ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಪ್ರತಿಭಟನೆ, ಹಿಂಸಾಚಾರ ನಂತರ 337 ಮಂದಿ ಅರೆಸ್ಟ್

|
Google Oneindia Kannada News

ಲಕ್ನೋ ಜೂನ್ 14: ಅಮಾನತುಗೊಂಡಿರುವ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಪ್ರತಿಭಟನೆಯ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರೆದಿದೆ. ಪೊಲೀಸರು ಇದುವರೆಗೆ 13 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಮತ್ತು 09 ಜಿಲ್ಲೆಗಳಲ್ಲಿ ಹಿಂಸಾಚಾರದಲ್ಲಿ 337 ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಯಾಗ್‌ರಾಜ್ ಮತ್ತು ಸಹರಾನ್‌ಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ, ಟಿವಿ ಸಂದರ್ಶನದ ವೇಳೆ ಪ್ರವಾದಿ ಮಹಮ್ಮದ್ ವಿರುದ್ಧ ಅವಹೆಳನಕಾರಿ ಹೇಳಿಕೆ ನೀಡಿದ್ದರು. ಇವರ ಹೇಳಿಕೆ ವಿಡಿಯೋ ವೈರಲ್ ಆಗಿ ದೇಶ ವಿದೇಶದಲ್ಲಿ ವಿರೋಧ ವ್ಯಕ್ತವಾಗಿದೆ. ಇಸ್ಲಾಮಿಕ್ ರಾಷ್ಟ್ರಗಳ ಒತ್ತಡ ಹೆಚ್ಚಾಗುತ್ತಿದ್ದಂತೆ ಬಿಜೆಪಿ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತು. ಆದರೆ ಅವರ ಬಂಧನಕ್ಕೆ ಒತ್ತಾಯಿಸಿ ಹಲವೆಡೆ ತೀವ್ರ ಪ್ರತಿಭಟನೆಗಳು ನಡೆದಿವೆ. ಜೊತೆಗೆ ಸರ್ಕಾರಕ್ಕೆ ನೂಪುರ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ.

ನೂಪುರ್ ಶರ್ಮಾ ಹಾಗೂ ಟ್ವಿಟ್ ಮಾಡಿದ್ದ ನವೀನ್ ಜಿಂದಾಲ್ ಅವರನ್ನು ಈ ಘಟನೆಗೆ ಅಮಾನತುಗೊಳಿಸಿದೆ. ಜೊತೆಗೆ ಪ್ರತಿಭಟನೆ ತೀವ್ರತೆಗೆ ವಿಪಕ್ಷಗಳ ಕೈವಾಡವಿದೆ ಎಂದು ದೂಷಿಸಿದೆ.

ಯುಪಿ ಪ್ರತಿಭಟನೆಗೆ ಸಂಬಂಧಿಸಿದಂತೆ 337 ಆರೋಪಿಗಳು ಅರೆಸ್ಟ್

ಯುಪಿ ಪ್ರತಿಭಟನೆಗೆ ಸಂಬಂಧಿಸಿದಂತೆ 337 ಆರೋಪಿಗಳು ಅರೆಸ್ಟ್

ಮಂಗಳವಾರ ಜೂನ್ 14 ರಂದು ಬೆಳಿಗ್ಗೆ 7 ಗಂಟೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು, 'ರಾಜ್ಯದ 09 ಜಿಲ್ಲೆಗಳಿಂದ 337 ಜನರನ್ನು ಬಂಧಿಸಲಾಗಿದೆ ಮತ್ತು ಒಂಬತ್ತು ಜಿಲ್ಲೆಗಳಲ್ಲಿ ಈ ಸಂಬಂಧ 13 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ' ಎಂದು ಹೇಳಿದರು.

ನಗರದಲ್ಲಿ 18 ಕಡೆ ಪ್ರತಿಭಟನೆ

ನಗರದಲ್ಲಿ 18 ಕಡೆ ಪ್ರತಿಭಟನೆ

ಜಿಲ್ಲಾವಾರು ವಿವರಗಳನ್ನು ನೀಡಿದ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು, ಇಂದು ಬೆಳಿಗ್ಗೆ 7 ಗಂಟೆಯವರೆಗೆ, ಪ್ರಯಾಗ್‌ರಾಜ್‌ನಲ್ಲಿ 92, ಸಹರಾನ್‌ಪುರದಲ್ಲಿ 83, ಹತ್ರಾಸ್‌ನಲ್ಲಿ 52, ಮೊರಾದಾಬಾದ್‌ನಲ್ಲಿ 40, ಫಿರೋಜಾಬಾದ್ ಮತ್ತು ಅಂಬೇಡ್ಕರ್ ನಗರದಲ್ಲಿ 18 ಪ್ರತಿಭಟನೆಗಳು ನಡೆದಿವೆ. ಜೂನ್ 10 ರಂದು 41 ಮಂದಿಯನ್ನು ಬಂಧಿಸಲಾಗಿದೆ.

ಆಸ್ತಿ ಮುಟ್ಟುಗೋಲು

ಆಸ್ತಿ ಮುಟ್ಟುಗೋಲು

ಈ ಹಿಂದೆ ಜೂನ್ 12 ರಂದು 304 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ತಿಳಿಸಿದ್ದರು. ಈ ಪೈಕಿ ಪ್ರಯಾಗ್‌ರಾಜ್‌ನಿಂದ 91, ಸಹರಾನ್‌ಪುರದಿಂದ 71, ಹತ್ರಾಸ್‌ನಿಂದ 51, ಮೊರಾದಾಬಾದ್‌ನಿಂದ 34, ಫಿರೋಜಾಬಾದ್‌ನಿಂದ 15 ಮತ್ತು ಅಂಬೇಡ್ಕರ್ ನಗರದಿಂದ 34 ಜನರನ್ನು ಬಂಧಿಸಲಾಗಿದೆ. ಜೂನ್ 10 ರಂದು ಇಡೀ ರಾಜ್ಯದಲ್ಲಿ ನಡೆದ ಹಿಂಸಾತ್ಮಕ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿ ಕಾನ್ಪುರ-ಅರೇಂಜ್ಮೆಂಟ್ ತಿಳಿಸಿದ್ದರು. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಉಂಟಾದ ಹಾನಿಯನ್ನು ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಮರುಪಡೆಯಲಾಗುತ್ತದೆ ಎಂದಿದ್ದಾರೆ.

ದುಷ್ಕರ್ಮಿಗಳು ಗಲಾಟೆ

ದುಷ್ಕರ್ಮಿಗಳು ಗಲಾಟೆ

ಇದು ಜೂನ್ 17ರ ಶುಕ್ರವಾರ ಮತ್ತೊಮ್ಮೆ ಯುಪಿ ಪೊಲೀಸರಿಗೆ ಸವಾಲಾಗಬಹುದು. ವಾಸ್ತವವಾಗಿ ಕಳೆದ ಎರಡು ಶುಕ್ರವಾರದಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾತಾವರಣವನ್ನು ಕೆಡಿಸುವ ಯತ್ನ ನಡೆದಿದೆ. ಕಾನ್ಪುರ, ಪ್ರಯಾಗ್‌ರಾಜ್ ಮತ್ತು ಸಹರಾನ್‌ಪುರದಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ದುಷ್ಕರ್ಮಿಗಳು ಗಲಾಟೆ ನಡೆಸಿದ್ದಾರೆ. ಅಂತಹವರನ್ನು ಮೊದಲೇ ಗುರುತಿಸುವಂತೆ ಡಿಜಿಪಿ ಕೇಂದ್ರ ಕಚೇರಿಯಿಂದ ಸೂಚನೆ ನೀಡಲಾಗಿದೆ. ಇನ್ನು, ಯಾರಾದರೂ ಗಲಾಟೆ ಮಾಡಿದರೆ, ಅಂತಹ ಅರಾಜಕತೆಗಳನ್ನು ಗುರುತಿಸಲು ಸುಲಭವಾಗುವಂತೆ ವೀಡಿಯೊಗ್ರಫಿ ಮತ್ತು ಫೋಟೋಗ್ರಫಿಯನ್ನು ಸಹ ಮಾಡಲಾಗುತ್ತದೆ.

Recommended Video

Yogi ಸರ್ಕಾರದ ಬುಲ್ಡೋಜರ್ ಆಟಾಟೋಪಕ್ಕೆ ಬ್ರೇಕ್ ಹಾಕುತ್ತಾ ಹೈಕೋರ್ಟ್ | *Politics | OneIndia Kannada

English summary
Nupur Sharma controversy: UP police have so far registered 13 FIRs and arrested 337 accused in violence in nine districts. These arrests are said to be highest in Prayagraj and Saharanpur districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X