ಉತ್ತರಪ್ರದೇಶ ಉಪಚುನಾವಣೆ: ಬಿಜೆಪಿಗೆ ಆರಂಭಿಕ ಮುನ್ನಡೆ
ಬಿಜೆಪಿ ಭದ್ರಕೋಟೆ ಉತ್ತರ ಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ.
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ: ಇಲ್ಲಿದೆ ಕ್ಷಣಕ್ಷಣದ ಮಾಹಿತಿ
ಮತ ಎಣಿಕೆ ಆರಂಭವಾಗಿ ಎರಡು ಗಂಟೆಗಳಲ್ಲಿ ಬಂದಿರುವ ಆರಂಭಿಕ ಫಲಿತಾಂಶದ ಪ್ರಕಾರ. ಏಳು ಕ್ಷೇತ್ರಗಳ ಪೈಕಿ ಬಿಜೆಪಿ ಐದರಲ್ಲಿ ಮುನ್ನಡೆ ಸಾಧಿಸಿದೆ.
ಭಗವಂತ ಹನುಮಾನ್ ನಿಂದ ಕಮಲ್ ನಾಥ್ಗೆ ನ್ಯಾಯ: ದಿಗ್ವಿಜಯ ಸಿಂಗ್
ಭುಲಂದ್ ಶಹರ್, ತುಂಡ್ಲಾ, ಬಂಗೇರ್ಮಾ, ಘಾತಮ್ಪುರ್, ದಿಯೋರಿಯಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ನಗುವಾನಾ ಸಾದತ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಮಲ್ಹಾನಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಉತ್ತರ ಪ್ರದೇಶ ಉಪಚುನಾವಣೆ ಮತದಾನವನ್ನು ಬಿಹಾರ ವಿಧಾನಸಭೆ ಮತದಾನದಂತೆ ನಡೆಸಲಾಗಿತ್ತು. ಇಂದು ಮತ ಎಣಿಕೆ ನಡೆಯುತ್ತಿದೆ.
ಆರ್. ಆರ್. ನಗರ, ಶಿರಾ ಉಪ ಚುನಾವಣೆ ಫಲಿತಾಂಶ
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಪಚುನಾವಣೆ ಮತ ಎಣಿಕೆ ಇಂದು ನಡೆಯುತ್ತಿದೆ. ಜೊತೆಗೆ ಬಿಹಾರ ವಿಧಾನಸಭೆ ಚುನಾವಣೆ ಮತ ಎಣಿಕೆ ಸಹ ನಡೆಯುತ್ತಿದೆ.