ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಧ್ವಜಾರೋಹಣದ ಬಳಿಕ ಇನ್ಸ್‌ಪೆಕ್ಟರ್, ಕಾನ್‌ಸ್ಟೇಬಲ್ 'ನಾಗಿನ್' ಡ್ಯಾನ್ಸ್

|
Google Oneindia Kannada News

ಪಿಲಿಭಿತ್ ಆಗಸ್ಟ್ 17: ಸ್ವಾತಂತ್ರ್ಯ ದಿನಾಚರಣೆಯಂದು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಿಂದ ಹಿಡಿದು ಪೊಲೀಸ್ ಠಾಣೆಗಳವರೆಗೆ ದೇಶಭಕ್ತಿ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಪಿಲಿಭಿತ್‌ನ ವಿಡಿಯೋವೊಂದು ಹೊರಬಿದ್ದಿದೆ. ಈ ವಿಡಿಯೋ ಪಿಲಿಭಿತ್‌ನ ಪೊಲೀಸ್ ಠಾಣೆಯದ್ದು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಇನ್ಸ್‌ಪೆಕ್ಟರ್ ಕೊತ್ವಾಲಿಯಲ್ಲಿ ಪುಂಗಿ ನುಡಿಸುವಂತೆ ಅಭಿನಯಿಸುತ್ತಾರೆ. ಹಿನ್ನಲೆಯಲ್ಲಿ 'ನಾಗಿನ್' ಸೌಂಡ್ ಕೇಳಿಸುತ್ತದೆ. ಈ ವೇಳೆ ಪೊಲೀಸ್ ಪೇದೆಯೊಬ್ಬರು ಸರ್ಪ ನೃತ್ಯವನ್ನು ಮಾಡಿದ್ದಾರೆ. ಈ ವೇಳೆ ಅಲ್ಲಿದ್ದ ಎಲ್ಲ ಪೊಲೀಸರೂ 'ನಾಗಿನ್ ಡ್ಯಾನ್ಸ್' ಎಂಜಾಯ್ ಮಾಡುತ್ತಿರುವುದು ಕಂಡು ಬಂದಿದೆ.

ಆದರೆ, ಈ ನೃತ್ಯವನ್ನು ಮಾಡಿದ ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೇಬಲ್ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಇಬ್ಬರ ಪೊಲೀಸರಿಗೆ ತರಾಟೆ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆಯನ್ನೂ ನೀಡಲಾಗಿದೆ.

 ಮಂಡ್ಯ: ಬೀಳುವ ಹಂತದಲ್ಲಿರುವ ಶಾಲಾ ಕೊಠಡಿಗಳಲ್ಲಿ ಪಾಠ, ವಿದ್ಯಾರ್ಥಿನಿಯರಿಗೆ ಆತಂಕ ಮಂಡ್ಯ: ಬೀಳುವ ಹಂತದಲ್ಲಿರುವ ಶಾಲಾ ಕೊಠಡಿಗಳಲ್ಲಿ ಪಾಠ, ವಿದ್ಯಾರ್ಥಿನಿಯರಿಗೆ ಆತಂಕ

ಧ್ವಜಾರೋಹಣದ ನಂತರ ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೇಬಲ್ ಸರ್ಪ ನೃತ್ಯ ಮಾಡಿದ್ದಾರೆಂದು ಹೇಳಲಾಗುತ್ತಿದೆ. ವಿಷಯ ಪಿಲಿಭಿತ್‌ನ ಪುರನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಆಗಸ್ಟ್ 15 ರಂದು ಅಂದರೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಧ್ವಜಾರೋಹಣ ಮಾಡಿದ ತಕ್ಷಣ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಕಾನ್‌ಸ್ಟೆಬಲ್ ಸೌರವ್ ಕುಮಾರ್ ಮತ್ತು ಕಾನ್‌ಸ್ಟೆಬಲ್ ಅನುಜ್ ಕುಮಾರ್ ನೃತ್ಯ ಮಾಡಲು ಪ್ರಾರಂಭಿಸಿದರು. ಪುಂಕಿ ನಾದದಲ್ಲಿ ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೇಬಲ್ ನಾಗಿಣಿ ನೃತ್ಯ ಮಾಡಲು ಹೆಚ್ಚಿನ ಬೆಂಬಲ ಪಡೆದಿದ್ದಾರೆ. ಅಲ್ಲಿದ್ದ ಪೊಲೀಸರು ಚಪ್ಪಾಳೆ ತಟ್ಟುವ ಮೂಲಕ ಇವರಿಬ್ಬರನ್ನು ಪ್ರೋತ್ಸಾಹಿಸಿರುವುದು ಕಂಡು ಬಂದಿದೆ. ಈ ವೇಳೆ ಸ್ಥಳದಲ್ಲಿದ್ದ ಯಾರೋ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

Uttar Pradesh: Inspector and Constable Naagin dance after flag hoisting

ತನಿಖೆಗೆ ಸೂಚನೆ

ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೇಬಲ್ ಸಮವಸ್ತ್ರದಲ್ಲಿ ಸರ್ಪ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಎಸ್ಪಿ ದಿನೇಶ್ ಪಿ ಸಂಪೂರ್ಣ ವಿಷಯ ಪರಿಶೀಲಿಸಿದ್ದಾರೆ. ಎಸ್ಪಿ ದಿನೇಶ್ ಪಿ ಇನ್ಸ್‌ಪೆಕ್ಟರ್ ಸೌರಭ್ ಕುಮಾರ್ ಮತ್ತು ಕಾನ್‌ಸ್ಟೆಬಲ್ ಅನುಜ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಇಡೀ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಪುರನ್‌ಪುರ ವೃತ್ತದ ಅಧಿಕಾರಿ ವೀರೇಂದ್ರ ವಿಕ್ರಮ್‌ ಸಿಂಗ್‌ ಅವರಿಗೆ ಎಸ್‌ಪಿ ಸೂಚನೆ ನೀಡಿದ್ದಾರೆ.

Uttar Pradesh: Inspector and Constable Naagin dance after flag hoisting

ಜನ ಹೇಳುವುದೇನು?

ಸ್ವಾತಂತ್ರ್ಯ ಸಂಭ್ರಮದಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯವಾಗಿತ್ತು. ಇದರಿಂದ ಪೊಲೀಸರು ತೊಂದರೆ ಅನುಭವಿಸಬೇಕಾಯಿತು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಜನರು ಪೊಲೀಸರ ವಿರುದ್ಧದ ಕ್ರಮವನ್ನು ಒತ್ತಾಯಿಸಿಲ್ಲ. ಇಬ್ಬರೂ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬಾರದಿತ್ತು ಎನ್ನುತ್ತಾರೆ ಕೆಲವರು.

English summary
Video of inspector and constable doing snake dance after flag hoisting in Pilibhit police station premises in Uttar Pradesh has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X