ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅತ್ಯಾಚಾರ ರಾಜಧಾನಿ' ಉನ್ನಾವೋ: ಗಾಬರಿಗೊಳಿಸುವ ಅಂಕಿ-ಅಂಶ

|
Google Oneindia Kannada News

ಲಖನೌ, ಡಿಸೆಂಬರ್ 07: ಪ್ರಗತಿಪರ ಹಿಂದಿ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರ ಹುಟ್ಟೂರಾದ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯನ್ನು ಪೆನ್ನು ಮತ್ತು ಯುದ್ಧದ ಭೂಮಿ ಎಂದು ಕರೆಯಲಾಗುತ್ತಿತ್ತು. ಆದರೆ ತನ್ನ ಶ್ರೀಮಂತ ಇತಿಹಾಸವನ್ನು ಕೆಲವು ವರ್ಷಗಳಿಂದ ಉನ್ನಾವೋ ಕಳೆದುಕೊಂಡಿದೆ. ಅದೀಗ 'ಅತ್ಯಾಚಾರ ರಾಜಧಾನಿ'.

ಉನ್ನಾವೋ ಅತ್ಯಾಚಾರ ಪ್ರಕರಣಗಳು, ಪ್ರಕರಣಗಳ ಭೀಕರತೆ ಪದೇ-ಪದೇ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುತ್ತಲೇ ಇವೆ. ಇತ್ತೀಚೆಗಷ್ಟೆ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅತ್ಯಾಚಾರ ಆರೋಪಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ನಡೆದಿದೆ. 40 ಗಂಟೆ ಜೀವನ್ಮರಣದ ಜೊತೆಗೆ ಹೋರಾಡಿದ ಆಕೆ ಮೃತಪಟ್ಟಿದ್ದಾಳೆ.

ಬಿಜೆಪಿ ಶಾಸಕನೇ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ ವಿಕೃತಿ ಮೆರೆದಿದ್ದ. ನಂತರ ಆಕೆ ಸಂಚರಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಆಕೆಯನ್ನು ಕೊಲ್ಲುವ ಪ್ರಯತ್ನವೂ ಮಾಡಲಾಗಿತ್ತು. ಘಟನೆಯಲ್ಲಿ ಇಬ್ಬರು ಅಸುನೀಗಿದ್ದರು.

ಬೆಂಕಿಯಲ್ಲಿ ಬೆಂದ ಉನ್ನಾವೊ ರೇಪ್ ಸಂತ್ರಸ್ತೆ ದುರ್ಮರಣಬೆಂಕಿಯಲ್ಲಿ ಬೆಂದ ಉನ್ನಾವೊ ರೇಪ್ ಸಂತ್ರಸ್ತೆ ದುರ್ಮರಣ

ಕಾನೂನು ಸುವ್ಯವಸ್ಥೆ ಎಂಬುದು ಹಾಳೆದ್ದು ಹೋಗಿರುವ ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು, ದಲಿತ ದೌರ್ಜನ್ಯ ಸಾಮಾನ್ಯ ಸಂಗತಿಯಂತಾಗಿದೆ. ಅದರಲ್ಲಿಯೂ ಉನ್ನಾವೋ ಉತ್ತರ ಪ್ರದೇಶದ 'ಅತ್ಯಾಚಾರ ರಾಜಧಾನಿ' ಎಂದೇ ಗುರುತಿಸಲ್ಪಡುತ್ತಿದೆ. ಇದಕ್ಕೆ ಅಂಕಿ-ಅಂಶಗಳು ಸಾಕ್ಷ್ಯಗಳಾಗಿವೆ.

11 ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿರುವ ಅತ್ಯಾಚಾರಗಳೆಷ್ಟು?

11 ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿರುವ ಅತ್ಯಾಚಾರಗಳೆಷ್ಟು?

ಕೇವಲ 11 ತಿಂಗಳಲ್ಲಿ 86 ಅತ್ಯಾಚಾರ ಪ್ರಕರಣಗಳು ಉನ್ನಾವೋ ನಲ್ಲಿ ದಾಖಲಾಗಿವೆ. 185 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಮರ್ಯಾದೆಗೆ ಅಂಜಿ ಅಥವಾ ಅತ್ಯಾಚಾರಿಗಳ ಬೆದರಿಕೆಯಿಂದ ದೂರು ದಾಖಲಾಗದ ಪ್ರಕರಣಗಳೂ ಸಾಕಷ್ಟು ಇವೆ.

ರಾಜ್ಯ ರಾಜಧಾನಿಗೆ ಹತ್ತಿರವೇ ಇರುವ ಉನ್ನಾವೋ

ರಾಜ್ಯ ರಾಜಧಾನಿಗೆ ಹತ್ತಿರವೇ ಇರುವ ಉನ್ನಾವೋ

31 ಲಕ್ಷ ಜನಸಂಖ್ಯೆ ಇರುವ ಉನ್ನಾವೊ ಉತ್ತರ ಪ್ರದೇಶ ರಾಜ್ಯದ ರಾಜಧಾನಿ ಆಡಳಿತ ಕೇಂದ್ರ ಲಖನೌ ನಿಂದ ಕೇವಲ 63 ಕಿ.ಮೀ ದೂರದಲ್ಲಿದೆ. ರಾಜ್ಯದ ಮತ್ತೊಂದು ಪ್ರಮುಖ ಮತ್ತು ದೊಡ್ಡ ನಗರ ಕಾನ್ಪುರದಿಂದ 23 ಕಿ.ಮೀ ಅಂತರವಷ್ಟೆ. ರಾಮಜನ್ಮಭೂಮಿ ಅಯೋಧ್ಯೆಯಿಂದ 200 ಕಿ.ಮೀ ದೂರದಲ್ಲಿದೆ.

ಸೀತೆ ಸುಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ 'ಏನ್' ಕೌಂಟರ್?ಸೀತೆ ಸುಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ 'ಏನ್' ಕೌಂಟರ್?

ಸ್ವತಂತ್ರ್ಯ ಹೋರಾಟಗಾರರ, ಸಾಹಿತಿಗಳ ನೆಲ ಆಗಿತ್ತು ಉನ್ನಾವೋ

ಸ್ವತಂತ್ರ್ಯ ಹೋರಾಟಗಾರರ, ಸಾಹಿತಿಗಳ ನೆಲ ಆಗಿತ್ತು ಉನ್ನಾವೋ

ಉನ್ನಾವೋ ಸ್ವತಂತ್ರ್ಯ ಹೋರಾಟಗಾರರ, ಪ್ರಗತಿಪರ ಹಿಂದಿ ಸಾಹಿತಿಗಳ ತವರು. ಉನ್ನಾವೋ ಜಿಲ್ಲೆ ಹಿಂದಿ ಸಾಹಿತ್ಯಕ್ಕೆ ನೀಡಿದ ಕೊಡುಗೆ ವಿಶೇಷವಾಗಿ ಪ್ರಗತಿಪರ ಸಾಹಿತ್ಯ ಮೌಲಿಕವಾದುದು. ಆದರೆ ಅಂತಹಾ ನಗರವೇ ಇಂದು ಅತ್ಯಾಚಾರಕ್ಕೆ ಹೆಸರುವಾಸಿಯಾಗಿಬಿಟ್ಟಿದೆ.

ರಾಜಕಾರಣಿಗಳ ಕೈಗೊಂಬೆ ಆಗಿರುವ ಪೊಲೀಸರು

ರಾಜಕಾರಣಿಗಳ ಕೈಗೊಂಬೆ ಆಗಿರುವ ಪೊಲೀಸರು

ಅತ್ಯಾಚಾರ ಪ್ರಕರಣಗಳ ವಿಚಾರಣೆಯಲ್ಲಿ ಸಹ ಸ್ಥಳೀಯ ಪೊಲೀಸರು ಹಿಂದೆ ಉಳಿದಿದ್ದಾರೆ. ಅತ್ಯಾಚಾರ ಪ್ರಕರಣಗಳಲ್ಲಿ ಬಂಧನಗಳಾಗತ್ತವೆಯಾದರೂ ನಂತರ ಅತ್ಯಾಚಾರಿಗಳಿಗೆ ಬೇಲ್ ದೊರೆತು ಅವರು ಪರಾರಿಯಾಗುತ್ತಾರೆ. ನಂತರ ವಿಚಾರಣೆಗೆ ಹಾಜರಾಗುವುದೇ ಇಲ್ಲ, ಅವರು ಪೊಲೀಸರಿಗೂ ಸಿಗುವುದಿಲ್ಲ, ಹೀಗೆಯೇ ಹಲವು ಪ್ರಕರಣಗಳಲ್ಲಿ ಆಗಿವೆ. ಎಷ್ಟೋ ಪ್ರಕರಣಗಳಲ್ಲಿ ಅತ್ಯಾಚಾರ ಆರೋಪಿಯ ಜಾಮೀನು ಅರ್ಜಿಗೆ ವಿರೋಧ ಅರ್ಜಿಯನ್ನೂ ಪೊಲೀಸರು ದಾಖಲಿಸಿಲ್ಲ.

ರಾಜಕೀಯ ಮುಖಂಡರ ಮರ್ಜಿಯಲ್ಲಿರುವ ಪೊಲೀಸರು

ರಾಜಕೀಯ ಮುಖಂಡರ ಮರ್ಜಿಯಲ್ಲಿರುವ ಪೊಲೀಸರು

ಪೊಲೀಸರು ಸ್ಥಳೀಯ ರಾಜಕೀಯ ಮುಖಂಡರ ಮರ್ಜಿಯಲ್ಲಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯರು. ಅದರಲ್ಲಿಯೂ ಮೇಲ್ಜಾತಿಯ ರಾಜಕೀಯ ಮುಖಂಡರು ಬಹುತೇಕ ಪೊಲೀಸ್‌ ವ್ಯವಸ್ಥೆಯನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಅತ್ಯಾಚಾರ ಪ್ರಕರಣಗಳ 'ನ್ಯಾಯ ನಿರ್ಣಯ'ವನ್ನು ಈ ಮುಖಂಡರುಗಳೇ ಮಾಡಿಬಿಡುತ್ತಾರೆ.

ಎನ್‌ಕೌಂಟರ್ ಹೇಗೆ ಮತ್ತು ಯಾವಾಗ ನಡೆಯುತ್ತದೆ? ನಿಯಮಗಳು ಏನು?ಎನ್‌ಕೌಂಟರ್ ಹೇಗೆ ಮತ್ತು ಯಾವಾಗ ನಡೆಯುತ್ತದೆ? ನಿಯಮಗಳು ಏನು?

ಹಿಂದುಳಿದ ಜಿಲ್ಲೆಗಳಲ್ಲಿ ಒಂದು ಉನ್ನಾವೋ

ಹಿಂದುಳಿದ ಜಿಲ್ಲೆಗಳಲ್ಲಿ ಒಂದು ಉನ್ನಾವೋ

ಉನ್ನಾವೋ ಉತ್ತರ ಪ್ರದೇಶದ ಹಿಂದುಳಿದ ಜಿಲ್ಲೆಗಳಲ್ಲಿ ಒಂದು, ದೇಶದ 500 ಕ್ಕೂ ಹೆಚ್ಚು ಹಿಂದುಳಿದ ಜಿಲ್ಲೆಗಳಲ್ಲಿ ಉನ್ನಾವೋ 250 ರ ಸಮೀಪದ ಹಿಂದುಳಿದ ಜಿಲ್ಲೆ. ಕಾನೂನು ಸುವ್ಯವಸ್ಥೆ ಬಗ್ಗೆ ಅರಿವು ಇಲ್ಲದಿರುವುದು ಸಹ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಒಂದು ಕಾರಣ.

English summary
Uttar Pradesh state's Unnao is now rape capital of the state, on the way to become India's rape capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X