ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ ರಾಜ್ಯ ಬಜೆಟ್; ಟ್ಯಾಬ್ ಖರೀದಿಸಲು ಶಾಸಕರಿಗೆ ಸರ್ಕಾರದ ಸೂಚನೆ

|
Google Oneindia Kannada News

ಲಖ್ನೋ, ಫೆಬ್ರುವರಿ 06: ಕೇಂದ್ರ ಬಜೆಟ್‌ನಂತೆಯೇ ರಾಜ್ಯ ಬಜೆಟ್ ಅನ್ನು ಈ ಬಾರಿ ಕಾಗದರಹಿತ ಬಜೆಟ್ ಮಾಡುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಟ್ಯಾಬ್‌ಗಳನ್ನು ಖರೀದಿಸುವಂತೆ ಸೂಚನೆ ನೀಡಿದೆ.

"ಎಲ್ಲಾ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಐಪ್ಯಾಡ್ ಖರೀದಿಸಬೇಕು. ಆಪಲ್ ಐಪ್ಯಾಡ್ ಖರೀದಿಗಾಗಿ ಪ್ರತಿ ಸದಸ್ಯರಿಗೂ 50,000 ರೂಪಾಯಿಯನ್ನು ಮರುಪಾವತಿ ಮಾಡಲಾಗುತ್ತದೆ" ಎಂದು ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ. ರಾಜ್ಯದಲ್ಲಿ 403 ವಿಧಾನಸಭಾ ಸದಸ್ಯರು ಹಾಗೂ 100 ವಿಧಾನ ಪರಿಷತ್ ಸದಸ್ಯರಿದ್ದಾರೆ.

MSME Loan: ಸಾಲ ನೀಡುವಲ್ಲಿ ಉತ್ತರ ಪ್ರದೇಶ ರಾಜ್ಯ ಮುಂದಿದೆMSME Loan: ಸಾಲ ನೀಡುವಲ್ಲಿ ಉತ್ತರ ಪ್ರದೇಶ ರಾಜ್ಯ ಮುಂದಿದೆ

ಬಜೆಟ್ ಹಿನ್ನೆಲೆಯಲ್ಲಿ ಟ್ಯಾಬ್ ಬಳಕೆ ಕುರಿತು ಶಾಸಕರೆಲ್ಲರಿಗೂ ತರಬೇತಿ ನೀಡಲಾಗಿದೆ. ರಾಜ್ಯ ಬಜೆಟ್ ಅಧಿವೇಶನಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

Uttar Pradesh Legislators Asked To Get Tab Ahead Of State Budget Session

ಮುಂದಿನ ದಿನಗಳಲ್ಲಿ ವರ್ಚುಯಲ್ ಆಗಿ ಸಂಪುಟ ಸಭೆ ನಡೆಸುವ ಅಗತ್ಯವಿದೆ. ಹೀಗಾಗಿ ಸಚಿವರಿಗೆ ತರಬೇತಿ ನೀಡಬೇಕು ಎಂದು ಫೆಬ್ರುವರಿ 2ರಂದು ನಡೆದ ಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದರು. "ಕೆಲಸಗಳನ್ನು ಅತಿ ವೇಗವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ತಂತ್ರಜ್ಞಾನ ನೆರವಾಗುತ್ತದೆ. ಹೀಗಾಗಿ ಇ-ಸಂಪುಟ ಸಭೆಗಳಿಗೆ ಮುನ್ನ ಎಲ್ಲಾ ಸದಸ್ಯರು ತರಬೇತಿ ಪಡೆದುಕೊಳ್ಳಬೇಕು. ಈ ಮುಂದಾಳತ್ವ ಕಾಗದರಹಿತ ಸಂಪುಟ ಸಭೆ ನಡೆಸಲು ನೆರವಾಗುತ್ತದೆ" ಎಂದಿದ್ದಾರೆ.

ಫೆಬ್ರುವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ಯಾಬ್ ಬಳಸಿ ಕೇಂದ್ರ ಬಜೆಟ್ ಮಂಡಿಸಿದ್ದರು. ಹೀಗಾಗಿ ರಾಜ್ಯ ಬಜೆಟ್ ಅನ್ನೂ ಕಾಗದರಹಿತವಾಗಿ ಮಾಡಲಾಗುತ್ತದೆ ಎಂದು ಯೋಗಿ ಆದಿತ್ಯಾನಾಥ ತಿಳಿಸಿದ್ದರು. ಇದೇ ಫೆಬ್ರುವರಿ 18ರಂದು ಉತ್ತರ ಪ್ರದೇಶ ರಾಜ್ಯ ಬಜೆಟ್ ಮಂಡನೆಯಾಗಲಿದೆ.

English summary
Uttar Pradesh government has asked members of the state's legislative assembly and council to purchase tablets for a paperless budget session which will be scheduled on feb 18
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X