ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಟಾರ್ಗೆಟ್ ತಲುಪಲು ತನ್ನದೇ 15 ಮಾದರಿಗಳನ್ನು ನೀಡಿದ ವೈದ್ಯ: ವೈರಲ್ ವಿಡಿಯೋ

|
Google Oneindia Kannada News

ಮಥುರಾ, ಸೆಪ್ಟೆಂಬರ್ 21: ಕೊರೊನಾ ವೈರಸ್ ಪ್ರಕರಣಗಳ ನಿರ್ವಹಣೆಯಲ್ಲಿ ವೈದ್ಯಕೀಯ ವಲಯದಲ್ಲಿ ವಿವಿಧ ರೀತಿಯ ಅವ್ಯವಹಾರಗಳು ನಡೆಯುತ್ತಿವೆ ಎಂಬ ಆರೋಪವಿದೆ. ಈ ಕಾರಣಕ್ಕಾಗಿ ಅನೇಕರು ಅನಾರೋಗ್ಯಕ್ಕೆ ಒಳಗಾಗಿದ್ದರೂ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಮತ್ತು ಆಸ್ಪತ್ರೆಗಳು ತಮ್ಮ ಗುರಿ ತಲುಪಲು ಕೋವಿಡ್ ಇಲ್ಲದವರಿಗೂ ಪಾಸಿಟಿವ್ ವರದಿ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿ ನೀಡಿರುವ ಟಾರ್ಗೆಟ್ ತಲುಪಲು ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ತಮ್ಮದೇ ಮಾದರಿಯ ವರದಿಗಳನ್ನು ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

Unlock 4.0: ತಾಜ್ ಮಹಲ್ ನಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿUnlock 4.0: ತಾಜ್ ಮಹಲ್ ನಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ

ಉತ್ತರ ಪ್ರದೇಶ ಸರ್ಕಾರವು ಕೋವಿಡ್ ಆಸ್ಪತ್ರೆಗಳು ಇಂತಿಷ್ಟು ಕೊರೊನಾ ವೈರಸ್ ತಪಾಸಣೆಯ ಮಾದರಿಗಳನ್ನು ನೀಡುವಂತೆ ಸೂಚನೆ ನೀಡಿದೆ. ಇದಕ್ಕಾಗಿ ವೈದ್ಯರೊಬ್ಬರು ತಮ್ಮದೇ 15 ಮಾದರಿಗಳನ್ನು ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದರಿಂದ ಘಟನೆ ಬೆಳಕಿಗೆ ಬಂದಿದೆ.

Uttar Pradesh: Doctor Gives Over 15 Of His Own Specimens To Complete Covid-19 Test Target

ಮಥುರಾ ಜಿಲ್ಲೆಯ ಬಾಲ್ದಿಯೋ ಟೌನ್‌ ಜಿಲ್ಲೆಯಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಡಾ. ರಾಜ್‌ಕುಮಾರ್ ಸಾರಸ್ವತ್ ಅವರಿಂದ ಆರೋಗ್ಯ ಕಾರ್ಯಕರ್ತರೊಬ್ಬರು ಮಾದರಿಗಳನ್ನು ಪಡೆದುಕೊಳ್ಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಮುಖ್ಯಮಂತ್ರಿ ಕಚೇರಿ ನಿಗದಿಪಡಿಸಿರುವ ಮಾದರಿ ಗುರಿಯನ್ನು ತಲುಪಲು ಕೋವಿಡ್ ಪರೀಕ್ಷೆಗೆ ತಮ್ಮದೇ ಮಾದರಿಗಳನ್ನು ನೀಡುತ್ತಿರುವುದನ್ನು ವೈದ್ಯರು ಒಪ್ಪಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಕೋವಿಡ್‌ ಸೋಂಕಿನಿಂದ ವೈದ್ಯರ ಸಾವು; ಗುಜರಾತ್‌ಗೆ 3ನೇ ಸ್ಥಾನಕೋವಿಡ್‌ ಸೋಂಕಿನಿಂದ ವೈದ್ಯರ ಸಾವು; ಗುಜರಾತ್‌ಗೆ 3ನೇ ಸ್ಥಾನ

Recommended Video

Bangalore ಇನ್ನೂ ಕೆಲವು ದಿನ ಮಳೆ ಮುಂದುವರೆಯಲಿದೆ | Oneindia Kannada

ಒಬ್ಬರೇ ವ್ಯಕ್ತಿ ಇಷ್ಟೊಂದು ಮಾದರಿಗಳನ್ನು ನೀಡುವುದು ನಿಮಗೆ ಮುಂದೆ ತೊಂದರೆ ಉಂಟಾಗಬಹುದು ಎಂದು ಅಲ್ಲಿದ್ದ ವ್ಯಕ್ತಿಯೊಬ್ಬರು ಎಚ್ಚರಿಕೆ ನೀಡುತ್ತಾರೆ. ವೈದ್ಯರಿಂದ ಸಂಗ್ರಹಿಸಿದ ಮಾದರಿಗಳನ್ನು ಸುಳ್ಳು ಹೆಸರುಗಳಲ್ಲಿ ಪರೀಕ್ಷೆಗೆ ರವಾನಿಸಲಾಗುತ್ತದೆ ಎನ್ನುವುದು ಇದರಿಂದ ಗೊತ್ತಾಗಿದೆ.

English summary
Uttar Pradesh: A Mathura doctor's video goes viral after he gives over 15 of his own samples for COVID-19 test to complete target set by CM office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X