ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಕೂಟಿಯಲ್ಲಿ ಆಕ್ಸಿಜನ್ ತಲುಪಿಸಿ ಹೃದಯ ಗೆಲ್ಲುತ್ತಿದ್ದಾಳೆ ಉತ್ತರ ಪ್ರದೇಶದ ಯುವತಿ

|
Google Oneindia Kannada News

ಲಕ್ನೋ, ಮೇ 17: ಕೊರೊನಾ ವೈರಸ್‌ನ ಎರಡನೇ ಅಲೆ ದೇಶ ಹಿಂದೆಂದೂ ಎದುರಿಸಿರದಂಥ ಸ್ಥಿತಿಯನ್ನು ನೋಡುವಂತೆ ಮಾಡಿದೆ. ರೋಗಿಗಳಿಗೆ ವೈದ್ಯಕೀಯ ಸೌಲಭ್ಯಗಳು ಸೂಕ್ತ ಸಂದರ್ಭದಲ್ಲಿ ದೊರೆಯದೆ ಪ್ರಾಣಬಿಡುತ್ತಿರುವುದು ಸಾಮಾನ್ಯವಾಗಿದೆ. ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಓರ್ವ 26ರ ಹರೆಯದ ಯುವತಿಯೊಬ್ಬರು ತನ್ನ ಸ್ಕೂಟಿಯಲ್ಲಿ ಆಮ್ಲಜನಕದ ಸಿಲಿಂಡರ್ ಹಿಡಿದುಕೊಂಡು ಓಡಾಡುತ್ತಾ ಅಗತ್ಯವಿರುವವರಿಗೆ ನೀಡುತ್ತಿದ್ದಾರೆ. ಈ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ.

Recommended Video

ಸ್ಕೂಟಿಯಲ್ಲಿ ಆಮ್ಲಜನಕವನ್ನು ತಲುಪಿಸುವ ಉತ್ತರ ಪ್ರದೇಶದ ಮಹಿಳೆ | Oneindia Kannada

ಉತ್ತರ ಪ್ರದೇಶದ ಶಹಜಹನ್‌ಪುರ್‌ನ 26ರ ಹರೆಯದ ಅರ್ಶಿ ಎಂಬ ಯುವತಿ ಅಗತ್ಯವಿರುವ ಕೊರೊನಾ ರೋಗಿಗಳಿಗೆ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್‌ಅನ್ನು ತನ್ನ ದ್ವಿಚಕ್ರವಾಹನದಲ್ಲಿ ಪೂರೈಸುತ್ತಿದ್ದಾರೆ. ಈ ಸಂದರ್ಭದಲ್ಲಿ ತನ್ನ ಈ ಸಾಮಾಜಿಕ ಕಾರ್ಯದ ಹಿಂದಿರುವ ಭಾವುಕ ಕಾರಣವನ್ನು ಕೂಡ ಆ ಯುವತಿ ಹೇಳಿಕೊಂಡಿದ್ದಾರೆ.

"ನಾವು ನನ್ನ ತಂದೆಗೆ ಆಮ್ಲಜನಕದ ಸಿಲಿಂಡರ್ ಪಡೆಯಲು ಸಾಕಷ್ಟು ಕಷ್ಟ ಪಟ್ಟೆವು. ಈ ಪ್ರಯತ್ನದಲ್ಲಿ ಸರ್ಕಾರ ವೈಫಲ್ಯತೆಯನ್ನು ಕಂಡಿದೆ. ಹಾಗಾಗಿ ಈಗ ನಾನು ಇತರರ ಸಹಾಯಕ್ಕೆ ಮುಂದಾಗಿದ್ದೇನೆ. ಹೋಮ್‌ ಐಸೋಲೇಶನ್‌ನಲ್ಲಿರುವ ರೋಗಿಗಳಿಗೆ ಸರ್ಕಾರ ಆಮ್ಲಜನಕ ಪೂರೈಸುತ್ತಿಲ್ಲ" ಎಂದು ಆರ್ಶಿ ಹೇಳಿಕೆಯನ್ನು ಎಎನ್‌ಐ ಉಲ್ಲೇಖಿಸಿದೆ.

Uttar Pradesh girl delivers oxygen to Covid-19 patients on her Scooty; wins hearts

ಇನ್ನು ಎರಡು ಸಿಲಿಂಡರ್‌ಗಳನ್ನು ಸ್ವಂತವಾಗಿ ಪಡೆದುಕೊಂಡು ಈ ಈ ಕಾರ್ಯಗಳನ್ನು ಮಾಡುತ್ತಿರುವುದಾಗಿ ಆ ಯುವತಿ ಎಎನ್‌ಐಗೆ ತಿಳಿಸಿದ್ದಾರೆ. ತನ್ನ ತಂದೆ ಚೇತರಿಸಿಕೊಂಡಾಗಿನಿಂದ ಈ ಎರಡು ಸಿಲಿಂಡರ್‌ಗಳನ್ನು 18 ಬಾರಿ ತುಂಬಿಸಿಕೊಂಡಿದ್ದು ಅಗತ್ಯವಿರುವವರಿಗೆ ತನ್ನ ಸ್ಕೂಟಿಯಲ್ಲಿಯೇ ಸರಬರಾಜು ಮಾಡುತ್ತಿರುವುದಾಗಿ ಈ ಯುವತಿ ತಿಳಿಸಿದಿದ್ದಾರೆ.

ಈ ಅದ್ಭುತ ಕಾರ್ಯಕ್ಕಾಗಿ 26ರ ಹರೆಯದ ಈ ಯುವತಿ ತನ್ನಿಂದ ಸಹಾಯವನ್ನು ಪಡೆದುಕೊಂಡ ಕುಟುಂಬ ಹಾಗೂ ಕೆಲ ರಾಜಕಾರಣಿಗಳಿಂದ ಪ್ರಶಂಸೆ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.

Uttar Pradesh girl delivers oxygen to Covid-19 patients on her Scooty; wins hearts

ಮತ್ತೊಂದೆಡೆ ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಸಾವಿನ ಸಂಖ್ಯೆ ಏರಿಕೆ ಕಾಣುತ್ತಿದೆ. ಭಾನುವಾರ ಕೊರೊನಾ ವೈರಸ್‌ಗೆ 311 ಜನರು ಬಲಿಯಾಗಿದ್ದು ಒಟ್ಟಾರೆಯಾಗಿ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 17,546ಕ್ಕೆ ಏರಿಕೆಯಾಗಿದೆ. ಭಾನುವಾರ 10,682 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 16,19,645ಕ್ಕೆ ಏರಿಕೆ

English summary
Uttar Pradesh 26 year old girl Arshi delivers oxygen to Covid-19 patients on her scooty and wins hearts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X