ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು: ಪಿಎಫ್‌ಐ ಸದಸ್ಯರ ಬಂಧನ

|
Google Oneindia Kannada News

ಲಕ್ನೋ, ಫೆಬ್ರವರಿ 17: ದೇಶದ ವಿವಿಧ ಭಾಗಗಳಲ್ಲಿ ಮತ್ತು ಹಿಂದೂ ಸಂಘಟನೆಯ ಮುಖಂಡರನ್ನು ಗುರಿಯನ್ನಾಗಿರಿಸಿಕೊಂಡು ಸರಣಿ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಇಬ್ಬರು ಸದಸ್ಯರನ್ನು ಉತ್ತರ ಪ್ರದೇಶದ ಎಸ್‌ಟಿಎಫ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೇರಳದ ನಿವಾಸಿಗಳಾದ ಅನ್ಸದ್ ಬದ್ರುದ್ದೀನ್ ಮತ್ತು ಫಿರೋಜ್ ಖಾನ್ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ದಾಳಿಗಳನ್ನು ನಡೆಸಲು ಸದಸ್ಯರನ್ನು ನೇಮಿಸಿಕೊಳ್ಳುತ್ತಿದ್ದರು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಖಾಸಗಿ ಕಂಪೆನಿಗಳಿಗೆ ವಾಹನ ದತ್ತಾಂಶ ನೀಡಿ 100 ಕೋಟಿ ರೂ ಸಂಗ್ರಹ: ನಿತಿನ್ ಗಡ್ಕರಿಖಾಸಗಿ ಕಂಪೆನಿಗಳಿಗೆ ವಾಹನ ದತ್ತಾಂಶ ನೀಡಿ 100 ಕೋಟಿ ರೂ ಸಂಗ್ರಹ: ನಿತಿನ್ ಗಡ್ಕರಿ

ಬಂಧಿತರಿಂದ ಸ್ಫೋಟಕಗಳು, ಡಿಟೋನೇಟರ್‌ಗಳು, ಶಸ್ತ್ರಾಸ್ತ್ರಗಳು ಮತ್ತು ವಿವಿಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ವಸಂತ ಪಂಚಮಿ ದಿನದಂದು ದೇಶದ ವಿವಿಧ ಭಾಗಗಳಲ್ಲಿ ದಾಳಿನಡೆಸಲು ಹಾಗೂ ಹಿಂದೂ ಸಂಘಟನೆಗಳ ನಾಯಕರನ್ನು ಹತ್ಯೆ ಮಾಡಲು ಅವರು ಸಂಚು ರೂಪಿಸುತ್ತಿದ್ದರು. ನಿರ್ದಿಷ್ಟ ಸಮುದಾಯವೊಂದರ ಯುವಕರನ್ನು ಬ್ರೈನ್‌ವಾಶ ಮಾಡುವ ಮೂಲಕ ದಾಳಿಗೆ ತರಬೇತಿ ನೀಡುವುದು ಅವರ ಮುಖ್ಯ ಗುರಿಯಾಗಿತ್ತು ಎಂದು ಅವರು ಹೇಳಿದ್ದಾರೆ.

UP STF Police Arrests 2 PFI Members With Exposive Devices, Planned Basanth Panchami Attacks

ಅವರಿಂದ ಹತ್ತಾರು ರೈಲ್ವೆ ಟಿಕೆಟ್‌ಗಳು, ನಾಲ್ಕು ಎಟಿಎಂ ಕಾರ್ಡ್‌ಗಳು, ಎರಡು ಚಾಲನಾ ಪರವಾನಗಿ, ಮೆಟ್ರೋಲ ರೈಲು ಕಾರ್ಡ್, ಪೆನ್‌ಡ್ರೈವ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಅನ್ಸದ್ ಮತ್ತು ಫಿರೋಜ್ ಇಬ್ಬರೂ ಮಾರ್ಷಿಯಲ್ ಆರ್ಟ್ಸ್‌ನಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ. ಮುಂದಿನ ಕೆಲವು ತಿಂಗಳಲ್ಲಿ ದೇಶಾದ್ಯಂತ ಕನಿಷ್ಠ 20-25 ಆರೆಸ್ಸೆಸ್ ನಾಯಕರನ್ನು ಹತ್ಯೆ ಮಾಡುವ ಗುರಿ ತಮ್ಮದಾಗಿತ್ತು ಎಂದು ಅವರು ತಪ್ಪೊಪ್ಪಿಕೊಂಡಿದ್ದಾರೆ.

English summary
Uttar Pradesh STF police on Tuesday arrested 2 PFI members with huge explosives. They planned to execute attacks acorss India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X