ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಚಾರ ನಿಯಮ ಉಲ್ಲಂಘನೆ; ಈಗ ದುಪ್ಪಟ್ಟು ದಂಡ ಕಟ್ಟಬೇಕು

|
Google Oneindia Kannada News

ಲಕ್ನೋ, ಜುಲೈ 31 : ಉತ್ತರ ಪ್ರದೇಶ ಸರ್ಕಾರ ಸಂಚಾರ ನಿಯಮಗಳಲ್ಲಿ ಬದಲಾವಣೆ ತಂದಿದೆ. ಹೊಸ ನಿಯಮಗಳ ಪ್ರಕಾರ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ದುಪ್ಪಟ್ಟು ದಂಡವನ್ನು ಕಟ್ಟಬೇಕಾಗುತ್ತದೆ.

ಹೆಲ್ಮೆಟ್ ಇಲ್ಲದ ಸಂಚಾರ, ನಿಷೇಧಿತ ಜಾಗದಲ್ಲಿ ವಾಹನ ನಿಲುಗಡೆ, ಕಾರಿನಲ್ಲಿ ಸೀಟ್ ಬೆಲ್ಟ್ ಇಲ್ಲದೇ ಸಂಚಾರ ನಡೆಸಿದರೆ ಭಾರಿ ಮೊತ್ತದ ದಂಡವನ್ನು ಪಾವತಿ ಮಾಡಬೇಕು. ವಾಹನಗಳ ಡಿಸೈನ್‌ಗಳನ್ನು ನಿಷೇಧಿತ ರೀತಿಯಲ್ಲಿ ಬದಲಾಯಿಸಿದರೆ 1 ಲಕ್ಷದ ತನಕ ದಂಡ ವಿಧಿಸಲಾಗುತ್ತದೆ.

ಮೈಸೂರಿನಲ್ಲೊಂದು ಸಂಚಾರಿ ಪಂಕ್ಚರ್ ಶಾಪ್ ಮೈಸೂರಿನಲ್ಲೊಂದು ಸಂಚಾರಿ ಪಂಕ್ಚರ್ ಶಾಪ್

Uttar Pradesh New Traffic Rules Ready To Pay Double Fine

ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ದಂಡದ ಮೊತ್ತವನ್ನು ಹೆಚ್ಚಳ ಮಾಡಿದೆ. ದಂಡ ಮೊತ್ತ ಹೆಚ್ಚಳದಿಂದ ನಿಯಮ ಉಲ್ಲಂಘನೆ ಪ್ರಕರಣ ಕಡಿಮೆಯಾಗಲಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

 ವೈರಲ್ ವಿಡಿಯೋ : ಸಂಚಾರಿ ಪೊಲೀಸರಿಂದ ಕೊರೊನಾ ಜಾಗೃತಿ ವೈರಲ್ ವಿಡಿಯೋ : ಸಂಚಾರಿ ಪೊಲೀಸರಿಂದ ಕೊರೊನಾ ಜಾಗೃತಿ

ದಂಡದ ವಿವರಗಳು

* ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮೊದಲ ಬಾರಿ 1 ಸಾವಿರ, 2ನೇ ಬಾರಿ 10 ಸಾವಿರ ರೂ. ದಂಡ
* ಹೆಲ್ಮೆಟ್ ಇಲ್ಲದೇ ಸಂಚಾರ ನಡೆಸಿದರೆ 500 ರೂ.
* ನಿಷೇಧಿತ ಸ್ಥಳದಲ್ಲಿ ಪಾರ್ಕಿಂಗ್ ಮೊದಲ ಬಾರಿ 500, 2ನೇ ಬಾರಿ 1,500 ರೂ.
* ಸೀಟ್ ಬೆಲ್ಟ್ ಇಲ್ಲದೇ ಸಂಚಾರ 1000 ರೂ. ದಂಡ
* ಲೈಸೆನ್ಸ್ ಇಲ್ಲದೇ ಸಂಚಾರ 5000 ರೂ. ದಂಡ
* ನಿಗದಿತ ವೇಗಕ್ಕಿಂತ ಜೋರಾಗಿ ವಾಹನ ಓಡಿಸಿದರೆ 4 ಸಾವಿರ ರೂ. ದಂಡ
* ತುರ್ತು ವಾಹನಗಳಿಗೆ ಅವಕಾಶ ಕೊಡದಿದ್ದರೆ 10 ಸಾವಿರ ರೂ. ದಂಡ

English summary
People of Uttar Pradesh ready to pay double fine if they not follow traffic rules. Government has brought new traffic fines in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X