• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನಸಂಖ್ಯಾ ನಿಯಂತ್ರಣ ಕಾಯ್ದೆ: ಯೋಗಿ ಆದಿತ್ಯನಾಥ್ ಮೂರ್ಖತನ

By ಡಾ.ಎಚ್.ಸಿ.ಮಹದೇವಪ್ಪ
|
Google Oneindia Kannada News

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಒಬ್ಬರಿಗೆ ಕುಟುಂಬದಲ್ಲಿ ಎರಡು ಮಕ್ಕಳಿಗಿಂತ ಹೆಚ್ಚಿದ್ದರೆ ಅವರಿಗೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ ಎಂಬ ಕಾಯ್ದೆಯನ್ನು ಜಾರಿ ಮಾಡಲು ಹೊರಟಿರುವ ಬೆನ್ನಲ್ಲೇ ಕೋಮುವಾದಿ ಪಾಳಯವು ಸಕ್ರಿಯವಾಗಿದ್ದು ಇದನ್ನು " ಯೋಗಿಯವರ ಮಾಸ್ಟರ್ ಸ್ಟ್ರೋಕ್" ಎಂದು ಬಿಂಬಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಆದರೆ ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೇಶದ ಇತಿಹಾಸವನ್ನು ಗಮನಿಸುವುದಾದರೆ ಈಗಾಗಲೇ ಭಾರತದಲ್ಲಿ ಹಲವು ಬಗೆಯ ಜನಸಂಖ್ಯಾ ನಿಯಂತ್ರಣಾ ಅಭಿಯಾನವನ್ನು ಸರ್ಕಾರವು ತನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ಹಮ್ಮಿಕೊಂಡಿದೆ.

ಕೇಂದ್ರ ಜಾರಿಗೊಳಿಸಲು ಹೊರಟಿರುವುದು ರಾಷ್ಟ್ರೀಯ ಕೋಮುವಾದಿ ಶಿಕ್ಷಣ ನೀತಿಯೋ?ಕೇಂದ್ರ ಜಾರಿಗೊಳಿಸಲು ಹೊರಟಿರುವುದು ರಾಷ್ಟ್ರೀಯ ಕೋಮುವಾದಿ ಶಿಕ್ಷಣ ನೀತಿಯೋ?

ಇದಕ್ಕೆ ಪೂರಕವಾಗಿ ನೋಡುವುದಾದರೆ, ವಿಪರೀತ ಮಕ್ಕಳ ಜನನಕ್ಕೆ ಬದಲಾಗಿ ಸರ್ಕಾರವು 3 ಮಕ್ಕಳನ್ನು ಪಡೆಯುವ ಅವಕಾಶ ನೀಡಿತು. "ಒಂದು ಎರಡು ಬೇಕು ಮೂರು ಮಕ್ಕಳು ಸಾಕು" ಎಂಬ ಜಾಗೃತಿ ವಾಕ್ಯಗಳು ಮುನ್ನಲೆಗೆ ಬಂದವು. ಅದಾದ ಬಳಿಕ ಜನಸಂಖ್ಯಾ ಪ್ರಮಾಣ ಇನ್ನೂ ಹೆಚ್ಚಾದಂತೆ 2 ಮಕ್ಕಳನ್ನು ಪಡೆಯುವ ಅವಕಾಶ ನೀಡಿತು.

ಆ ವೇಳೆ "ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ" ಎಂಬ ಘೋಷಣೆಯು ಬಹಳಷ್ಟು ಜನಪ್ರಿಯವಾಗಿತ್ತು. ತದನಂತರದಲ್ಲಿ ಜನಸಂಖ್ಯೆ ಸ್ಪೋಟದಿಂದಾಗಿ ಒಂದೇ ಮಗುವನ್ನು ಪಡೆದರೆ ಸಾಕೆಂಬ ತಿಳುವಳಿಕೆಯನ್ನು ಅಭಿಯಾನದ ಮೂಲಕ ಮಾಡುವ ಅವಕಾಶವಿದೆ. "ಗಂಡಿರಲಿ ಹೆಣ್ಣರಲಿ ಮಗು ಒಂದೇ ಇರಲಿ". ಎಂಬ ಜಾಗೃತಿಯನ್ನು ಸರ್ಕಾರ ಮೂಡಿಸಿತು.

 ಬಿಜೆಪಿ ಪ್ರಕಾರ ಹಿಂದುತ್ವ ಎಂದರೆ ತಳವರ್ಗದವರನ್ನು ಅವಮಾನದಿಂದ ಕಾಣುವುದು ಬಿಜೆಪಿ ಪ್ರಕಾರ ಹಿಂದುತ್ವ ಎಂದರೆ ತಳವರ್ಗದವರನ್ನು ಅವಮಾನದಿಂದ ಕಾಣುವುದು

 ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡುವಂತಹ ಆಲೋಚನೆ

ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡುವಂತಹ ಆಲೋಚನೆ

ಈ ಹಿನ್ನಲೆಯಲ್ಲಿ ಗಮನಿಸುವುದಾದರೆ ಆದಿತ್ಯನಾಥ್ ಅವರೇನು ಹೊಸದಾಗಿ ಏನನ್ನೂ ಹೇಳುತ್ತಿಲ್ಲ. ಆದರೆ ದುರಾದೃಷ್ಟದ ಸಂಗತಿ ಎಂದರೆ ಸಂವಿಧಾನದಲ್ಲಿ ಅವಕಾಶವೇ ಇಲ್ಲದಿದ್ದರೂ ಕೂಡಾ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡುವಂತಹ ಆಲೋಚನೆಯು ಅತ್ಯಂತ ಮೂರ್ಖತನದಿಂದ ಕೂಡಿರುವಂತದ್ದು. ಇನ್ನು ಜನಸಂಖ್ಯಾ ನಿಯಂತ್ರಣ ಎಂಬುದು ಜಾಗೃತಿಗೆ ಸಂಬಂಧಿಸಿದ ಸಂಗತಿಯೇ ವಿನಃ ಕಾಯ್ದೆಗಳ ಮೂಲಕ ನಿಯಂತ್ರಿಸುವಂತಹ ಸಂಗತಿಯಲ್ಲ.

 ದೇಶದ ಅಭಿವೃದ್ಧಿಯ ದೃಷ್ಟಿಗೆ ಪೂರಕವಾಗಿರುವ ಸಂಗತಿಯಲ್ಲ

ದೇಶದ ಅಭಿವೃದ್ಧಿಯ ದೃಷ್ಟಿಗೆ ಪೂರಕವಾಗಿರುವ ಸಂಗತಿಯಲ್ಲ

ಜನಸಂಖ್ಯಾ ಸ್ಪೋಟ ಎಂಬುದು ದೇಶದ ಅಭಿವೃದ್ಧಿಯ ದೃಷ್ಟಿಗೆ ಪೂರಕವಾಗಿರುವ ಸಂಗತಿಯಲ್ಲ. ಅದರಲ್ಲೂ ಸಂಪನ್ಮೂಲಗಳು ಕಡಿಮೆ ಇರುವಂತಹ ಸಂದರ್ಭದಲ್ಲಿ ಎಲ್ಲರಿಗೂ ಕೂಡಾ ಸಂಪನ್ಮೂಲಗಳು ದೊರೆಯಬೇಕಾದರೆ ಎಲ್ಲರೂ ಕೂಡಾ ರಾಷ್ಟ್ರೀಯ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ವರ್ತಿಸಬೇಕು ಮತ್ತು ಜನಸಂಖ್ಯಾ ನಿಯಂತ್ರಣ ಎಂಬ ಸಂಗತಿಯು empathetic ಆಧಾರದ ಮೇಲೆ ನಿರ್ವಹಿಸಲ್ಪಡುವ ಕಾಳಜಿಯಾಗಬೇಕು.

 ಜನಸಂಖ್ಯಾ ನಿಯಂತ್ರಣ ಎಂಬ ಆಶಯಕ್ಕೆ ಬಲ ಬರುತ್ತದೆ

ಜನಸಂಖ್ಯಾ ನಿಯಂತ್ರಣ ಎಂಬ ಆಶಯಕ್ಕೆ ಬಲ ಬರುತ್ತದೆ

ಇದಕ್ಕೆ ಪೂರಕವಾಗಿ ಹೇಳುವುದಾದರೆ ಒಂದು ಮಗು ಜನಿಸಿ ಅದು ಆರೋಗ್ಯಪೂರ್ಣವಾಗಿ ಬೆಳೆಯುತ್ತದೆಯೇ ಎಂಬ ವಾತಾವರಣವು ಖಚಿತಗೊಂಡಾಗ ಮಾತ್ರ, ಜನಸಂಖ್ಯಾ ನಿಯಂತ್ರಣ ಎಂಬ ಆಶಯಕ್ಕೆ ಬಲ ಬರುತ್ತದೆ. ಹೀಗೆ ಈ ಆಶಯಕ್ಕೆ ಬಲ ಬರಬೇಕಾದರೆ ಪೌಷ್ಠಿಕತೆ, ಆರೋಗ್ಯ, ಲಸಿಕೆ ಮತ್ತು ಶಿಕ್ಷಣದ ವ್ಯವಸ್ಥೆಯು ಮಕ್ಕಳಿಗೆ ಲಭ್ಯವಾಗಬೇಕು. ಇನ್ನು ಗರ್ಭಿಣಿ ಮಹಿಳೆಯರಿಗೆ ಹೆರಿಗೆಗೆ ಮುಂಚೆ ಮತ್ತು ನಂತರದಲ್ಲಿ ಸರಿಯಾದ ಪೌಷ್ಠಿಕತೆ ಮತ್ತು ಆರೋಗ್ಯ ಸೌಲಭ್ಯಗಳು ದೊರೆಯಬೇಕೋ ಎಂಬುದರ ಬಗ್ಗೆಯೂ ಕೂಡಾ ನಿಯಮ ರೂಪಿಸುವ ಸರ್ಕಾರ ಗಮನ ಹರಿಸಬೇಕು.

 ಜಾರಿಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ

ಜಾರಿಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ

ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾದ "ಮಾತೃಪೂರ್ಣ" ಯೋಜನೆ ಬಹುಶಃ ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾದ "ಮಾತೃಪೂರ್ಣ" ಯೋಜನೆಯನ್ನು ಈ ವೇಳೆ ನಾನು ನೆನೆಯುತ್ತೇನೆ. ಇನ್ನು ಈ ಕೋಮುವಾದಿಗಳ ಆಡಳಿತದ ಸಂದರ್ಭದಲ್ಲಿ ಯಾವುದೋ ನಿರ್ದಿಷ್ಟ ಜನ ಸಮುದಾಯವನ್ನು ಟಾರ್ಗೆಟ್ ಮಾಡುವ ಉದ್ದೇಶದಿಂದಲೇ NRC, CAA ಬಳಿಕ ಇಂತಹ ಜನಸಂಖ್ಯಾ ನಿಯಂತ್ರಣ ಎಂಬ ದುರುದ್ದೇಶಪೂರಿತವಾದ ಕಾನೂನನ್ನು ಜಾರಿಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ.

 ಜನಸಂಖ್ಯಾ ನಿಯಂತ್ರಣ ಕಾಯ್ದೆ: ಯೋಗಿ ಆದಿತ್ಯನಾಥ್ ಮೂರ್ಖತನ

ಜನಸಂಖ್ಯಾ ನಿಯಂತ್ರಣ ಕಾಯ್ದೆ: ಯೋಗಿ ಆದಿತ್ಯನಾಥ್ ಮೂರ್ಖತನ

ನನ್ನ ಪ್ರಕಾರ ಅಭಿವೃದ್ಧಿ ಎಂದರೆ ಏನೆಂಬುದೇ ಗೊತ್ತಿಲ್ಲ ಎಂಬುದನ್ನು ಈ ಏಳು ವರ್ಷಗಳಲ್ಲಿ ಸಾಬೀತುಪಡಿಸಿರುವ ಬಿಜೆಪಿ ಪಕ್ಷದ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರನ್ನು ಗೊಂದಲಕ್ಕೆ ಬೀಳಿಸಲು ಇಂತಹ ಕೆಲವೊಂದು ಅವಿವೇಕದ ಗಿಮಿಕ್ ಮಾಡುತ್ತಿವೆಯೇ ವಿನಃ ಇವರಿಗೆ ಜನ ಸಂಪನ್ಮೂಲವು ಉತ್ಪಾದಕತೆಯಲ್ಲಿ ತೊಡಗಿಸುವಂತಹ ವಾತಾವರಣ ನಿರ್ಮಿಸುವ ಯಾವುದೇ ಉದ್ದೇಶ ಇದ್ದಂತಿಲ್ಲ.!

English summary
Dr HC Mahadevappa reaction to Uttar Pradesh's Population control bill. He says its Yogi Adityanath foolishness.Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X