ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ ಪೊಲೀಸ್ ಸಾವಿನ ಪ್ರಕರಣ ಹೊಸ ತಿರುವಿನತ್ತ!

|
Google Oneindia Kannada News

ಲಕ್ನೋ, ಡಿಸೆಂಬರ್ 04: ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಮೃತರಾದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಕುರಿತು ಆಘಾತಕಾರಿ ಮಾಹಿತಿಯೊಂದು ಲಭ್ಯವಾಗಿದೆ.

ಹಿಂಸಾಚಾರದ ವೇಳೆ ಇನ್‌ಸ್ಪೆಕ್ಟರ್ ಹತ್ಯೆ: ಹಿಂದೂ ಸಂಘಟನೆ ಮುಖಂಡರ ಬಂಧನ ಹಿಂಸಾಚಾರದ ವೇಳೆ ಇನ್‌ಸ್ಪೆಕ್ಟರ್ ಹತ್ಯೆ: ಹಿಂದೂ ಸಂಘಟನೆ ಮುಖಂಡರ ಬಂಧನ

ಈ ಮೂಲಕ ಬುಲಂದ್ ಶಹರ್ ಹಿಂಸಾಚಾರ ಹೊಸ ರೂಪ ಪಡೆದುಕೊಂಡಿದೆ. 2015 ರಲ್ಲಿ ನಡೆದ ಅಖ್ಲಾಕ್ ಪ್ರಕರಣದಲ್ಲಿ ಗೋಹತ್ಯೆಯ ವದಂತಿಯ ಮೇಲೆ ವ್ಯಕ್ತಿಯೊಬ್ಬನ್ನನ್ನು ಹೊಡೆದು ಕೊಲ್ಲಲಾಗಿತ್ತು. ಸೋಮವಾರ ಮೃತರಾದ ಸುಬೋಧ್ ಅವರು ‌2015 ರಲ್ಲಿ ನಡೆದ ಈ ಪ್ರಕರಣದ ತನಿಖೆ ನಡಸುತ್ತಿದ್ದ ಅಧಿಕಾರಿಗಳಲ್ಲೊಬ್ಬರಾಗಿದ್ದರು. ಅವರ ಸಾವಿಗೂ ಇದಕ್ಕೂ ಏನಾದರೂ ಸಂಬಂದವಿದೆಯೇ ಎಂಬ ಬಗ್ಗೆ ಇದೀಗ ಅನುಮಾನ ವ್ಯಕ್ತವಾಗಿದೆ.

ಕೋಮು ಹಿಂಸೆಯೇ ನಮ್ಮಪ್ಪನ ಜೀವ ಕಿತ್ತುಕೊಂಡಿತು: ಪುತ್ರನ ಭಾವುಕ ನುಡಿ ಕೋಮು ಹಿಂಸೆಯೇ ನಮ್ಮಪ್ಪನ ಜೀವ ಕಿತ್ತುಕೊಂಡಿತು: ಪುತ್ರನ ಭಾವುಕ ನುಡಿ

ಅಖ್ಲಾಕ್ ಪ್ರಕರಣವನ್ನು ತನಿಕೆ ನಡೆಸುತ್ತಿದ್ದ ಇವರನ್ನು ದಾದ್ರಿಯಿಂದ ವಾರಣಾಸಿಗೆ ವರ್ಗಾವಣೆ ಮಾಡಲಾಗಿತ್ತು. ನಂತರ ಬುಲಂದ್ ಶಹರ್ ಗೆ ಅಧಿಕಾರಿಯಾಗಿ ಅವರು ಬಂದಿದ್ದರು.

Uttar Pradesh: Bulandshahr violence taking a new twist

ಅಕ್ರಮ ಕಸಾಯಿ ಖಾನೆಗಳು ನಡೆಯುತ್ತಿವೆ ಎಂದು ಆರೋಪಿಸಿ, ಅದರ ವಿರುದ್ಧ ಬುಲಂದ್ ಶಹರ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಸುಬೋಧ್ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಹಿಂದು ಸಂಘಟನೆ ಬಜರಂಗ ದಳದ ಜಿಲ್ಲಾ ಮುಖಂಡರೊಬ್ಬರನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ : ಪ್ರತಿಭಟನೆ ವೇಳೆ ಹಿಂಸಾಚಾರ, ಪೊಲೀಸ್ ಸಾವು ಉತ್ತರ ಪ್ರದೇಶದ : ಪ್ರತಿಭಟನೆ ವೇಳೆ ಹಿಂಸಾಚಾರ, ಪೊಲೀಸ್ ಸಾವು

ಬುಲಂದ್ ಶಹರ್ ನಲ್ಲಿ ಇಂದು ಸಹ ಪ್ರತಿಭಟನೆ ಮುಂದುವರಿದಿದ್ದು, ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

English summary
Police inspector Subodh Kumar Singh, who was killed in a violent clash between the police and protesters in Bulandshahr district of Uttar Pradesh, was the investigating officer of the Akhlaq lynching case in 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X