ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುದ್ದಿಸಂಸ್ಥೆಯ ಪತ್ರಕರ್ತನಿಗೆ ಅಶ್ಲೀಲ ಪದ ಬಳಸಿ ನಿಂದಿಸಿದರೇ ಯೋಗಿ ಆದಿತ್ಯನಾಥ್?

|
Google Oneindia Kannada News

ಲಕ್ನೋ, ಏಪ್ರಿಲ್ 5: ಸೋಮವಾರ ಬೆಳಿಗ್ಗೆ ಕೊರೊನಾ ವೈರಸ್ ಲಸಿಕೆ ಪಡೆದುಕೊಂಡ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಎಎನ್‌ಐ ಸುದ್ದಿಸಂಸ್ಥೆಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಅಸಭ್ಯ ಪದ ಬಳಸಿದ್ದರು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯೋಗಿ ಅವರ ಪದ ಪ್ರಯೋಗ ಖಂಡನೆಗೆ ಒಳಗಾಗಿದೆ. ಜತೆಗೆ ಅವರ ರಾಜಕೀಯ ವಿರೋಧಿಗಳು, ಸನ್ಯಾಸಿಯ ವೇಷ ಧರಿಸಿರುವ ಯೋಗಿಯ ನಿಜವಾದ ಮುಖವಿದು ಎಂದು ಟೀಕಿಸಿದ್ದಾರೆ.

ತನ್ನ ವಿರುದ್ಧದ ಪ್ರಕರಣಗಳನ್ನು ಒಂದೊಂದಾಗಿ ರದ್ದುಪಡಿಸಿಕೊಳ್ಳುತ್ತಿದ್ದಾರೆ ಯೋಗಿ: ಬಿಎಸ್‌ಪಿ ಸಂಸದತನ್ನ ವಿರುದ್ಧದ ಪ್ರಕರಣಗಳನ್ನು ಒಂದೊಂದಾಗಿ ರದ್ದುಪಡಿಸಿಕೊಳ್ಳುತ್ತಿದ್ದಾರೆ ಯೋಗಿ: ಬಿಎಸ್‌ಪಿ ಸಂಸದ

ಲಸಿಕೆ ಪಡೆದುಕೊಂಡ ಬಳಿಕ ಎಎನ್‌ಐ ಸುದ್ದಿಸಂಸ್ಥೆಯ ಮುಂದೆ ಮಾತನಾಡಿದ್ದರು. ಆಗ 'ದೇಶದ ವಿಜ್ಞಾನಿಗಳಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ' ಎಂದು ಹೇಳುವಾಗ ಕೊಠಡಿಯಲ್ಲಿ ಏನೋ ತೊಂದರೆ ಉಂಟಾಯಿತು. ಕೂಡಲೇ ಯೋಗಿ ತಮ್ಮ ಧ್ವನಿಯನ್ನು ತಗ್ಗಿಸಿ, 'ಕ್ಯಾ ಕರ್ತೆ ಹೋ ಚು*** ಕಾ' ಎಂದಿದ್ದಾರೆ. ಅಲ್ಲಿಗೆ ವಿಡಿಯೋ ಅಂತ್ಯಗೊಂಡಿದೆ.

ಇದು ವ್ಯಾಪಕ ಟೀಕೆಗೆ ಒಳಗಾಗಿದೆ. ಎಎನ್‌ಐ ಕ್ಯಾಮೆರಾಮ್ಯಾನ್‌ಗೆ ಯೋಗಿ ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, 'ಮಾನ್ಯವರ್ ಅವರಿಂದ ಪತ್ರಕರ್ತರಿಗೆ ಬಂದ ಸಿಹಿ ನುಡಿಗಳನ್ನು ಆಲಿಸಿ. ಆದರೆ ಹೆಡ್‌ಫೋನ್ ಬಳಸಿ ಮತ್ತು ಮಕ್ಕಳಿಂದ ದೂರವಿರಿ' ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಅವರು ವಿಡಿಯೋವನ್ನು ಹಂಚಿಕೊಂಡಿಲ್ಲ.

Uttar Pradesh CM Yogi Adityanath Seen Abusing In Video, Govt Claims Fake One

ಈ ವಿಡಿಯೋ ಸತ್ಯವಲ್ಲ. ಅದರಲ್ಲಿನ ಧ್ವನಿಯನ್ನು ಎಡಿಟ್ ಮಾಡಲಾಗಿದೆ ಎಂದು ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ಹೇಳಿದ್ದಾರೆ. 'ನಾವು ನೈಜ ವಿಡಿಯೋ ಪೋಸ್ಟ್ ಮಾಡಿದ್ದೆವು. ಅವರು ಆ ರೀತಿ ಹೇಳಿಯೇ ಇಲ್ಲ. ಅದನ್ನು ಯಾರೋ ತಿದ್ದಿದ್ದಾರೆ' ಎಂದು ಅವರು ಹೇಳಿದ್ದಾರೆ.

ಯೋಗಿ ಅವರು ಮಾತನಾಡಿದ ಮತ್ತೊಂದು ಸಂಪೂರ್ಣ ವಿಡಿಯೋವನ್ನು ಎಎನ್‌ಐ ಹಂಚಿಕೊಂಡಿದೆ. ಆದರೆ ಯೋಗಿ ಅಸಭ್ಯ ಪದ ಬಳಸಿದ ಬಳಿಕ ಇದನ್ನು ರೀಶೂಟ್ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.

English summary
A video of Uttar Pradesh CM Yogi Adityanath is being circulated in social media. In which Yogi seen abusing the cameraman using explicitive words.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X