• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉ.ಪ್ರದೇಶ ಉಪ ಚುನಾವಣೆ: 7 ಸ್ಥಾನಗಳಲ್ಲಿ 6 ಬಿಜೆಪಿ ಪಾಲು

|

ಲಕ್ನೋ, ನವೆಂಬರ್ 11: ಉತ್ತರ ಪ್ರದೇಶದಲ್ಲಿ ಉಪ ಚುನಾವಣೆಯ ಫಲಿತಾಂಶ ಲಭ್ಯವಾಗಿದ್ದು, ಏಳು ಸ್ಥಾನಗಳ ಪೈಕಿ 6 ಸ್ಥಾನವನ್ನು ಬಿಜೆಪಿ ಗಳಿಸಿದರೆ ಒಂದು ಸ್ಥಾನವನ್ನು ಸಮಾಜವಾದಿ ಪಕ್ಷ ಪಡೆಯುವಲ್ಲಿ ಯಶಸ್ವಿಯಾಗಿದೆ.

ಕೊರೊನಾ ಸಾಂಕ್ರಾಮಿಕದ ನಡುವೆ ಬಿಹಾರ ವಿಧಾನಸಭೆಯ ಎರಡನೇ ಹಂತದ ಮತದಾನದ ದಿನವೇ ಉತ್ತರ ಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು.

ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಎನ್‌ಡಿಎ

ಅವುಗಳಲ್ಲಿ ಆರು ಕ್ಷೇತ್ರಗಳಾದ ಅಮ್ರೊಹಾದಲ್ಲಿ ನೌಗಾಂವ್ ಸಡಟ್, ಫಿರೋಜಾಬಾದ್ ನಲ್ಲಿ ಬುಲಂದ್ ಶೆಹೆರ್, ಟುಂಡ್ಲಾ, ಕಾನ್ಪುರ ಡೆಹಟ್ ನಲ್ಲಿ ಘಟಂಪುರ್, ಉನ್ನಾವೊದಲ್ಲಿ ಬಂಗರ್ಮೌ ಮತ್ತು ಡಿಯೊರಿಯಾ ಸಡರ್ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಜೌನ್ಪುರದ ಮಲ್ಹಾನಿ ಕ್ಷೇತ್ರ ಸಮಾಜವಾದಿ ಪಕ್ಷದ ಪಾಲಾಗಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ತೀರ್ಪಾಗಿ ನಡೆದ ಏಳು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆರು ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದ್ದು, ಒಂದು ಸ್ಥಾನ ಮಾತ್ರ ಸಮಾಜವಾದಿ ಪಕ್ಷದ ಪಾಲಾಗಿದೆ. ಕಣದಲ್ಲಿದ್ದ ಬಿಎಸ್ ಪಿ ಮತ್ತು ಕಾಂಗ್ರೆಸ್ ಗೆ ಒಂದು ಸ್ಥಾನ ಕೂಡ ಬಂದಿಲ್ಲ.

ಬಿಜೆಪಿ ಅಭ್ಯರ್ಥಿ ಸಂಗೀತಾ ಚೌಹಾಣ್ ನೌಗಾಂವ್ ಸಾದತ್, ಬುಲಂದ್‌ಶೆಹರ್‌ನಲ್ಲಿ ಉಷಾ ಸಿರೋಹಿ, ಟುಂಡ್ಲಾದಲ್ಲಿ ಪ್ರೇಮ್ ಪಾಲ್ ಧಂಗರ್, ಬಂಗಾರ್‌ಮಾವಿನಲ್ಲಿ ಶ್ರೀಕಾಂತ್ ಕಾಟಿಯಾರ್,ಡಿಯೋರಿಯಾದಲ್ಲಿ ಸತ್ಯ ಪ್ರಕಾಶ್ ಮಾನಿ ತ್ರಿಪಾಠಿ, ಘಟಂಪುರದಲ್ಲಿ ಉಪೇಂದ್ರನಾಥ್ ಪಾಸ್ವಾನ್ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಸುದೀರ್ಘ ಸಮಯದವರೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕೊನೆಗೂ ಮುಕ್ತಾಯವಾಗಿದ್ದು, ಜೆಡಿಯು-ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮ್ಯಾಜಿಕ್ ಸಂಖ್ಯೆಯ ಗಡಿ ದಾಟುವ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸುವ ಅವಕಾಶ ಪಡೆದಿದೆ.

ಆಡಳಿತಾರೂಢ ಎನ್‌ಡಿಎ ವಿರುದ್ಧದ ಅಲೆ, ನಿರುದ್ಯೋಗದ ಸಮಸ್ಯೆ ಮುಂತಾದವು ಜೆಡಿಯು-ಬಿಜೆಪಿ ಮೈತ್ರಿಕೂಟಕ್ಕೆ ಮುಳುವಾಗಲಿದೆ ಎಂದು ನಂಬಲಾಗಿತ್ತು. ಆದರೆ ಮತದಾರರು ಎನ್‌ಡಿಎಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಈ ಮೂಲಕ ಬಿಹಾರದಲ್ಲಿ ಅಧಿಕಾರಕ್ಕೇರುವ ತೇಜಸ್ವಿ ಯಾದವ್ ನೇತೃತ್ವದ ಮಹಾ ಘಟಬಂಧನದ ಕನಸು ನುಚ್ಚುನೂರಾಗಿದೆ.

English summary
Uttar Pradesh by election result 2020 Highlights: The fight is between the Bharatiya Janata Party (BJP), Samajwadi Party (SP) and Bahujan Samajwadi Party (BSP). Bhim Army chief Chandrashekhar Azad's Azad Samaj Party has also fielded its candidate, Mohammad Yameen, in Bulandshahr to test its electoral popularity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X