• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸ್ ಠಾಣೆಯಲ್ಲಿ ಸ್ಯಾನಿಟೈಸರ್ ಬದಲು ಗಂಗಾಜಲ ಬಳಕೆ!

|

ಲಕ್ನೋ, ಮಾರ್ಚ್ 30: ಕೋವಿಡ್-19 ನಿಯಂತ್ರಣಕ್ಕೆ ಬಹುತೇಕ ಕಟ್ಟಡಗಳು, ಮನೆಗಳು, ಅಂಗಡಿಗಳು ಮುಂತಾದ ಕಡೆ ಸ್ಯಾನಿಟೈಸರ್ ಇರಿಸುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದ ಮೀರತ್‌ನಲ್ಲಿರುವ ನೌಚಂಡಿ ಪೊಲೀಸ್ ಠಾಣೆಯಲ್ಲಿ ಸ್ಯಾನಿಟೈಸರ್ ಬದಲಿಗೆ ನಿಮಗೆ ಕಾಣಿಸುವುದು ಗಂಗಾಜಲ!

ಹೌದು. ಈ ಪೊಲೀಸ್ ಠಾಣೆಯ ಒಳಗೆ ಬರುವವರ ಕೈಗೆ ಗಂಗಾಜಲ ಚಿಮುಕಿಸಲಾಗುತ್ತದೆ. ಜತೆಗೆ ಚಂದನದ ತಿಲಕವನ್ನು ನೀಡಲಾಗುತ್ತದೆ. ನೌಚಂಡಿ ಪೊಲೀಸ್ ಠಾಣೆಯ ಅಧಿಕಾರಿ ಪ್ರೇಮ್ ಚಂದ್ ಶರ್ಮಾ ಅವರು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಸಾಂಕ್ರಾಮಿಕ ಮತ್ತು ಅಪರಾಧ ತಡೆಗೆ ಈ ಕ್ರಮ ತೆಗೆದುಕೊಂಡಿದ್ದಾರಂತೆ.

ಪೊಲೀಸರ ಪ್ರಕಾರ, ಗಂಗಾಜಲವು ಪ್ರಾಚೀನ ಭಾರತದ ಸ್ಯಾನಿಟೈಸರ್. ಇದು ನಮ್ಮ ಪಾಪಗಳನ್ನು ನಾಶಪಡಿಸುವಂತೆ ವೈರಸ್‌ಗಳನ್ನು ಸಾಯಿಸುತ್ತದೆ. ಹಾಗೆಯೇ ಇಲ್ಲಿಗೆ ಭೇಟಿ ನೀಡುವವರ ಹಣೆಗೆ ಚಂದನದ ತಿಲಕ ಇರಿಸಲಾಗುತ್ತದೆ. ಇದು ಅವರು ಶಾಂತಗೊಳ್ಳಲು ಮತ್ತು ಅವರ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ಸಾಧ್ಯವಾಗಲಿದೆ.

   CD lady ಹಿಂದೆ ಇದ್ಯ ಡಿಕೆ ಕೈವಾಡ! | Oneindia Kannada

   ಟ್ವಿಟ್ಟರ್ ಬಳಕೆದಾರ ಪಿಯೂಷ್ ರೈ ಎಂಬುವವರು ಎಸ್‌ಎಚ್‌ಒ ಪ್ರೇಮ್ ಚಂದ್ ಅವರು ಗಂಗಾಜಲ ಬಾಟಲಿಯೊಂದಿಗೆ ಪೊಲೀಸ್ ಠಾಣೆಗೆ ಬರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅವರ ಕೊಠಡಿಯ ಮೇಜಿನ ಮೇಲೆ ಗಂಗಾಜಲದ ಹಲವು ಬಾಟಲಿಗಳಿದ್ದು, ಅವರು 'ಸ್ಯಾನಿಟೈಸಿಂಗ್ ಮಂತ್ರ' ಪಠಿಸಿ ತಮ್ಮ ಕೊಠಡಿಯ ಒಳಗೆ ಗಂಗಾಜಲವನ್ನು ಚಿಮುಕಿಸುವುದು ವಿಡಿಯೋದಲ್ಲಿ ದಾಖಲಾಗಿದೆ.

   English summary
   Nauchandi police station in Uttar radesh is using Gangajal instead of santiser to prevent Covid-19 and chandan paste to control crime.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X