ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಪ್ರ ಚುನಾವಣಾಪೂರ್ವ ಸಮೀಕ್ಷೆ: ಎಲ್ಲಾ 6 ಪ್ರಶ್ನೆಗಳಲ್ಲಿ ಬಿಜೆಪಿಯದ್ದೇ ಪಾರುಪತ್ಯ

|
Google Oneindia Kannada News

ಮುಂದಿನ ವರ್ಷದ ಆದಿಯಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆಯನ್ನು ಗೆಲ್ಲಲು ಸಾಧ್ಯವಾದ ಎಲ್ಲಾ ರಣತಂತ್ರವನ್ನು ಬಿಜೆಪಿ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಮಾಡುತ್ತಿದೆ.

ಬಿಜೆಪಿಯಂತೂ ರಾಜ್ಯವನ್ನು ಉಳಿಸಿಕೊಳ್ಳಲು ಒಂದರ ಮೇಲೊಂದು ಯೋಜನೆಗಳನ್ನು ಘೋಷಿಸುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಪ್ರಧಾನಿ ಮೋದಿಯವರು ಎರಡ್ಮೂರು ಬಾರಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಸರಯೂ ನಹಲ್ ರಾಷ್ಟ್ರೀಯ ಯೋಜನೆಯನ್ನು ಭಾನುವಾರ (ಡಿ 12) ಉದ್ಘಾಟಿಸಿದ್ದಾರೆ.

ದೇಶವು ಬಿಪಿನ್ ರಾವತ್ ಅಗಲಿಕೆ ನೋವಿನಲ್ಲಿದ್ದರೂ, ನಿಂತಲ್ಲೇ ನಿಲ್ಲುವುದಿಲ್ಲ: ಮೋದಿ ದೇಶವು ಬಿಪಿನ್ ರಾವತ್ ಅಗಲಿಕೆ ನೋವಿನಲ್ಲಿದ್ದರೂ, ನಿಂತಲ್ಲೇ ನಿಲ್ಲುವುದಿಲ್ಲ: ಮೋದಿ

ನಾಳೆ (ಡಿ 13) ಮತ್ತೆ ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ ಕಾಶಿ ವಿಶ್ವನಾಥ ದೇವಾಲಯವನ್ನು ಗಂಗಾ ಘಾಟಿಗೆ ಸಂಪರ್ಕಿಸುವ ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದರ ಜೊತೆಗೆ, ಬಿಜೆಪಿ ಮುಖ್ಯಮಂತ್ರಿಗಳ ಸಭೆಯೂ ಆಯೋಜನೆಗೊಂಡಿದೆ.

ಉತ್ತರ ಪ್ರದೇಶ ಚುನಾವಣೆ: ಏನಿದು ಬಿಜೆಪಿಯ ವಿಶೇಷ 'ಧಾರ್ಮಿಕ' ರಣತಂತ್ರ?ಉತ್ತರ ಪ್ರದೇಶ ಚುನಾವಣೆ: ಏನಿದು ಬಿಜೆಪಿಯ ವಿಶೇಷ 'ಧಾರ್ಮಿಕ' ರಣತಂತ್ರ?

 ಉತ್ತರ ಪ್ರದೇಶ ಚುನಾವಣೆಯ ಸಂಬಂಧ ಹಲವು ಚುನಾವಣಾಪೂರ್ವ ಸಮೀಕ್ಷೆ

ಉತ್ತರ ಪ್ರದೇಶ ಚುನಾವಣೆಯ ಸಂಬಂಧ ಹಲವು ಚುನಾವಣಾಪೂರ್ವ ಸಮೀಕ್ಷೆ

ಉತ್ತರ ಪ್ರದೇಶ ಚುನಾವಣೆಯ ಸಂಬಂಧ ಹಲವು ಚುನಾವಣಾಪೂರ್ವ ಸಮೀಕ್ಷೆಯನ್ನು ವಿವಿಧ ಸಂಸ್ಥೆಗಳು ನಡೆಸಿವೆ. ಎಲ್ಲದರಲ್ಲೂ ಬಿಜೆಪಿಯು ಮುನ್ನಡೆಯನ್ನು ಸಾಧಿಸಿಕೊಂಡು ಬರುತ್ತಿದೆ. ಕಳೆದ ಬಾರಿಯಷ್ಟು ಸೀಟು ಗೆಲ್ಲಲಾಗದಿದ್ದರೂ, ಅಲ್ಲಿ ಮತ್ತೆ ಬಿಜೆಪಿಯದ್ದೇ ಸರಕಾರ ಎಂದು ಸಮೀಕ್ಷೆಗಳು ಹೇಳುತ್ತಿವೆ. ಈ ನಡುವೆ, ಮತ್ತೊಂದು ಸರ್ವೇ ಹೊರಬಿದ್ದಿದ್ದು, ಅದರಲ್ಲಿ ಕೇಳಲಾದ ಆರೂ ಪ್ರಶ್ನೆಗಳಲ್ಲಿ ಬಿಜೆಪಿಯದ್ದೇ ಪಾರುಪತ್ಯ. ಮುಂದೆ ಓದಿ..

 ಶೇ 58ರಷ್ಟು ಜನರು ರಾಮ ಮಂದಿರ ನಿರ್ಮಾಣ ಬಿಜೆಪಿಗೆ ಸಹಾಯಕ ಎನ್ನುವ ಅಭಿಪ್ರಾಯ

ಶೇ 58ರಷ್ಟು ಜನರು ರಾಮ ಮಂದಿರ ನಿರ್ಮಾಣ ಬಿಜೆಪಿಗೆ ಸಹಾಯಕ ಎನ್ನುವ ಅಭಿಪ್ರಾಯ

ಅಸೆಂಬ್ಲಿ ಚುನಾವಣೆಗೆ ಪೂರ್ವ ತಯಾರಿ ಎನ್ನುವಂತೆ, ಬಿಜೆಪಿ ರಾಜ್ಯವಿರುವ ಮುಖ್ಯಮಂತ್ರಿಗಳ ಸಭೆಯನ್ನು ಪಕ್ಷ ಆಯೋಜಿಸಿದೆ. ಎಬಿಪಿ ನ್ಯೂಸ್ ಮತ್ತು ಸಿ-ವೋಟರ್, ಅಯೋಧ್ಯೆಯಲ್ಲಿ ರಾಮ ಮಂದಿರದ ವಿಚಾರ ಪಕ್ಷಕ್ಕೆ ಲಾಭ ತಂದು ಕೊಡಲಿದೆಯೇ ಎನ್ನುವ ಪ್ರಶ್ನೆಯೊಂದಿಗೆ ಸಮೀಕ್ಷೆಯನ್ನು ನಡೆಸಿತ್ತು. ಇದರಲ್ಲಿ, ಶೇ 58ರಷ್ಟು ಜನರು ರಾಮ ಮಂದಿರ ನಿರ್ಮಾಣ ಬಿಜೆಪಿಗೆ ಸಹಾಯಕವಾಗಲಿದೆ ಎಂದು ಹೇಳಿದ್ದರು. ಶೇ. 41.4ರಷ್ಟು ಜನರು ಇದರಿಂದ ಪಕ್ಷಕ್ಕೆ ಪ್ರಯೋಜನವಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು. ಎಬಿಪಿ ನ್ಯೂಸ್, ಸಿ-ವೋಟರ್ ಮತ್ತೆ ಆರು ಪ್ರಶ್ನೆಯನ್ನು ಜನರ ಮುಂದಿಟ್ಟಿದೆ, ಅದು ಹೀಗಿದೆ:

 ರೈತ ಮುಖಂಡರು ಚುನಾವಣೆಗೆ ಸ್ಪರ್ಧಿಸಿದರೆ ಅದರ ಲಾಭ ಯಾರಿಗೆ?

ರೈತ ಮುಖಂಡರು ಚುನಾವಣೆಗೆ ಸ್ಪರ್ಧಿಸಿದರೆ ಅದರ ಲಾಭ ಯಾರಿಗೆ?

ಮೊದಲನೇ ಪ್ರಶ್ನೆ: ರೈತ ಮುಖಂಡರು ಚುನಾವಣೆಗೆ ಸ್ಪರ್ಧಿಸಿದರೆ ಅದರ ಲಾಭ ಬಿಜೆಪಿಗೋ ಅಥವಾ ವಿರೋಧ ಪಕ್ಷಕ್ಕೋ? ಬಿಜೆಪಿ ಶೇ. 58.4%, ಸಮಾಜವಾದಿ ಪಕ್ಷಕ್ಕೆ ಶೇ. 46.7%, ಬಿಎಸ್ಪಿಗೆ ಶೇ.73% ಮತ್ತು ಕಾಂಗ್ರೆಸ್ಸಿಗೆ ಶೇ. 55.6%.

ಎರಡನೇ ಪ್ರಶ್ನೆ: ರೈತ ಮುಖಂಡರು ಯಾವುದಾದರೂ ಪಕ್ಷದ ಚಿಹ್ನೆಯೊಂದಿಗೆ ಸ್ಪರ್ಧಿಸಿದರೆ ಯಾರಿಗೆ ಅನುಕೂಕಲ? ಬಿಜೆಪಿ ಶೇ. 71% , ಸಮಾಜವಾದಿ ಪಕ್ಷಕ್ಕೆ ಶೇ. 75.6%, ಬಿಎಸ್ಪಿಗೆ ಶೇ. 54.2% ಮತ್ತು ಕಾಂಗ್ರೆಸ್ಸಿಗೆ ಶೇ. 56.9%.

 ಎಕ್ಸ್ ಪ್ರೆಸ್ ವೇ ಅಭಿವೃದ್ದಿ ಯೋಗಿ, ಅಖಿಲೇಶ್ ಕಾಲದಲ್ಲಿ ಉತ್ತಮವೋ?

ಎಕ್ಸ್ ಪ್ರೆಸ್ ವೇ ಅಭಿವೃದ್ದಿ ಯೋಗಿ, ಅಖಿಲೇಶ್ ಕಾಲದಲ್ಲಿ ಉತ್ತಮವೋ?

ಮೂರನೇ ಪ್ರಶ್ನೆ: ಎಕ್ಸ್ ಪ್ರೆಸ್ ವೇ ಅಭಿವೃದ್ದಿ ಯೋಗಿ, ಅಖಿಲೇಶ್, ಮಾಯಾವತಿ ಯಾರ ಕಾಲದಲ್ಲಿ ಉತ್ತಮ? ಬಿಜೆಪಿ ಶೇ. 51.8% , ಸಮಾಜವಾದಿ ಪಕ್ಷಕ್ಕೆ ಶೇ. 27.9%, ಬಿಎಸ್ಪಿಗೆ ಶೇ. 31.6%.

ನಾಲ್ಕನೇ ಪ್ರಶ್ನೆ: ಕೃಷಿ ಕಾಯಿದೆಯನ್ನು ಹಿಂದಕ್ಕೆ ಪಡೆದ ಮೋದಿ ಸರಕಾರದ ಕ್ರಮ ಸರಿಯೇ? ಸರಕಾರದ ಕ್ರಮ ಸರಿ ಎನ್ನುವವರು ಶೇ. 51.8% , ಶೇ. 32.60% ಜನರು ಕಾಯಿದೆಯನ್ನು ಹಿಂದಕ್ಕೆ ಪಡೆಯುವ ಬದಲು ಅದರ ಉಪಯೋಗವನ್ನು ರೈತರಿಗೆ ತಿಳಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

Recommended Video

HD Kumaraswamy : ಯಡಿಯೂರಪ್ಪನಿಗಿರೋ ಸೌಜನ್ಯ ಕಾಂಗ್ರೆಸ್ ನವರಿಗಿಲ್ಲ | Oneindia Kannada
 ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಉದ್ಘಾಟನೆ ಬಿಜೆಪಿಗೆ ಲಾಭವೋ?

ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಉದ್ಘಾಟನೆ ಬಿಜೆಪಿಗೆ ಲಾಭವೋ?

ಐದನೇ ಪ್ರಶ್ನೆ: ಕೃಷಿ ಕಾಯಿದೆ ಹಿಂದಕ್ಕೆ ಪಡೆದದ್ದು ಬಿಜೆಪಿಗೆ ಅನುಕೂಲವಾಗಲಿದೆಯಾ? ಹೌದು ಎನ್ನುವವರ ಸಂಖ್ಯೆ ಶೇ. 70.6%, ಇಲ್ಲ ಇದು ಬಿಜೆಪಿಗೆ ಹಿನ್ನಡೆ ಎನ್ನುವವರ ಪ್ರಮಾಣ ಶೇ. 29.4%.

ಆರನೇ ಪ್ರಶ್ನೆ: ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಉದ್ಘಾಟನೆ ಬಿಜೆಪಿಗೆ ಲಾಭವೋ? ಹೌದು ಎನ್ನುವವರ ಸಂಖ್ಯೆ ಶೇ. 67.3% , ಇಲ್ಲ ಇದು ಬಿಜೆಪಿಗೆ ಹಿನ್ನಡೆ ಎನ್ನುವವರ ಪ್ರಮಾಣ ಶೇ.67.3% .

ಈ ಸಮೀಕ್ಷೆಯ ಇನ್ನೊಂದು ಫಲಿತಾಂಶದ ಪ್ರಕಾರ 403 ಸದಸ್ಯ ಬಲವನ್ನು ಹೊಂದಿರುವ ಉತ್ತರ ಪ್ರದೇಶದ ಅಸೆಂಬ್ಲಿಯಲ್ಲಿ ಬಿಜೆಪಿ 212 - 224 ಸ್ಥಾನ ಸಿಗಬಹುದು.

English summary
Uttar Pradesh Pre-Poll Survey : ABP News-CVoter Survey, BJP In Driver’s Seat. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X