ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ ಫಲಿತಾಂಶ : ಮೈತ್ರಿಗೆ ಹೊಡೆತ, ಬಿಜೆಪಿ ಭರ್ಜರಿ ನೆಗೆತ

|
Google Oneindia Kannada News

ಲಕ್ನೋ, ಮೇ 23 : ಲೋಕಸಭೆ ಚುನಾವಣೆ 2019ರ ಕೇಂದ್ರಬಿಂದುವಾಗಿರುವ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಭಾರೀ ಮುನ್ನಡೆ ಸಾಧಿಸಿದ್ದು, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಗಳನ್ನು ಹಿಂದಿಕ್ಕಿ ಧಾಪುಗಾಲು ಹಾಕಿದೆ.

80 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಬೆಳಿಗ್ಗೆ 9.40ರ ಹೊತ್ತಿಗೆ 50 ಕ್ಷೇತ್ರಗಳಲ್ಲಿ ಮುಂದಿದ್ದು, ಬಹುಜನ ಸಮಾಜ ಪಕ್ಷ 11ರಲ್ಲಿ ಮತ್ತು ಸಮಾಜವಾದಿ ಪಕ್ಷ 8ರಲ್ಲಿ ಮುನ್ನಡೆ ಕಂಡಿವೆ. ಕಾಂಗ್ರೆಸ್ ಕೇವಲ 1 ಕ್ಷೇತ್ರದಲ್ಲಿ ಮುನ್ನಡೆ ಕಂಡಿದೆ. ಅದು ಸೋನಿಯಾ ಗಾಂಧಿ ಪ್ರತಿನಿಧಿಸಿರುವ ರಾಯ್ ಬರೇಲಿ ಲೋಕಸಭಾ ಕ್ಷೇತ್ರ.

ಕಳೆದ 2014ರ ಚುನಾವಣೆಯಲ್ಲಿ ಬಿಜೆಪಿ 71ರಲ್ಲಿ ಗೆದ್ದು ವಿರೋಧಿಗಳಿಗೆ ಭಾರೀ ತಿರುಗೇಟು ನೀಡಿತ್ತು. ಸಮಾಜವಾದಿ ಪಕ್ಷ ಕೇವಲ 5ರಲ್ಲಿ ಮತ್ತು ಕಾಂಗ್ರೆಸ್ 2ರಲ್ಲಿ ಗೆದ್ದಿದ್ದವು. ಆದರೆ, ಬಹುಜನ ಸಮಾಜ ಪಕ್ಷ ಒಂದೂ ಸೀಟನ್ನು ಗೆದ್ದಿರಲಿಲ್ಲ.

ಈಬಾರಿ ಅಂಥ ಫಲಿತಾಂಶ ಬರುವ ಪ್ರಮೇಯವಿಲ್ಲದಿದ್ದರೂ, ವಿರೋಧಿ ಪಕ್ಷಗಳಿಗೆ ಭಾರತೀಯ ಜನತಾ ಪಕ್ಷ ಭಾರೀ ಹೊಡೆತ ನೀಡಿದೆ. ಈಗಾಗಲೆ ಅರ್ಧಶತಕ ದಾಟಿ, ಎಕ್ಸಿಟ್ ಪೋಲ್ ಫಲಿತಾಂಶಗಳಂತೆಯೇ ಫಲಿತಾಂಶ ಬರುವ ನಿರೀಕ್ಷೆ ಹೆಚ್ಚಿಸಿದೆ.

Uttar Pradesh Lok Sabha Election Results 2019

ಉತ್ತರ ಪ್ರದೇಶ ಎಲ್ಲ ಪಕ್ಷಗಳ ಪಾಲಿಗೆ ಭಾರೀ ಪ್ರತಿಷ್ಠೆಯ ರಾಜ್ಯವಾಗಿದೆ. ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ರಾಹುಲ್ ಗಾಂಧಿ ಅವರು ಈಗಾಗಲೆ ತಮ್ಮ ಪ್ರತಿಸ್ಪರ್ಧಿಸ ಸ್ಮೃತಿ ಇರಾನಿ ವಿರುದ್ಧ ಹಿನ್ನಡೆ ಕಂಡಿದ್ದಾರೆ.

English summary
Uttar Pradesh Lok Sabha Election Results 2019 : BJP has taken a huge lead against Samajwadi Party and Bahujan Samaj Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X