ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'2 ನೇ ಕೋವಿಡ್‌ ಅಲೆಯನ್ನು ಯುಪಿ ನಿರ್ವಹಿಸಿದ ರೀತಿಗೆ ಬೇರೆ ಸರಿಸಾಟಿಯಿಲ್ಲ ': ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಜು.15: ಉತ್ತರಪ್ರದೇಶದಲ್ಲಿ ಎರಡನೇ ಕೋವಿಡ್‌ ಅಲೆಯ ಸಂದರ್ಭದಲ್ಲಿ ಕೋವಿಡ್ ಪ್ರಕರಣಗಳನ್ನು ನಿರ್ವಹಣೆಯನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೋವಿಡ್‌ ಪ್ರಕರಣಗಳನ್ನು ಉತ್ತರ ಪ್ರದೇಶ ನಿರ್ವಹಿಸಿರುವ ರೀತಿ "ಸಾಟಿಯಿಲ್ಲದ್ದು" ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಿಗ್ಗೆ ತಮ್ಮ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ ಸಂದರ್ಭ ಈ ಬಗ್ಗೆ ಮಾತನಾಡಿದರು. ''ಎರಡನೇ ಅಲೆಯ ಉತ್ತುಂಗದ ಸಂದರ್ಭ ಪ್ರತಿದಿನ 30,000 ಹೊಸ ಪ್ರಕರಣಗಳು ದಾಖಲಾಗಿದೆ. ಆದರೆ ಉತ್ತರ ಪ್ರದೇಶವು ವೈರಸ್ ವಿರುದ್ದ ಸಮರ್ಥವಾಗಿ ಹೋರಾಡಿದೆ, ಸಾಂಕ್ರಾಮಿಕ ರೋಗದ ನಿರ್ವಹಣೆ ಪ್ರಶಂಸೆಗೆ ಅರ್ಹವಾಗಿದೆ," ಎಂದು ಪ್ರಧಾನಿ ಹೇಳಿದರು.

ಕೊರೊನಾ ಏರಿಕೆ; 8 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದಕೊರೊನಾ ಏರಿಕೆ; 8 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದ

"ಯುಪಿ ಎದ್ದುನಿಂತು ವೈರಸ್ ವಿರುದ್ದ ಸಮರ್ಥವಾಗಿ ಹೋರಾಡಿದೆ. ಭಾರತದ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದರೂ ಸಾಂಕ್ರಾಮಿಕ ರೋಗವನ್ನು ಉತ್ತರ ಪ್ರದೇಶವು ನಿಭಾಯಿಸಿದ ಮತ್ತು ನಿಯಂತ್ರಿಸಿದ ರೀತಿ ಪ್ರಶಂಸೆಗೆ ಅರ್ಹವಾಗಿದೆ. ಕೋವಿಡ್‌ ಎರಡನೇ ಅಲೆಯನ್ನು ಯುಪಿ ನಿರ್ವಹಿಸಿದ ರೀತಿಗೆ ಬೇರೆ ಸರಿಸಾಟಿಯಿಲ್ಲ," ಎಂದು ಪ್ರಧಾನಿ ಶ್ಲಾಘಿಸಿದರು.

UPs Handling Of 2nd Covid Wave Unparalleled: PM Modi In Varanasi

ಇದೇ ವೇಳೆ ರಾಜ್ಯದ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಪ್ರಧಾನಿ, "ಉತ್ತರಪ್ರದೇಶದಲ್ಲಿ ದೇಶದಲ್ಲಿ ಗರಿಷ್ಠ ಸಂಖ್ಯೆಯ ಲಸಿಕೆ ನೀಡಲಾಗಿದೆ" ಎಂದರು. ಕೇಂದ್ರದ ಕೋವಿನ್ ಪ್ಲಾಟ್‌ಫಾರ್ಮ್‌ನ ದತ್ತಾಂಶದ ಪ್ರಕಾರ ಯುಪಿ ಈವರೆಗೆ 3.89 ಕೋಟಿ ಕೋವಿಡ್‌ ಡೋಸ್‌ಗಳನ್ನು ನೀಡಿದೆ.

ಕಳೆದ ತಿಂಗಳು ಆಕ್ಸ್‌ಫರ್ಡ್ ಎಕನಾಮಿಕ್ಸ್‌ನ ವರದಿಯ ಪ್ರಕಾರ ಇತರ (ಸಣ್ಣ) ರಾಜ್ಯಗಳಿಗಿಂತ ಭಿನ್ನವಾಗಿ, ಯುಪಿ ಇನ್ನೂ "ಸುರಕ್ಷಿತ ಮಟ್ಟವನ್ನು" ತಲುಪಿಲ್ಲ. ಅಂದರೆ, ಇಲ್ಲಿ ಜನಸಂಖ್ಯೆಯ ಕನಿಷ್ಠ 30 ಪ್ರತಿಶತದಷ್ಟು ಜನರು ಎರಡೂ ಪ್ರಮಾಣಗಳನ್ನು ಪಡೆದಿದ್ದಾರೆ.

'ಮಾರುಕಟ್ಟೆ, ಗಿರಿಧಾಮದಲ್ಲಿ ಜನರು ಮಾಸ್ಕ್‌ ಧರಿಸದಿರುವುದು ಕಳವಳಕಾರಿ': ಮೋದಿ'ಮಾರುಕಟ್ಟೆ, ಗಿರಿಧಾಮದಲ್ಲಿ ಜನರು ಮಾಸ್ಕ್‌ ಧರಿಸದಿರುವುದು ಕಳವಳಕಾರಿ': ಮೋದಿ

"ಈ ಪ್ರಯತ್ನದ ಸಮಯದಲ್ಲಿ ಸಹಾಯ ಮಾಡಿದ ಎಲ್ಲಾ ಕೊರೊನಾ ಯೋಧರು ಮತ್ತು ಎಲ್ಲರಿಗೂ ನಾನು ಅಪಾರವಾಗಿ ಕೃತಜ್ಞನಾಗಿದ್ದೇನೆ. ಇಂದು ಯುಪಿ ದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ನೀಡಿದೆ. ಎಲ್ಲರಿಗೂ ಲಸಿಕೆ, ಉಚಿತ ಲಸಿಕೆ ಸರ್ಕಾರದ ಗುರಿ. ಇದನ್ನು ಮಾಡಲಾಗುತ್ತಿದೆ," ಎಂದು ಪ್ರಧಾನಿ ತಿಳಿಸಿದ್ದಾರೆ.

ಕೋವಿಡ್‌ ಅಲೆಯ ಮಧ್ಯೆ ಕನ್ವರ್‌ ಯಾತ್ರೆ ನಡೆಸಲು ಅನುಮತಿ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿ ನೋಟಿಸ್‌ ಜಾರಿ ಮಾಡಿದ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ ಯುಪಿ ಸರ್ಕಾರವನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲದೇ ಉತ್ತರ ಪ್ರದೇಶದ ಕೊರೊನಾ ನಿರ್ವಹಣೆಯನ್ನು ಅಲ್ಲಿನ ಅನೇಕ ಬಿಜೆಪಿ ಶಾಸಕರು ಟೀಕಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಇದುವರೆಗೆ 17 ಲಕ್ಷ ಕೋವಿಡ್ -19 ಪ್ರಕರಣಗಳು ಹಾಗೂ 22,704 ಸಾವುಗಳು ವರದಿಯಾಗಿವೆ. ಅಧಿಕೃತವಾಗಿ, ಕೇವಲ 1,428 ಸಕ್ರಿಯ ಪ್ರಕರಣಗಳಿವೆ

(ಒನ್‌ಇಂಡಿಯಾ ಸುದ್ದಿ)

English summary
Uttar Pradesh's handling of the second wave of COVID-19 cases was "unparalleled", Prime Minister Narendra Modi declared Thursday morning during a visit to his constituency of Varanasi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X