ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೂಟ್ಯೂಬ್ ನೋಡುತ್ತಾ ಹೆರಿಗೆಗೆ ಮುಂದಾಗಿ ತಾಯಿ-ಮಗು ಸಾವು

|
Google Oneindia Kannada News

ಲಖನೌ (ಉತ್ತರಪ್ರದೇಶ), ಮಾರ್ಚ್ 12: ಅವಿವಾಹಿತೆ ಆಗಿದ್ದ ಇಪ್ಪತ್ತಾರು ವರ್ಷದ ಗರ್ಭಿಣಿಯೊಬ್ಬಳು ತನ್ನ ಬಾಡಿಗೆ ಮನೆಯಲ್ಲಿ ಯೂಟ್ಯೂಬ್ ನೋಡುತ್ತಾ ತಾನೇ ಹೆರಿಗೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಮೃತಪಟ್ಟು, ಗಂಡು ಮಗು ಕೂಡ ಸಾವನ್ನಪ್ಪಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಿಲಂದ್ ಪುರ್ ಪ್ರದೇಶದ ಕಂಟೋನ್ಮೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತನಗೆ ವಿವಾಹ ಆಗಿಲ್ಲ. ಈ ವಿಚಾರ ಹೊರಗೆ ಗೊತ್ತಾದರೆ ಸಮಾಜದಲ್ಲಿ ಮರ್ಯಾದೆ ಹೋಗುತ್ತದೆ ಎಂಬ ಆತಂಕದಲ್ಲಿ ಹೀಗೆ ಮಾಡಿರಬಹುದು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

107ನೇ ವಯಸ್ಸಿನಲ್ಲಿ ಯೂಟ್ಯೂಬ್ ಸ್ಟಾರ್ ಆಗಿದ್ದ ಆಂಧ್ರದ ಅಜ್ಜಿ ಇನ್ನಿಲ್ಲ107ನೇ ವಯಸ್ಸಿನಲ್ಲಿ ಯೂಟ್ಯೂಬ್ ಸ್ಟಾರ್ ಆಗಿದ್ದ ಆಂಧ್ರದ ಅಜ್ಜಿ ಇನ್ನಿಲ್ಲ

ಆಕೆ ವಾಸವಿದ್ದ ಕೋಣೆಯಿಂದ ರಕ್ತವು ಹೊರಗೆ ಹರಿದು ಬರುತ್ತಿರುವುದನ್ನು ಕಂಡು ನೆರೆಹೊರೆಯವರು ಮನೆ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಮಹಿಳೆ ಹಾಗೂ ನವಜಾತ ಶಿಶು ಸಾವನ್ನಪ್ಪಿರುವುದು ಕಂಡುಬಂದಿದೆ.

UP Woman attempts to deliver baby watching YouTube, both die

ತಕ್ಷಣವೇ ಪೊಲೀಸರಿಗೆ ಮಾಹಿತಿ ಮುಟ್ಟಿಸಲಾಗಿದೆ. ಅಕೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆ ಸ್ಮಾರ್ಟ್ ಫೋನ್ ನಲ್ಲಿ, ಸ್ವಂತವಾಗಿ ಹೆರಿಗೆ ಮಾಡಿಕೊಳ್ಳುವುದು ಹೇಗೆ ಮತ್ತು ಇತರ ಸುರಕ್ಷಿತ ಹೆರಿಗೆ ವಿಧಾನದ ಬಗ್ಗೆ ಯೂಟ್ಯೂಬ್ ನಲ್ಲಿ ವಿಡಿಯೋ ನೋಡಿರುವುದು ಕಂಡುಬಂದಿದೆ. ಜತೆಗೆ ಮಹಿಳೆಯ ಶವದ ಬಳಿ ಕತ್ತರಿ, ಬ್ಲೇಡ್ ಹಾಗೂ ದಾರ ಸಿಕ್ಕಿದೆ.

English summary
A 26-year-old unmarried full-term pregnant woman attempted self-delivery at her rented accommodation here while watching a child delivery video on YouTube. Both, the woman and her child, a boy, died in the process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X