ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿ ಟೀಕಿಸಿದ ಪ್ರಿಯಾಂಕಗೆ ಉ.ಪ್ರ ಪೊಲೀಸರು ನೀಡಿದ ಉತ್ತರ

|
Google Oneindia Kannada News

ಲಕ್ನೋ, ಜೂನ್ 29: ಯೋಗಿ ಆದಿತ್ಯನಾಥ್ ಸರಕಾರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಟೀಕಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಗೆ, ಉತ್ತರ ಪ್ರದೇಶರು ಪೊಲೀಸರು ಉತ್ತರ ನೀಡಿದ್ದಾರೆ.

ರಾಜ್ಯದಲ್ಲಿ ಅಪರಾಧಿಗಳಿಗೆ ಭಯವೇ ಇಲ್ಲದಂತಾಗಿದೆ, ಎಲ್ಲಿ ಬೇಕಾದರೂ ಅಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಒಂದರ ಮೇಲೊಂದು ಅಪರಾಧಗಳು ನಡೆಯುತ್ತಿರುತ್ತದೆ ಎಂದು ಪ್ರಿಯಾಂಕ ಟ್ವೀಟ್ ಮಾಡಿದ್ದರು.

Uttar Pradesh police tweet reply to AICC General Secretary Priyanka Gandhi Vadra

ಇದಕ್ಕೆ ಟ್ವೀಟ್ ಮೂಲಕವೇ ಅಂಕಿಅಂಶದ ಸಮೇತ ಉತ್ತರಿಸಿರುವ ಉತ್ತರಪ್ರದೇಶ ಪೊಲೀಸರು, ಗಂಭೀರ ಆರೋಪಗಳನ್ನು ಹೊಂದಿರುವ ಆರೋಪಿಗಳ ವಿರುದ್ದ ನಾವು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಪ್ರಿಯಾಂಕಗೆ ಪ್ರತ್ಯುತ್ತರ ನೀಡಿದ್ದಾರೆ.

ಅಪರಾಧಗಳು ನಡೆಯುತ್ತಿದ್ದರೂ ಉತ್ತರಪ್ರದೇಶದ ಬಿಜೆಪಿ ಸರಕಾರ ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅಪರಾಧಿಗಳ ಮುಂದೆ ಸರಕಾರ ಆತ್ಮಸಮರ್ಪಣೆ ಮಾಡಿಕೊಂಡಿದೆಯಾ ಎಂದು ಪ್ರಿಯಾಂಕ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದರು.

ಎರಡು ವರ್ಷಗಳಲ್ಲಿ 9,225 ಅಪರಾಧಿಗಳನ್ನು ಬಂಧಿಸಲಾಗಿದೆ, 81 ಅಪರಾಧಿಗಳು ಪೊಲೀಸ್ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂರು ಕೋಟಿಗೂ ಅಧಿಕ ಆಸ್ತಿಯನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ ಎಂದು ಉ.ಪ್ರ ಪೋಲಿಸರು ಪ್ರಿಯಾಂಕಗೆ ಉತ್ತರ ನೀಡಿದ್ದಾರೆ.

ಪೊಲೀಸರು ಕಠಿಣ ಕಾರ್ಯಾಚರಣೆಯಿಂದ ಅಪರಾಧ ಶೇ. 20-35 ಕಮ್ಮಿಯಾಗಿದೆ. ಅಪರಾಧಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಪೊಲೀಸರು ವಶಕ್ಕೆ ಪಡೆದುಕೊಂಡು ಶಿಕ್ಷೆ ನೀಡುತ್ತಿದ್ದಾರೆಂದು, ಉತ್ತರಪ್ರದೇಶ ಪೊಲೀಸರು ಪ್ರಿಯಾಂಕಗೆ ಟ್ವೀಟ್ ಮೂಲಕವೇ ಉತ್ತರ ನೀಡಿದ್ದಾರೆ.

English summary
Uttar Pradesh police tweet reply to AICC General Secretary Priyanka Gandhi Vadra. Earlier Priyanka criticized Yogi Adityanath government over law and order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X