ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯದ ಕಲಬೆರಕೆ ತಡೆಯಲು ಉತ್ತರ ಪ್ರದೇಶ ಹೊಸ ಯೋಜನೆ

|
Google Oneindia Kannada News

ಉತ್ತರ ಪ್ರದೇಶ, ಮಾರ್ಚ್ 3: ಉತ್ತರ ಪ್ರದೇಶ ಸರ್ಕಾರ ಜಾರಿ ಮಾಡಿರುವ ಅಬಕಾರಿ ಹೊಸ ನಿಯಮದ ಪ್ರಕಾರ, ಭಾರತದಲ್ಲಿ ತಯಾರಾಗುವ ವಿದೇಶಿ ಮದ್ಯಪಾನಗಳನ್ನು ಅಲ್ಯುಮಿನಿಯಮ್ ಕ್ಯಾನ್ ಗಳಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.

ಈ ಮೂಲಕ ಭಾರತದಲ್ಲಿ ತಯಾರಾಗುವ ವಿದೇಶಿ ಮದ್ಯಪಾನವನ್ನು ಅಲ್ಯೂಮಿನಿಯಮ್ ಕ್ಯಾನ್ ಗಳಲ್ಲಿ ಮಾರಾಟ ಮಾಡುವ ಮೊದಲ ರಾಜ್ಯ ಉತ್ತರ ಪ್ರದೇಶ ಎನಿಸಿಕೊಳ್ಳಲಿದೆ.

ತನ್ನ ಮಗುವಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ರೌಡಿಶೀಟರ್ತನ್ನ ಮಗುವಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ರೌಡಿಶೀಟರ್

ಅಲ್ಯೂಮಿನಿಯಮ್ ಕ್ಯಾನ್ ಗಳಲ್ಲಿ ಮದ್ಯಪಾನ ಮಾರಾಟ ಮಾಡುವುದರಿಂದ ಅನೂಕೂಲಕವೇ ಹೆಚ್ಚಿದೆ. ಅಬಕಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೇಳಿರುವ ಪ್ರಕಾರ 'ಪರಿಸರದ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಲಿದೆ. ಮತ್ತು ಮದ್ಯಪಾನ ಕಲಬೆರಕೆ ದಂಧೆಗೂ ಇದರಿಂದ ಕಡಿವಾಣ ಹಾಕಬಹುದು' ಎಂದು ತಿಳಿಸಿದ್ದಾರೆ.

Uttar Pradesh Planning To Sel Alcohol In Aluminum Can

ಇನ್ನು ಮದ್ಯಪಾನ ತಯಾರಿಸುವ ಕಂಪನಿಗಳಿಗೂ ಅಲ್ಯೂಮಿನಿಯಮ್ ಕ್ಯಾನ್ ಬಳಸುವುದು ಅನೂಕೂಲವಾಗಲಿದೆ. ಬಾಟಲಿಗಳಿಗಿಂತ ಅಲ್ಯೂಮಿನಿಯಮ್ ಕ್ಯಾನ್ ಗಳು ಅಗ್ಗವಾಗಿ ಸಿಗುತ್ತೆ. ಕ್ಯಾನ್ ಒಡೆದು ಹೋಗಲ್ಲ. ಬಾಟಲಿ ಅಂದ್ರೆ ಒಡೆದು ಹೋಗುತ್ತೆ, ಇದರಿಂದ ನಷ್ಟ. ಅಲ್ಯೂಮಿನಿಯಮ್ ಕ್ಯಾನ್ ಗೆ ಪ್ಯಾಕೇಜಿಂಗ್ ವೆಚ್ಚ ಕಡಿಮೆ ಇದೆ. ಹಾಗಾಗಿ, ಈ ವ್ಯವಸ್ಥೆ ಕಂಪನಿಗಳಿಗೆ ಸಹಕಾರಿಯಾಗಲಿದೆ.

ಏರ್‌ಪೋರ್ಟ್‌ನಲ್ಲಿ 'ಡ್ಯೂಟಿ ಫ್ರೀ' ಶಾಪಿಂಗ್‌ ಮಾಡೋರಿಗೆ ಶಾಕಿಂಗ್ ಸುದ್ದಿಏರ್‌ಪೋರ್ಟ್‌ನಲ್ಲಿ 'ಡ್ಯೂಟಿ ಫ್ರೀ' ಶಾಪಿಂಗ್‌ ಮಾಡೋರಿಗೆ ಶಾಕಿಂಗ್ ಸುದ್ದಿ

ಇನ್ನು ಅಬಕಾರಿ ಹೊಸ ನಿಯಮದಂತೆ ದೇಶದಲ್ಲಿ ನಿರ್ಮಿತವಾಗುವ ಮದ್ಯಪಾನವನ್ನು ಟೆಟ್ರಾ ಪ್ಯಾಕ್ ಗಳಲ್ಲಿ ಮಾರಾಟ ಮಾಡುವುದು ಮುಂದುವರಿಯಲಿದೆ.

English summary
Uttar Pradesh government all set to sell alcohol in aluminum cans. here is the main reason to this plan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X