• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಮೃತಿ ಇರಾನಿ ಬಗ್ಗೆ ಅಶ್ಲೀಲ ಫೇಸ್ಬುಕ್ ಪೋಸ್ಟ್‌: ಯುಪಿ ಪ್ರೊಫೆಸರ್‌ಗೆ ಜೈಲುವಾಸ

|
Google Oneindia Kannada News

ಫಿರೋಜಾಬಾದ್, ಜು.21: ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಾಧ್ಯಾಪಕನು ಉತ್ತರ ಪ್ರದೇಶದ ಫಿರೋಜಾಬಾದ್‌ನ ನ್ಯಾಯಾಲಯದಲ್ಲಿ ಶರಣಾದ ನಂತರ ಜೈಲಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಪ್ರಾಧ್ಯಾಪಕ ಶಹರ್ಯಾರ್ ಅಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನುರಾಗ್ ಕುಮಾರ್‌ಗೆ ಶರಣಾಗಿದ್ದು, ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದಾನೆ ಎಂದು ಹೇಳಲಾಗಿದೆ.

ಲಸಿಕೆ ನೀತಿ ವಿರುದ್ದದ ರಾಹುಲ್‌ ಟ್ವೀಟ್‌ಗೆ ಕಬೀರದಾಸರ ಕಾವ್ಯದ ಮೂಲಕ ಸ್ಮೃತಿ ಇರಾನಿ ತಿರುಗೇಟುಲಸಿಕೆ ನೀತಿ ವಿರುದ್ದದ ರಾಹುಲ್‌ ಟ್ವೀಟ್‌ಗೆ ಕಬೀರದಾಸರ ಕಾವ್ಯದ ಮೂಲಕ ಸ್ಮೃತಿ ಇರಾನಿ ತಿರುಗೇಟು

ಆದಾಗ್ಯೂ, ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ರದ್ದುಗೊಳಿಸಿದ್ದಾರೆ. ಬಳಿಕ ಪ್ರಾಧ್ಯಾಪಕನನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯ ವಿರುದ್ಧ ಅಶ್ಲೀಲ ಫೇಸ್‌ಬುಕ್ ಪೋಸ್ಟ್ ಮಾಡಿದ್ದಕ್ಕಾಗಿ ಫಿರೋಜಾಬಾದ್ ಪೊಲೀಸರು ಮಾರ್ಚ್‌ನಲ್ಲಿ ಎಸ್‌ಆರ್‌ಕೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಶಹರ್ಯಾರ್ ಅಲಿ ವಿರುದ್ಧ ದೂರು ದಾಖಲು ಮಾಡಿದ್ದರು. ಆ ಸಂದರ್ಭದಲ್ಲಿ ಕಾಲೇಜಿನಿಂದ ಈ ಪ್ರಾಧ್ಯಾಪಕನನ್ನು ಅಮಾನತು ಮಾಡಲಾಗಿತ್ತು.

ಈ ತಿಂಗಳ ಆರಂಭದಲ್ಲಿ, ಶಹರ್ಯಾರ್ ಅಲಿಗೆ ಬಂಧನದಿಂದ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಪ್ರಾಧ್ಯಾಪಕರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಮೇ ತಿಂಗಳಲ್ಲಿ ತಿರಸ್ಕರಿಸಿತ್ತು. ಅಲಿಗೆ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿದ ನ್ಯಾಯಮೂರ್ತಿ ಜೆಜೆ ಮುನೀರ್, ಪ್ರಾಧ್ಯಾಪಕರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ತೋರಿಸಲು ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
A professor, who allegedly made derogatory remarks against Union Minister Smriti Irani on Facebook, was sent to jail after he surrendered in a court in Uttar Pradesh's Firozabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X