• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಪಿ ಬಿಜೆಪಿ ಶಾಸಕರಲ್ಲಿ ಶೇ.50 ಮಂದಿಗೆ 3ಕ್ಕಿಂತ ಅಧಿಕ ಮಕ್ಕಳು: ಸ್ಥಾನಕ್ಕೆ ಕುತ್ತಾಗುತ್ತಾ ಹೊಸ ಜನಸಂಖ್ಯಾ ನೀತಿ

|
Google Oneindia Kannada News

ನವದೆಹಲಿ, ಜು.14: ಉತ್ತರಪ್ರದೇಶದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಕರಡು ಮಸೂದೆಯ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಜನರನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಬಹುದಾಗಿದೆ. ಹಾಗೆಯೇ ಸರ್ಕಾರಿ ಉದ್ಯೋಗಗಳಲ್ಲಿ ಅರ್ಜಿ ಸಲ್ಲಿಸುವುದು, ಬಡ್ತಿ ಪಡೆಯುವುದು ಮತ್ತು ಸರ್ಕಾರದ ಸಬ್ಸಿಡಿಗಳನ್ನು ಪಡೆಯುವುದು ತಡೆಯಬಹುದಾಗಿದೆ.

ಆದರೆ ವಿಪರ್ಯಾಸವೆಂದರೆ, 2021 ರ ಕರಡು ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆಯ ಈ ನಿಬಂಧನೆಯ ಪ್ರಕಾರ ಆಡಳಿತಾರೂಢ ಬಿಜೆಪಿಯ ಅರ್ಧದಷ್ಟು ಶಾಸಕರು ಮುಂದಿನ ರಾಜ್ಯದ ವಿಧಾನಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಅನರ್ಹರಾಗಲಿದ್ದಾರೆ.

ಯುಪಿ ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಸಿದ್ದ: ನೀತಿ ಅನುಸರಿಸಿದರೆ ಏನು ಸಿಗುತ್ತೆ?ಯುಪಿ ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಸಿದ್ದ: ನೀತಿ ಅನುಸರಿಸಿದರೆ ಏನು ಸಿಗುತ್ತೆ?

ಉತ್ತರಪ್ರದೇಶ ರಾಜ್ಯ ವಿಧಾನಸಭೆಯು ಒದಗಿಸಿದ ಮಾಹಿತಿಯ ಪ್ರಕಾರ, ಪ್ರಸ್ತುತ 397 ಶಾಸಕರ ಜೀವನ ಹಾಗೂ ರಾಜಕೀಯ ಹಿನ್ನೆಲೆಯನ್ನು ಅದರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಪೈಕಿ 304 ಆಡಳಿತ ಪಕ್ಷದ ಶಾಸಕರು ಆಗಿದ್ದಾರೆ. ಈ ಪೈಕಿ 152 ಮಂದಿ ಅಂದರೆ ನಿಖರವಾಗಿ ಅರ್ಧದಷ್ಟು ಶಾಸಕರು ಮೂರು ಅಥವಾ ಅದಕ್ಕಿಂತ ಅಧಿಕ ಮಕ್ಕಳನ್ನು ಹೊಂದಿದ್ದಾರೆ.

 ಬಿಜೆಪಿ ಶಾಸಕರಿಗೆ ಎಷ್ಟು ಮಕ್ಕಳಿದ್ದಾರೆ?

ಬಿಜೆಪಿ ಶಾಸಕರಿಗೆ ಎಷ್ಟು ಮಕ್ಕಳಿದ್ದಾರೆ?

ಬಿಜೆಪಿ ಶಾಸಕರ ಪೈಕಿ ಒಬ್ಬರಿಗೆ ಎಂಟು ಮಕ್ಕಳು ಇದ್ದಾರೆ. ಈ ಶಾಸಕ ಅತಿ ಹೆಚ್ಚು ಮಕ್ಕಳು ಹೊಂದಿರುವ ಬಿಜೆಪಿಯ ಶಾಸಕರಾಗಿದ್ದಾರೆ. ಮತ್ತೊಬ್ಬರಿಗೆ ಏಳು ಮಕ್ಕಳು ಇದ್ದಾರೆ. ಅದಲ್ಲದೇ ಎಂಟು ಶಾಸಕರಿಗೆ ತಲಾ ಆರು ಮಕ್ಕಳು ಇದ್ದಾರೆ. ಇನ್ನು 15 ಮಂದಿ ಶಾಸಕರು ತಲಾ ಐದು ಮಕ್ಕಳ ಪೋಷಕರಾಗಿದ್ದಾರೆ. ಆಡಳಿತ ಪಕ್ಷದ ಇನ್ನೂ 44 ಶಾಸಕರು ತಲಾ ನಾಲ್ಕು ಮಕ್ಕಳನ್ನು ಹೊಂದಿದ್ದರೆ, 83 ಮಂದಿಗೆ ತಲಾ ಮೂರು ಮಕ್ಕಳಿದ್ದಾರೆ. ರಾಜ್ಯ ವಿಧಾನಸಭೆಗೆ ಉತ್ತರಪ್ರದೇಶದ ಈ ಹೊಸ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಅನ್ವಯ ಮಾಡಿದರೆ, ಈ ಎಲ್ಲಾ ಶಾಸಕರು ಅನರ್ಹರಾಗುತ್ತಾರೆ.

 ಲೋಕಸಭೆಯಲ್ಲೂ ಸ್ಥಾನ ಕಳೆದುಕೊಳ್ಳುತ್ತಾ ಬಿಜೆಪಿ

ಲೋಕಸಭೆಯಲ್ಲೂ ಸ್ಥಾನ ಕಳೆದುಕೊಳ್ಳುತ್ತಾ ಬಿಜೆಪಿ

ಇನ್ನು ಲೋಕಸಭೆಯಲ್ಲೂ ಬಿಜೆಪಿಗೆ ಈ ಹೊಸ ಜನಸಂಖ್ಯಾ ನೀತಿ ಬಿಜೆಪಿ ಸಂಸದರಿಗೆ ಕುತ್ತಾಗಲಿದೆ. ಇಲ್ಲಿ ಮತ್ತೊಂದು ವ್ಯಂಗ್ಯವಾದ ವಿಚಾರ ಅಡಗಿದೆ. ದೇಶದಲ್ಲಿ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ 2019 ರ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಮಂಡಿಸಲು ಬಿಜೆಪಿಯ ಗೋರಖ್‌ಪುರ ಸಂಸದ ಮತ್ತು ಭೋಜ್‌ಪುರಿ ಚಲನಚಿತ್ರ ನಟ ರವಿ ಕಿಶನ್ ಹೆಸರನ್ನು ಪಟ್ಟಿ ಮಾಡಲಾಗಿದೆ. ಆದರೆ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಮಂಡಿಸಲು ರವಿ ಕಿಶನ್‌ಗೆ ನಾಲ್ವರು ಮಕ್ಕಳಿದ್ದಾರೆ. ಖಾಸಗಿ ಸದಸ್ಯರ ಮಸೂದೆಗಳು ಸರ್ಕಾರದ ಬೆಂಬಲವಿಲ್ಲದೆ ಅಂಗೀಕಾರಗೊಳ್ಳುವ ಸಾಧ್ಯತೆ ಕಡಿಮೆಯಾಗಿದೆ. ಪಿಆರ್‌ಎಸ್‌ ಶಾಸಕಾಂಗದ ಪ್ರಕಾರ, 1970 ರಿಂದ ಸಂಸತ್ತು ಯಾವುದೇ ಖಾಸಗಿ ಸದಸ್ಯರ ಮಸೂದೆಗಳನ್ನು ಅಂಗೀಕರಿಸಿಲ್ಲ. ಯುಪಿ ಪ್ರಸ್ತಾವನೆಯಂತೆ, ಈ ಮಸೂದೆಯು ಎರಡು ಮಕ್ಕಳಿಗಿಂತ ಅಧಿಕ ಮಕ್ಕಳು ಹೊಂದಿರುವ ದಂಪತಿಗಳು ಸರ್ಕಾರಿ ಉದ್ಯೋಗಗಳು ಮತ್ತು ಸಬ್ಸಿಡಿಗಳಿಗೆ ಅನರ್ಹರನ್ನಾಗಿ ಮಾಡಬಹುದಾಗಿದೆ. ಆದರೆ ಲೋಕಸಭಾ ವೆಬ್‌ಸೈಟ್‌ನ ಪ್ರಕಾರ, 168 ಸಂಸದರು ಮೂರು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿದ್ದಾರೆ. ಈ ಪೈಕಿ 105 ಮಂದಿ ಬಿಜೆಪಿ ಸದಸ್ಯರಾಗಿದ್ದಾರೆ.

3 ಮಕ್ಕಳಿರುವ ಕುಟುಂಬಕ್ಕಿಲ್ಲ ಸರ್ಕಾರಿ ಸವಲತ್ತು; ಕರ್ನಾಟಕದಲ್ಲಿ ಹೊಸ ಜನಸಂಖ್ಯೆ ನೀತಿ!?3 ಮಕ್ಕಳಿರುವ ಕುಟುಂಬಕ್ಕಿಲ್ಲ ಸರ್ಕಾರಿ ಸವಲತ್ತು; ಕರ್ನಾಟಕದಲ್ಲಿ ಹೊಸ ಜನಸಂಖ್ಯೆ ನೀತಿ!?

 ಜನಸಂಖ್ಯಾ ವಿರೂಪಕ್ಕೆ ಕಾರಣವಾಗಬಹುದು ಈ ತಾಕೀತು

ಜನಸಂಖ್ಯಾ ವಿರೂಪಕ್ಕೆ ಕಾರಣವಾಗಬಹುದು ಈ ತಾಕೀತು

ಕಳೆದ ವರ್ಷ ಡಿಸೆಂಬರ್‌ನಲ್ಲಿ, ಚೀನಾ ಮಾದರಿಯನ್ನು ಆಧರಿಸಿ ಜನಸಂಖ್ಯಾ ನಿಯಂತ್ರಣ ಕಾನೂನು ಕೋರಿ ಪಿಐಎಲ್‌ ಸಲ್ಲಿಕೆಯಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರವು, ವಿವಿಧ ಸ್ವಯಂಪ್ರೇರಿತ ಜನನ ನಿಯಂತ್ರಣ ಕ್ರಮಗಳ ಮೂಲಕ ಜನನ ದರವನ್ನು 2.1 ರ ಬದಲಿ ಮಟ್ಟವನ್ನು ಸಾಧಿಸುವ ಹಾದಿಯಲ್ಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಹಾಗೆಯೇ ಚೀನಾ ಮಾದರಿಯಂತಹ ಅಂತರರಾಷ್ಟ್ರೀಯ ಅನುಭವವು ನಿರ್ದಿಷ್ಟ ಸಂಖ್ಯೆಯ ಮಕ್ಕಳನ್ನು ಹೊಂದಲು ಯಾವುದೇ ಬಲವಂತವು ಜನಸಂಖ್ಯಾ ವಿರೂಪಕ್ಕೆ ಕಾರಣವಾಗುತ್ತದೆ ಎಂದು ತೋರಿಸಿದೆ ಎಂದು ಕೂಡಾ ಉಲ್ಲೇಖ ಮಾಡಿದೆ.

 ಅಧಿಕ ಜನನ ಪ್ರಮಾಣ ಹೊಂದಿದೆ ಏಳು ರಾಜ್ಯಗಳು

ಅಧಿಕ ಜನನ ಪ್ರಮಾಣ ಹೊಂದಿದೆ ಏಳು ರಾಜ್ಯಗಳು

36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 25 ರಾಜ್ಯಗಳು ಈಗಾಗಲೇ ಜನನ ಪ್ರಮಾಣದಲ್ಲಿ 2.1 ಅಥವಾ ಅದಕ್ಕಿಂತ ಕಡಿಮೆ ಸಾಧಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ ಏಳು ರಾಜ್ಯಗಳ 146 ಜಿಲ್ಲೆಗಳಲ್ಲಿ ಉತ್ತರ ಪ್ರದೇಶ (57), ಬಿಹಾರ (37), ರಾಜಸ್ಥಾನ (14), ಮಧ್ಯ ಪ್ರದೇಶ (25), ಛತ್ತೀಸ್‌ಗಢ (2), ಜಾರ್ಖಂಡ್ (9) ಮತ್ತು ಅಸ್ಸಾಂ (2) ಜನನ ಪ್ರಮಾಣವು 3 ಕ್ಕಿಂತ ಅಧಿಕವಾಗಿದೆ.

English summary
Uttar Pradesh Population Bill: 50% of UP BJP MLAs have three or more children. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X