ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶ, ಮುಂದಿನ ಅಸೆಂಬ್ಲಿ ಚುನಾವಣೆ: ಹಸ್ತರೇಖೆ ನೋಡಿ ನುಡಿದ ಭವಿಷ್ಯ

|
Google Oneindia Kannada News

ದೇಶದಲ್ಲಿ ಅತಿಹೆಚ್ಚು ಸಂಸದರನ್ನು ಹೊಂದಿರುವ ಉತ್ತರಪ್ರದೇಶದಲ್ಲಿ 2022ರಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಮುಂದಿನ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎನ್ನುವುದರ ಬಗ್ಗೆ ಈಗಲೇ ಒಬ್ಬರು ಭವಿಷ್ಯ ನುಡಿದಿದ್ದಾರೆ.

2017ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಶೇ. 48.7 ಮತಗಳ ಮೂಲಕ 325 ಸೀಟನ್ನು ಗೆದ್ದಿತ್ತು. ಇನ್ನು, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಶೇ. 21.8 ಮತಗಳ ಮೂಲಕ 47 ಸೀಟನ್ನು, ಶೇ. 22.2 ಮತಗಳ ಮೂಲಕ ಮಾಯಾವತಿಯ ಬಿಎಸ್ಪಿ 19 ಸೀಟನ್ನು ಪಡೆದಿತ್ತು.

ಭಾನುವಾರ (ಮಾರ್ಚ್ 15) ನವದೆಹಲಿಯಿಂದ ಲಕ್ನೋಗೆ ಹಿಂದಿರುಗಿ ಹೋಗುತ್ತಿದ್ದ ವೇಳೆ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕೆಲವು ದಿನಗಳ ಹಿಂದೆ, ಜ್ಯೋತಿಷಿಯೊಬ್ಬರು ತಮ್ಮನ್ನು ಭೇಟಿಯಾಗಿದ್ದ ವಿಚಾರವನ್ನು ಖುದ್ದು, ಅಖಿಲೇಶ್ ಮಾಧ್ಯಮಗಳಿಗೆ ವಿವರಿಸಿದ್ದಾರೆ.

ಸಾಯುವುದಕ್ಕಾಗಿಯೇ ಮನೆಯಿಂದ ಹೊರ ಬರುವ ಜನರನ್ನು ಹೇಗೆ ಬದುಕಿಸುವುದು?ಸಾಯುವುದಕ್ಕಾಗಿಯೇ ಮನೆಯಿಂದ ಹೊರ ಬರುವ ಜನರನ್ನು ಹೇಗೆ ಬದುಕಿಸುವುದು?

"ಸುಳ್ಳನ್ನು ಹೇಳಿ ಬಿಜೆಪಿ ಮುನ್ನೂರಕ್ಕೂ ಹೆಚ್ಚು ಸೀಟನ್ನು ಗೆಲ್ಲಬಹುದಾದರೆ, ಶ್ರಮವಹಿಸಿ ಕೆಲಸ ಮಾಡುತ್ತಿರುವ ಸಮಾಜವಾದಿ ಪಕ್ಷ ಯಾಕೆ, 350 ಸೀಟನ್ನು ಗೆಲ್ಲಲಾಗುವುದಿಲ್ಲ" ಎನ್ನುವ ವಿಶ್ವಾಸದ ಮಾತನ್ನು ಅಖಿಲೇಶ್ ಯಾದವ್ ಆಡಿದ್ದಾರೆ.

ನನ್ನ ಪಕ್ಕ ಜ್ಯೋತಿಷಿಯೊಬ್ಬರು ಕೂತಿದ್ದರು

ನನ್ನ ಪಕ್ಕ ಜ್ಯೋತಿಷಿಯೊಬ್ಬರು ಕೂತಿದ್ದರು

"ದೆಹಲಿಗೆ ವಿಮಾನದಲ್ಲಿ ತೆರಳುತ್ತಿದ್ದೆ. ನನ್ನ ಪಕ್ಕ ಜ್ಯೋತಿಷಿಯೊಬ್ಬರು ಕೂತಿದ್ದರು. ನಿಮ್ಮ ಹಸ್ತರೇಖೆಯನ್ನು ನೋಡಬಹುದೇ ಎಂದು ಕೇಳಿದರು. ನನ್ನ ಕೈಯನ್ನು ವಿವರವಾಗಿ ಪರಿಶೀಲಿಸಿದ ಜ್ಯೋತಿಷಿ, ಸಮಾಜವಾದಿ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ" ಎಂದು ಅವರು ಹೇಳಿದ್ದಾರೆಂದು ಅಖಿಲೇಶ್ ಯಾದವ್, ಮಾಧ್ಯಮದ ಮುಂದೆ ವಿವರಿಸಿದ್ದಾರೆ.

350 ಸೀಟನ್ನು ಗೆಲ್ಲಬಹುದು ಎಂದು ಜ್ಯೋತಿಷಿಗಳು ಹೇಳಿದ್ದಾರೆ

350 ಸೀಟನ್ನು ಗೆಲ್ಲಬಹುದು ಎಂದು ಜ್ಯೋತಿಷಿಗಳು ಹೇಳಿದ್ದಾರೆ

"2022ರ ಚುನಾವಣೆಯಲ್ಲಿ ನಿಮಗೆ ಉಜ್ವಲ ಭವಿಷ್ಯವಿದೆ. ನೀವು ಮತ್ತು ನಿಮ್ಮ ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ಪ್ರಚಾರ ಕಾರ್ಯವನ್ನು ನಡೆಸಿದರೆ, 350 ಸೀಟನ್ನು ಗೆಲ್ಲಬಹುದು ಎಂದು ಜ್ಯೋತಿಷಿಗಳು ಹೇಳಿದ್ದಾರೆ. ನಾನು ಕೂಡಾ ಅದೇ ಸಂಕಲ್ಪವನ್ನು ಮಾಡಿದ್ದೇನೆ" ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಬಿಜೆಪಿ ಶಾಸಕರ ಸಭೆಯಲ್ಲಿ ಭಾಗವಹಿಸಿದ್ದ ಪ್ರಲ್ಹಾದ್ ಜೋಶಿ? 'ಅತೃಪ್ತ ಆತ್ಮಗಳು' ಎಂದಿದ್ದು ಯಾರಿಗೆ?ಬಿಜೆಪಿ ಶಾಸಕರ ಸಭೆಯಲ್ಲಿ ಭಾಗವಹಿಸಿದ್ದ ಪ್ರಲ್ಹಾದ್ ಜೋಶಿ? 'ಅತೃಪ್ತ ಆತ್ಮಗಳು' ಎಂದಿದ್ದು ಯಾರಿಗೆ?

ಯೋಗಿ ಆದಿತ್ಯನಾಥ್ ಸರಕಾರ ತೀರಾ ಹಿಂದೆ ಬಿದ್ದಿದೆ, ಅಖಿಲೇಶ್ ಯಾದವ್

ಯೋಗಿ ಆದಿತ್ಯನಾಥ್ ಸರಕಾರ ತೀರಾ ಹಿಂದೆ ಬಿದ್ದಿದೆ, ಅಖಿಲೇಶ್ ಯಾದವ್

"ಕೇಂದ್ರ ಸರಕಾರ ಜಾತಿವಾರು ಜನಗಣತಿ ನಡೆಸದೇ ಇದ್ದಲ್ಲಿ, 2022ರ ಅಸೆಂಬ್ಲಿ ಚುನಾವಣೆಯಲ್ಲಿ ನಾವು ಗೆದ್ದಮೇಲೆ ಸೆನ್ಸಸ್ ನಡೆಸುತ್ತೇವೆ. ಬಿಜೆಪಿಗೆ ಈ ದೇಶದ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ತೀರಾ ಹಿಂದೆ ಬಿದ್ದಿದೆ" ಎಂದು ಅಖಿಲೇಶ್ ಯಾದವ್ ಟೀಕಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮೋದಿ ಹವಾ

ಲೋಕಸಭಾ ಚುನಾವಣೆಯಲ್ಲಿ ಮೋದಿ ಹವಾ

2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಎಂಬತ್ತು ಕ್ಷೇತ್ರಗಳ ಪೈಕಿ ಬಿಜೆಪಿ 62, ಬಹುಜನ ಸಮಾಜಪಕ್ಷ ಹತ್ತು, ಸಮಾಜವಾದಿ ಪಕ್ಷ ಐದು, ಅಪ್ನಾ ದಳ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿತ್ತು. ಇನ್ನು ಅಸೆಂಬ್ಲಿ (2017) ಚುನಾವಣೆಯಲ್ಲಿ ಬಿಜೆಪಿ 312, ಬಿಎಸ್ಪಿ 19, ಎಸ್ಪಿ 47 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು.

English summary
Uttar Pradesh Assembly Election In 2022: What Palm Reader Said To Akhilesh Yadav
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X