ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಯಾವತಿಗೆ ಪರ್ಯಾಯವಾಗಿ ದಲಿತ ನಾಯಕಿಯನ್ನು ಹುಡುಕಿದ ಬಿಜೆಪಿ

|
Google Oneindia Kannada News

ಲಕ್ನೋ, ಅಕ್ಟೋಬರ್ 19: ದಲಿತ ನಾಯಕಿ ಮಾಯಾವತಿ ಮತ ಬ್ಯಾಂಕ್‌ನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಒಡೆಯಲು ಬಿಜೆಪಿ ಬೇಬಿ ರಾಣಿ ಮೂಲಕ ತಂತ್ರ ಹೆಣೆಯುತ್ತಿದೆ.

ಬೇಬಿ ರಾಣಿ ಮೌರ್ಯ ಜಾಟವ್ ಸಮುದಾಯದ ಮುಖವಾಗಿದ್ದು, ಬಿಎಸ್‌ಪಿ ಹಾಗೂ ಮಾಯಾವತಿಗೆ ಸೆಡ್ಡು ಹೊಡೆಯಲೆಂದೇ ಬಿಜೆಪಿ ರಾಷ್ಟ್ರ ಉಪಾಧ್ಯಕ್ಷರ ಹುದ್ದೆಯನ್ನು ನೀಡಲಾಗಿದೆ. ಬಿಜೆಪಿಯು ಅದೇ ನಿಟ್ಟಿನಲ್ಲಿ ಪ್ರಚಾರ ತಂತ್ರವನ್ನು ನಡೆಸುತ್ತಿದೆ.

ಯುಪಿ ಚುನಾವಣೆಯತ್ತ ಮಾಯಾವತಿ ಚಿತ್ತ: ಬಿಎಸ್‌ಪಿಯಿಂದ ಬ್ರಾಹ್ಮಣ ಸಮ್ಮೇಳನ ಯುಪಿ ಚುನಾವಣೆಯತ್ತ ಮಾಯಾವತಿ ಚಿತ್ತ: ಬಿಎಸ್‌ಪಿಯಿಂದ ಬ್ರಾಹ್ಮಣ ಸಮ್ಮೇಳನ

ಅಕ್ಟೋಬರ್ 13 ರಂದು ಬಿಜೆಪಿಯು ಜಾತಿ ಮೋರ್ಚಾವನ್ನು ನಡೆಸಿತ್ತು, ಅಂದು ಬೇಬಿ ಮೌರ್ಯ ಅವರಿಗೆ ಸನ್ಮಾನ ಮಾಡಲಾಗಿತ್ತು. ಅಂದು ಬೇಬಿ ಮೌರ್ಯ ಮಾತನಾಡಿ '' ದಲಿತರಿಗೆ ಬಿಜೆಪಿ ಬಗ್ಗೆ ಗೌರವ ಇದೆ, ಬಿಜೆಪಿಯು ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಕೂಡ ಮೇಯರ್ ಮಾಡಿದೆ. ಬಳಿಕ ರಾಜ್ಯಪಾಲ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವನ್ನು ನೀಡಿದೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 320 ಮತಗಳನ್ನು ಗಳಿಸಲು ನೆರವಾಗಬೇಕು'' ಎಂದು ಹೇಳಿದರು.

Uttar Pradesh Election: BJP Finds Dalit Face To Reach Out To Jatavs, Counter Mayawati

ಎಲ್ಲೆಡೆ ಜಾತಿ ರಾಜಕೀಯವಿದೆ, ನಮ್ಮ ಸಮುದಾಯಕ್ಕೆ ಸಹಾಯ ಮಾಡಲು ನಾವು ನಮ್ಮ ಜಾತಿಗೆ ಹೇಳಬೇಕು, ಜನರು ತಮ್ಮದೇ ನಾಯಕರೊಂದಿಗೆ ಮಾತನಾಡಲು ಬಯಸುತ್ತಾರೆ, ಜಾಟವ್ ಸಮುದಾಯದ ಬುದ್ಧಿಜೀವಿಗಳು ನನ್ನನ್ನು ಸಂಪರ್ಕಿಸುತ್ತಿದ್ದಾರೆ, ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರು.

ರಾಣಿಯವರು ರಾಜ್ಯಪಾಲರಾಗುವ ಮುನ್ನ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. 1995-2000ವರೆಗೆ ಆಗ್ರಾ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಅವರು ಆಗ್ರಾ ಜಿಲ್ಲೆಯ ಎಟ್ಮದ್‌ಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಸೋಲು ಅನುಭವಿಸಿದ್ದರು.

ಇತ್ತೀಚೆಗಷ್ಟೇ ಬಿಜೆಪಿ ಹಾಗೂ ಸಮಾಜವಾದಿ ಪಕ್ಷ ಜನರಿಗೆ ಕೇವಲ ಭರವಸೆ ನೀಡುತ್ತಿದೆ. ಆ ಭರವಸೆಯನ್ನು ಈಡೇರಿಸಲು ಯಾವುದೇ ಕ್ರಮಗಳನ್ನೂ ತೆಗೆದುಕೊಳ್ಳುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ (ಬಿಎಸ್​ಪಿ) ಅಧಿಕಾರಕ್ಕೆ ಬರಬೇಕೆಂದರೆ ದಲಿತ ಮತ್ತು ಬ್ರಾಹ್ಮಣರು ಒಗ್ಗಟ್ಟಾಗಬೇಕು.

ಈ ಚುನಾವಣೆಯಲ್ಲಿ ಬಿಎಸ್​ಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಬಿಎಸ್​ಪಿ ಅಧ್ಯಕ್ಷೆ ಮಾಯಾವತಿ ಮನವಿ ಮಾಡಿದ್ದರು.

ಉತ್ತರ ಪ್ರದೇಶದ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿಯವರನ್ನು ಬಿಎಸ್​ಪಿಯತ್ತ ಸೆಳೆಯುವ ಸಲುವಾಗಿ 1 ತಿಂಗಳಿನಿಂದ ಆಯೋಜಿಸಿರುವ ಪ್ರಬುದ್ಧ ವರ್ಗ ಸಮ್ಮೇಳನದಲ್ಲಿ ಇಂದು ಭಾಗವಹಿಸಿದ್ದ ಮಾಯಾವತಿ, ಬಿಜೆಪಿ ಮತ್ತು ಎಸ್​ಪಿ ದಲಿತರು ಹಾಗೂ ಬ್ರಾಹ್ಮಣರ ಮತಗಳನ್ನು ಪಡೆಯಲು ಏನೇನೋ ಆಮಿಷಗಳನ್ನು ಒಡ್ಡುತ್ತಿವೆ. ಆದರೆ, ಅದ್ಯಾವುದನ್ನೂ ಈಡೇರಿಸಲು ಪ್ರಯತ್ನ ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.

ಬಿಜೆಪಿ ಮತ್ತು ಎಸ್‌ಪಿಗಳಂತೆ ಬಿಎಸ್‌ಪಿ ಕೇವಲ ಭರವಸೆ ನೀಡುವ ಪಕ್ಷವಲ್ಲ. ನಾವು ಏನು ಆಶ್ವಾಸನೆ ನೀಡುತ್ತೇವೋ ಅದನ್ನು ಮಾಡಿ ತೋರಿಸುತ್ತೇವೆ. 2007ರಿಂದ 2012ರವರೆಗೆ ಉತ್ತರ ಪ್ರದೇಶದಲ್ಲಿ ಬಿಎಸ್​ಪಿ ಆಡಳಿತ ನಡೆಸಿದಾಗ ದಲಿತರ ಮತ್ತು ಬ್ರಾಹ್ಮಣರ ಭದ್ರತೆ ಹಾಗೂ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿತ್ತು ಎಂದು ಮಾಯಾವತಿ ಹೇಳಿದ್ದರು.

ನಮ್ಮ ಪಕ್ಷಕ್ಕೆ ಅಧಿಕಾರ ಸಿಕ್ಕರೆ ದಲಿತರು ಹಾಗೂ ಬ್ರಾಹ್ಮಣರ ಮೇಲಿನ ದೌರ್ಜನ್ಯದ ಪ್ರಕರಣಗಳ ತನಿಖೆಗೆ ಆದೇಶಿಸುತ್ತೇವೆ. ಹಾಗೇ, ಈ ಬಾರಿಯ ಚುನಾವಣೆಯಲ್ಲಿ ಬ್ರಾಹ್ಮಣ ಅಭ್ಯರ್ಥಿಗಳಿಗೆ ಹೆಚ್ಚು ಟಿಕೆಟ್​ಗಳನ್ನು ನೀಡುತ್ತೇವೆ ಎಂದು ಮಾಯಾವತಿ ಭರವಸೆ ನೀಡಿದ್ದರು.

ಬ್ರಾಹ್ಮಣರ ಓಲೈಕೆ: 2007 ರಲ್ಲಿ ಬ್ರಾಹ್ಮಣರ ಬೆಂಬಲದೊಂದಿಗೆ ರಾಜ್ಯದಲ್ಲಿ ಸರ್ಕಾರವನ್ನು ರಚಿಸಿದ ಬಿಎಸ್ಪಿ, ಪಕ್ಷದ ಮೊದಲ ಬ್ರಾಹ್ಮಣ ಸಭೆಯ ವ್ಯವಸ್ಥೆಗಳ ಮೇಲ್ವಿಚಾರಣೆಗೆ ನಕುಲ್ ದುಬೆ ಅವರನ್ನು ಅಯೋಧ್ಯೆಗೆ ಕಳುಹಿಸಿದೆ.

ಅಯೋಧ್ಯೆಯ ಆಯ್ಕೆಯ ಬಗ್ಗೆ ಕೇಳಿದಾಗ "ರಾಮ... ಎಲ್ಲರಿಗೂ ಸೇರಿದ್ದು" ಎಂದು ದುಬೆ ಉತ್ತರಿಸಿದ್ದಾರೆ. ನೆಲಸಮ ಮಾಡಿದ ಬಾಬರಿ ಮಸೀದಿಯ ಜಾಗದಲ್ಲಿ ನಿರ್ಮಾಣವಾಗುತ್ತಿರುವ ರಾಮ ದೇಗುಲಗದಲ್ಲಿ ಮೊದಲ ಬ್ರಾಹ್ಮಣ ಸಭೆ ನಡೆಯಲಿದೆ.

ಉತ್ತರ ಪ್ರದೇಶಕ್ಕೆ ಬ್ರಾಹ್ಮಣ ಮುಖ್ಯಮಂತ್ರಿಗಳನ್ನು ನೀಡಿರುವುದು ಅವರ ಪಕ್ಷ ಮಾತ್ರ ಎಂದು ಕಾಂಗ್ರೆಸ್ ಮುಖಂಡ ಆರಾಧನಾ ಮಿಶ್ರಾ ಹೇಳಿದ್ದಾರೆ. ಯಾವುದೇ ರಾಜಕೀಯ ಪಕ್ಷವು ಬ್ರಾಹ್ಮಣನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುತ್ತದೆಯೇ ಎಂದು ಅವರು ಕೇಳಿದ್ದಾರೆ.

ಸಮಾಜವಾದಿ ಪಕ್ಷದ (SP) ನಾಯಕ ಅಭಿಷೇಕ್ ಮಿಶ್ರಾ ಅವರ ಬೆಂಬಲದೊಂದಿಗೆ ಭಗವಾನ್ ಪರಶುರಾಮ್ ಟ್ರಸ್ಟ್, ಉತ್ತರ ಪ್ರದೇಶದ ಪ್ರತಿ ಜಿಲ್ಲೆಯಲ್ಲೂ ಪರುಶುರಾಮ ದೇವಾಲಯಗಳ ನಿರ್ಮಾಣವನ್ನು ಪ್ರಾರಂಭಿಸಿದೆ. ಪರಶುರಾಮ ಎಂಬ ಬ್ರಾಹ್ಮಣ ಸಂತನು ವಿಷ್ಣುವಿನ ಅವತಾರ ಎಂದು ನಂಬಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಳೆದ ವರ್ಷ ಪರಶುರಾಮನನ್ನು ಬ್ರಾಹ್ಮಣ ಎಂದು ಬಿಂಬಿಸಲು ಪ್ರತಿಪಕ್ಷಗಳು ಮಾಡಿದ ತಂತ್ರವನ್ನು ಟೀಕಿಸಿದರು, "ರಾಮ್ ಮತ್ತು ಪರಶುರಾಮ್ ಇಬ್ಬರೂ ವಿಷ್ಣುವಿನ ಅವತಾರಗಳು" ಎಂದು ಹೇಳಿದ್ದಾರೆ.

ಕೆಲವು ದೇವಾಲಯಗಳು ಈಗಾಗಲೇ ನಿರ್ಮಾಣವಾಗಿವೆ. ಅಲ್ಲಿ ಪುರೋಹಿತರು ವಿಧಿವಿಧಾನಗಳನ್ನು ನಡೆಸುತ್ತಿದ್ದಾರೆ ಎಂದು ಅಭಿಷೇಕ್ ಮಿಶ್ರಾ ಹೇಳಿದರು. "ಎಲ್ಲಾ ಜಿಲ್ಲೆಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದ ನಂತರ, ನಾವು ಪರಶುರಾಮನ 108 ಅಡಿ ಪ್ರತಿಮೆಯನ್ನು ನಿರ್ಮಿಸಲು ಯೋಜಿಸಿದ್ದೇವೆ." 1993 ರಲ್ಲಿ ಎಸ್‌ಪಿ ಸರ್ಕಾರವು ಪರಶುರಾಮ ಅವರ ಜನ್ಮದಿನದಂದು ರಜಾದಿನವನ್ನು ಘೋಷಿಸಿತು ಎಂದು ಅವರು ಹೇಳಿದರು.

English summary
In an attempt to reach out to Dalit voters ahead of the assembly elections, particularly those from Jatav community which forms a chunk of BSP chief Mayawati’s vote base, the ruling BJP has started projecting party national vice-president Baby Rani Maurya, a former Uttarakhand governor and Agra mayor, as its Dalit face in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X