - ಪಲ್ವಾಮಾ ದಾಳಿ ತನಕ JeM, ಮಸೂದ್ ದುಷ್ಟರ ಸುತ್ತಾ

ಅಸೂಕ್ಷ್ಮದ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿ ಮಾಡುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಕೂಡ ಪುಲ್ವಾಮಾ ಘಟನೆಯಲ್ಲಿ ರಾಜಕೀಯ ಲಾಭ ಮಾಡುವ ಪ್ರಯತ್ನ ನಡೆಸಿದ್ದಾರೆ.

ಪುಲ್ವಾಮಾ ಘಟನೆ ನಡೆಯಬೇಕಾಗಿದ್ದೇ ಎಂದು ಅಜಂ ಖಾನ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

uttar pradesh sp leader azam khan said pulwama terror incident bound to happen

ನಮ್ಮ ಗುಪ್ತಚರ ಸೇವೆಗಳು ಸೇರಿದಂತೆ ಎಲ್ಲ ಸಂಸ್ಥೆಗಳನ್ನೂ ರಾಜಕೀಯ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಕೆಲವು ಸಂಸ್ಥೆಗಳು ಮಮತಾ ಬ್ಯಾನರ್ಜಿ, ರಾಬ್ರಟ್ ವಾದ್ರಾ ಸಾಬ್, ಅಖಿಲೇಶ್ ಜಿ ಅವರ ವಿರುದ್ಧದ ತನಿಖೆಯಲ್ಲಿ ಬ್ಯುಸಿಯಾಗಿವೆ.

ಪುಲ್ವಾಮಾ ದಾಳಿ LIVE : ಮಧ್ಯಾಹ್ನ 12.30ಕ್ಕೆ ಎಚ್‌ಎಎಲ್‌ಗೆ ತಲುಪಲಿದೆ ಗುರು ಪಾರ್ಥಿವ ಶರೀರಪುಲ್ವಾಮಾ ದಾಳಿ LIVE : ಮಧ್ಯಾಹ್ನ 12.30ಕ್ಕೆ ಎಚ್‌ಎಎಲ್‌ಗೆ ತಲುಪಲಿದೆ ಗುರು ಪಾರ್ಥಿವ ಶರೀರ

ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಜೀವನ ಪರ್ಯಂತ ನೀಡಿದ ಕೊಡುಗೆಗಳನ್ನು ಮರೆಸುವಂತೆ ಒತ್ತಾಯಪೂರ್ವಕವಾಗಿ ಹೇಳಿಕೆ ನೀಡುವ ರೀತಿ ಆಗಿದ್ದನ್ನು ನೀವೇ ನೋಡಿದ್ದೀರಿ.

ಈ ಸಂಸ್ಥೆಗಳನ್ನು ತಮ್ಮ ಕೆಲಸವನ್ನು ಕಿತ್ತುಕೊಂಡು ರಾಜಕೀಯ ಕೆಲಸಗಳಿಗೆ ಹಚ್ಚಿದರೆ ಕೆಟ್ಟ ಘಟನೆಗಳು ನಡೆಯುತ್ತವೆ ಎಂದು ಅಜಂ ಖಾನ್ ಹೇಳಿದ್ದಾರೆ.

ಇನ್ನೊಬ್ಬ ಮಗನನ್ನೂ ಸೈನ್ಯಕ್ಕೆ ಕಳುಹಿಸುವೆ, ಆದರೆ ಪಾಕಿಸ್ತಾನವನ್ನು ಬಿಡಬೇಡಿ ಇನ್ನೊಬ್ಬ ಮಗನನ್ನೂ ಸೈನ್ಯಕ್ಕೆ ಕಳುಹಿಸುವೆ, ಆದರೆ ಪಾಕಿಸ್ತಾನವನ್ನು ಬಿಡಬೇಡಿ

ಯಾರೋ ಮಾಡಿದ ಕೃತ್ಯಕ್ಕೆ ಇಡೀ ದೇಶವನ್ನು (ಪಾಕಿಸ್ತಾನ) ದೂಷಿಸುವುದು ತಪ್ಪು. ಇದಕ್ಕೆ ಸಂಬಂಧಪಟ್ಟ ಸಂಘಟನೆಯನ್ನೋ ಅಥವಾ ವ್ಯಕ್ತಿಯನ್ನು ದೂಷಿಸಬೇಕು ಎಂದು, ಉಗ್ರರ ಕೃತ್ಯದಲ್ಲಿ ಪಾಕ್ ಕೈವಾಡವಿಲ್ಲ ಎಂದು ಪರೋಕ್ಷವಾಗಿ ಸಿದ್ದು ಹೇಳಿಕೆ ನೀಡಿದ್ದರು.

English summary
Uttar Pradesh SP leader Azam Khan in a shocking statement, 'Pulwama terror incident was bound to happen as all our agencies including secrete services are being made to do political works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X