ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ: ಕೊರೊನಾ ಮುಕ್ತ ಐದು ಜಿಲ್ಲೆಗಳ ಪಟ್ಟಿ

|
Google Oneindia Kannada News

ಲಕ್ನೋ, ಏಪ್ರಿಲ್ 18: ಉತ್ತರ ಪ್ರದೇಶದ ಐದು ಜಿಲ್ಲೆಗಳನ್ನು ಕೊರೊನಾ ಮುಕ್ತ ಜಿಲ್ಲೆಯೆಂದು ಯೋಗಿ ಆದಿತ್ಯನಾಥ್ ಸರಕಾರ ಘೋಷಿಸಿದೆ.

ಶುಕ್ರವಾರ (ಏ 17) ಎರಡು ಜಿಲ್ಲೆಯ ಏಳು ಜನರ ಪರೀಕ್ಷಾ ಫಲಿತಾಂಶ ನೆಗೆಟೀವ್ ಬಂದ ನಂತರ, ಆರೋಗ್ಯ ಮತ್ತು ಕುಟುಂಬ ಇಲಾಖೆ ಈ ಪ್ರಕಟಣೆ ಹೊರಡಿಸಿದೆ.

ಲಾಕ್ ಡೌನ್ ವೇಳೆ ಹುಟ್ಟಿದ ಮಗುವಿಗೆ ವಿಚಿತ್ರ ಹೆಸರಿಟ್ಟ ದಂಪತಿಗಳುಲಾಕ್ ಡೌನ್ ವೇಳೆ ಹುಟ್ಟಿದ ಮಗುವಿಗೆ ವಿಚಿತ್ರ ಹೆಸರಿಟ್ಟ ದಂಪತಿಗಳು

ಹತ್ರಾಸ್, ಪ್ರಯಾಗರಾಜ್, ಪ್ರತಾಪ್ ಘರ್, ಫಿಲಿಬಿತ್ ಮತ್ತು ಮಹಾರಾಜಗಂಜ್ ಈ ಐದು ಜಿಲ್ಲೆಗಳು, ಈಗ ಕೊರೊನಾ ಮುಕ್ತ ಜಿಲ್ಲೆಯಾಗಿವೆ.

UP now has 5 coronavirus-free districts including Prayagraj and Pratapgarh

"ಹತ್ರಾಸ್ ಜಿಲ್ಲೆಯ ನಾಲ್ವರು ಕೋವಿಡ್ 19 ಸೋಂಕಿತರ ವರದಿ ಎರಡನೇ ಪರೀಕ್ಷೆಯ ವೇಳೆ ನೆಗೆಟೀವ್ ಬಂದಿದೆ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ ಅಮಿತ್ ಮೋಹನ್ ಪ್ರಸಾದ್ ಹೇಳಿದ್ದಾರೆ.

"ಜಿಲ್ಲೆಯ ಎಲ್ಲಾ ನಾಲ್ವರ ವರದಿ ನೆಗೆಟೀವ್ ಬಂದ ನಂತರ, ಎಲ್ಲರನ್ನೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಕ್ವಾರಂಟೈನ್ ಗೆ ಕಳುಹಿಸಲಾಗಿದೆ. ಸದ್ಯ, ಜಿಲ್ಲೆಯಲ್ಲಿ ಯಾವುದೇ ಹೊಸ ಸೋಂಕಿನ ಪ್ರಕರಣ ದಾಖಲಾಗಲಿಲ್ಲ" ಎಂದು ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಲಕ್ಸರ್ ಹೇಳಿದ್ದಾರೆ.

ಪ್ರಯಾಗರಾಜ್ ಮತ್ತು ಪ್ರತಾಪ್ ಘರ್ ಜಿಲ್ಲೆಯ ಏಳು ಸೋಂಕಿತರ ವರದಿ ನೆಗೆಟೀವ್ ಬಂದ ನಂತರ, ಈ ಎರಡು ಜಿಲ್ಲೆಗಳನ್ನೂ ಕೊರೊನಾ ಫ್ರೀ ಎಂದು ಘೋಷಿಸಲಾಗಿತ್ತು. (ಚಿತ್ರ: ANI)

English summary
Uttar Pradesh now has 5 coronavirus-free districts including Prayagraj and Pratapgarh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X